Bajpe: ಹೈಟೆಕ್‌ ಆಗಲು ಕಾಯುತ್ತಿದೆ ಬಜಪೆ ಮಾರ್ಕೆಟ್‌

ಬಜಪೆ ಪೇಟೆ ರಸ್ತೆ ಕಾಂಕ್ರೀಟ್‌, ವಿಸ್ತರಣೆ ಆಯ್ತು, ಬಸ್‌ ನಿಲ್ದಾಣ ಸಿದ್ಧವಾಯಿತು; ಮಾರುಕಟ್ಟೆ ಆಧುನೀಕರಣ, ಒಳಚರಂಡಿ ಯೋಜನೆ ಕಾಮಗಾರಿ ಚುರುಕಿಗೆ ಆಗ್ರಹ

Team Udayavani, Nov 13, 2024, 12:58 PM IST

2

ಬಜಪೆ: ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಪೇಟೆಯ ಒಳಗಿನ ರಸ್ತೆಗ ಕಾಂಕ್ರೀಟ್‌, ವಿಸ್ತರಣೆ ಕಾಮಗಾರಿಗಳು ವೇಗವಾಗಿ ಪೂರ್ಣಗೊಳ್ಳುತ್ತಿವೆ. ಹೊಸ ಬಸ್‌ ನಿಲ್ದಾಣ ಕಟ್ಟಡದ ಕೆಲವೊಂದು ಸಣ್ಣಪುಟ್ಟ ಕಾರ್ಯಗಳು ಬಾಕಿ ಉಳಿದಿವೆ. ಈ ನಡುವೆ ಇಲ್ಲಿನ ಮಾರುಕಟ್ಟೆ ಆಧುನೀಕರಣ ಹಾಗೂ ಚರಂಡಿ ಯೋಜನೆ ಕಾಮಗಾರಿಗಳು ಬಾಕಿ ಉಳಿದಿವೆ. ಇಡೀ ಬಜಪೆ ಪಟ್ಟಣಕ್ಕೆ ಹೊಸ ಕಳೆ ಬರಬೇಕಾದರೆ ಈ ಕೆಲಸಗಳನ್ನು ತ್ವರಿತವಾಗಿ ನಡೆಸಬೇಕು ಎಂಬ ಆಗ್ರಹ ಜನರಿಂದ ಕೇಳಿಬರುತ್ತಿದೆ.

ಐದು ವರ್ಷದ ಹಿಂದೆಯೇ ಸರ್ವ ಸಿದ್ಧತೆ
ಬಜಪೆ ಮಾರುಕಟ್ಟೆಗೆ ಹೈಟೆಕ್‌ ರೂಪವನ್ನು ಒದಗಿಸಲು ಬಜಪೆ ಗ್ರಾಮ ಪಂಚಾಯತ್‌ ಇರುವಾಗಲೇ ರೂಪುರೇಷೆ ಹಾಕಲಾಗಿತ್ತು. ಸುಮಾರು 17.95 ಕೋಟಿ ರೂ. ಮೊತ್ತದ ಅನುದಾನದಲ್ಲಿ ನಾಲ್ಕು ಮಹಡಿಗಳ ಹೈಟೆಕ್‌ ಮಾರುಕಟ್ಟೆಗೆ ನೀಲ ನಕ್ಷೆ ಸಹಿತ ಯೋಜನೆಗೆ ಅಂದಿನ ಪಿಡಿಒ ಆಗಿದ್ದ ಸಾಯೀಶ್‌ ಚೌಟ ಅವರು ಅದಕ್ಕೆ ಬೇಕಾದ ದಾಖಲೆ ಸಹಿತ 2018-19ರಲ್ಲಿ ಎಲ್ಲ ಸಿದ್ಧತೆಯನ್ನು ಮಾಡಿದ್ದರು. ಅದರೆ ಗ್ರಾಮಾಭಿವೃದ್ದಿ ಇಲಾಖೆಯಲ್ಲಿ ಇದಕ್ಕೆ ಅನುದಾನ ಒದಗಿಸಲು ಕೆಲವೊಂದು ಅಡೆತಡೆಯ ಕಾರಣದಿಂದಾಗಿ ಹಾಗೂ ಬಳಿಕ ಬಜಪೆ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ್ದ ಕಾರಣ ಅದು ಅಲ್ಲಿಯೇ ಉಳಿಯಿತು.

