BBK11: ನಿನ್ನೆ ಅಣ್ಣಾ ಎಂದು ಅತ್ತಿದ್ದ ಚೈತ್ರಾ, ಇಂದು ಶಿಶಿರ್‌ ಬೆನ್ನಿಗೆ ಚೂರಿ ಹಾಕಿದ್ರಾ?

Team Udayavani, Nov 13, 2024, 5:36 PM IST

BBK11: ನಿನ್ನೆ ಅಣ್ಣಾ ಎಂದು ಅತ್ತಿದ್ದ ಚೈತ್ರಾ, ಇಂದು ಶಿಶಿರ್‌ ಬೆನ್ನಿಗೆ ಚೂರಿ ಹಾಕಿದ್ರಾ?

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada-11) ಮನೆಯಲ್ಲಿ ವಾರದ ಟಾಸ್ಕ್‌ಗಳಿಗಾಗಿ ಸ್ಪರ್ಧಿಗಳು ಜೋಡಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಬಿಗ್‌ ಬಾಸ್‌ ಕೊಟ್ಟಿರುವ ಟಾಸ್ಕ್‌ನಲ್ಲಿ ಜಿದ್ದಾಜಿದ್ದಿಯ ಹೋರಾಟವನ್ನು ಮಾಡಲಿದ್ದಾರೆ.

ಜೋಡಿಗಳಿದ್ದರೂ ಬಿಗ್‌ ಬಾಸ್‌ ಆಟದಲ್ಲಿ ಟ್ವಿಸ್ಟ್‌ ತಂದಿದ್ದಾರೆ. ತಮ್ಮ ಇಬ್ಬರ ಪೈಕಿ ಒಬ್ಬರನ್ನು ನಾಮಿನೇಟ್‌ ಮಾಡುವ ಸವಾಲಿನಲ್ಲಿ ಕೆಲ ಸ್ಪರ್ಧಿಗಳು ಆತಂತ್ರಕ್ಕೆ ಸಿಲುಕಿದ್ದಾರೆ. ಇನ್ನು ಕೆಲವರು ತಾವೇ ಉಳಿಯಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಈ ವಾರ 10 ಮಂದಿ ಮನೆಯಿಂದ ಆಚೆ ಹೋಗಲು ನಾಮಿನೇಟ್‌ ಆಗಿದ್ದಾರೆ.

ಮನೆಯ ಕ್ಯಾಪ್ಟನ್‌ ಆಗಿರುವ ತ್ರಿವಿಕ್ರಮ್‌ ಯಾರೊಂದಿಗೂ ಜೋಡಿ ಮಾಡಿಕೊಂಡಿಲ್ಲ. ಅವರು ಟಾಸ್ಕ್‌ ಉಸ್ತುವಾರಿಯನ್ನು ವಹಿಸಲಿದ್ದಾರೆ. ಬಿಗ್‌ ಬಾಸ್‌ ಕನ್ಫೆಷನ್‌ ಕೋಣೆಗೆ ಮಹಿಳಾ ಸ್ಪರ್ಧಿಗಳನ್ನು ಕರೆದು “ನೀವು ನಿಮ್ಮ ಜೋಡಿ ಸದಸ್ಯನ ಜತೆಯನ್ನು ಬಿಟ್ಟು ತ್ರಿವಿಕ್ರಮ್