ಯಾವ ಮಹಡಿಯಲ್ಲಿ ಏನೇನು?
ನಾಲ್ಕು ಮಹಡಿಗಳ ಕಟ್ಟಡದ ನೆಲ ಮಹಡಿಯಲ್ಲಿ ತರಕಾರಿ, ಮೀನು, ಒಣಮೀನು ಮಳಿಗೆಗಳು, ಬೇಸ್‌ಮೆಂಟ್‌ನಲ್ಲಿ ಕಾರು ಮತ್ತು ಬೈಕ್‌ ಪಾರ್ಕಿಂಗ್‌, ಒಂದನೇ ಮಹಡಿನಲ್ಲಿ ವಾಣಿಜ್ಯ ಅಂಗಡಿಗಳು, 2ನೇ ಮಹಡಿಯಲ್ಲಿ ಗೋದಾಮುಗಳು, ಮೂರನೇ ಮಹಡಿಯಲ್ಲಿ ಕಚೇರಿ ಸಭಾಭವನ ಹಾಗೂ ನಾಡಕಚೇರಿ, ಗ್ರಾಮಕರಣಿಕರ ಕಚೇರಿ, ನಾಲ್ಕನೇ ಮಹಡಿಯಲ್ಲಿ ಸಭಾಭವನ ಇರಬೇಕು ಎಂದು ನೀಲನಕ್ಷೆ ತಯಾರಿಸಲಾಗಿತ್ತು. ಈಗಾಗಲೇ ತಯಾರು ಪಡಿಸಿದ್ದ ಅಂದಿನ ಈ ನೀಲ ನಕ್ಷೆ ಹಾಗೂ ಯೋಜನೆಯನ್ನು ಪ. ಪಂ.ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದುವರಿಸುವ ಕೆಲಸ ಈಗ ಆಗಬೇಕಾಗಿದೆ.

ಗ್ರಾಮಕರಣಿಕ ಕಚೇರಿಗೂ ಬೇಕು ಹೊಸ ರೂಪ
ಬಜಪೆ ಪೇಟೆಯೇ ಅಭಿವೃದ್ಧಿಗೊಳ್ಳುತ್ತಿರುವಾಗ ರಸ್ತೆಯ ಪಕ್ಕದಲ್ಲಿಯೇ ಇರುವ ಗ್ರಾಮ ಆಡಳಿತಾಧಿಕಾರಿ ಕಚೇರಿ ಮಾತ್ರ ಹಾಗೆಯೇ ಉಳಿದಿರುವುದು ಅಚ್ಚರಿ ಮೂಡಿಸಿದೆ.

ಹೆಂಚಿನ ಛಾವಣಿಯ ಈ ಕಟ್ಟಡ ಇದಾಗಿದ್ದು, ಮಾರುಕಟ್ಟೆ ಪ್ರವೇಶದ ದ್ವಾರದಲ್ಲೇ ಇದೆ. ಈ ಕಟ್ಟಡದ ಹಿಂದಿನ ಭಾಗದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಇದೆ. ಇದರ ಒಂದು ಬದಿಯಲ್ಲಿ ಮಾರುಕಟ್ಟೆಯ ಕೆಲ ಅಂಗಡಿಗಳು ಇದ್ದು, ಎದುರಿನ ಭಾಗ ಕಾಂಕ್ರೀಟ್‌ಗೊಂಡ ರಸ್ತೆಯ ಅಂಚಿನಲ್ಲಿದೆ. ಈಗ ಇಲ್ಲಿಗೆ ಬರಲು ಜನರಿಗೆ ಸಮಸ್ಯೆಯಾಗಿದೆ. ಗ್ರಾಮಕರಣಿಕರ ಹಾಗೂ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೂ ಹೈಟೆಕ್‌ ರೂಪ ನೀಡಬೇಕಾಗಿದೆ.

ಬಜಪೆ ಗ್ರಾಮ ಪಂಚಾಯತ್‌ನ 2018-19ರಲ್ಲಿ ರೂಪಿಸಲಾದ ಹೈಟೆಕ್‌ ಮಾರುಕಟ್ಟೆ ನಕ್ಷೆಯಲ್ಲಿ ಮೂರನೇ ಮಹಡಿಯಲ್ಲಿ ಕಂದಾಯ ಇಲಾಖೆಯ ನಾಡಕಚೇರಿ ಹಾಗೂ ಗ್ರಾಮ ಕರಣಿಕರ ಕಚೇರಿಯ ಬಗ್ಗೆಯೂ ನಮೂದಿಸಲಾಗಿದೆ.

ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಬಜಪೆ ಪಟ್ಟಣ ಪಂಚಾಯತ್‌ನ ಒಮ್ಮತದ ನಿರ್ಧಾರ ಅಗತ್ಯವಾಗಿದೆ.

ಸರಕಾರದ ಅನುದಾನದಲ್ಲಿಯೇ ಈ ಹೈಟೆಕ್‌ ಮಾರುಕಟ್ಟೆ ಹಾಗೂ ಗ್ರಾಮ ಕರಣಿಕರ ಕಚೇರಿಗೆ ಹೊಸ ಕಟ್ಟಡ ನಿರ್ಮಿಸಲು ಹಲವಾರು ವರ್ಷಗಳೇ ಬೇಕಾಗಬಹುದು. ಹೀಗಾಗಿ ಕಂಪನಿಗಳ ಸಿಎಸ್‌ಆರ್‌ ಫ‌ಂಡ್‌ ನೆರವು ಪಡೆಯಬಹುದು ಎಂಬ ಅಭಿಪ್ರಾಯವಿದೆ.

ಹಿಂದೆ ಕಂಟ್ರೋಲ್‌ ರೂಮ್‌ ಆಗಿತ್ತು
ಈಗಿನ ಗ್ರಾಮಕರಣಿಕರ ಕಚೇರಿ ಹಿಂದೆ ಕಂಟ್ರೋಲ್‌ ರೂಂ ಆಗಿತ್ತು. ಹಿಂದೆ ವಿಮಾನ ನಿಲ್ದಾಣ ಬಜಪೆಯಲ್ಲೇ ಇದ್ದ ಕಾರಣ, ವಿಮಾನ ನಿಲ್ದಾಣಕ್ಕೆ ಅತಿ ಪ್ರಮುಖ ಹಾಗೂ ಪ್ರತಿಷ್ಠಿತ ವ್ಯಕ್ತಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಬಂದಾಗ ಅವರ ಬಗ್ಗೆ ಮಾಹಿತಿಯನ್ನು ಈ ಕಂಟ್ರೋಲ್‌ ರೂಮ್‌ಗೆ ಬರುತ್ತಿತು. ಅಗ ಅವರನ್ನು ಸ್ವಾಗತಿಸಲು ಇಲ್ಲಿಂದ ಗ್ರಾಮಕರಣಿಕರು ಹೋಗಬೇಕಿತ್ತು. ಈಗಲೂ ಅದರ ಯಾಂಟೆನಾ ಹಾಗೂ ಸಾಧನ ಉಪಕರಣಗಳನ್ನು ಅಲ್ಲಿ ಕಾಣಬಹುವುದು.

ಪಾರ್ಕಿಂಗ್‌, ತ್ಯಾಜ್ಯ ರಾಶಿ ಸಮಸ್ಯೆ
ಮಾರುಕಟ್ಟೆಯ ಪಕ್ಕದಲ್ಲಿಯೇ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್‌ ಮಾಡುತ್ತಿದೆ.

ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಜತೆಗೆ ಅಸಹ್ಯದ ವಾತಾವರಣ ನಿರ್ಮಾಣವಾಗುತ್ತದೆ. ಹೈಟೆಕ್‌ ಮಾರುಕಟ್ಟೆ ಕಟ್ಟಡ ನಿರ್ಮಾಣದಿಂದ ಈ ಎರಡು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇದೆ.

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.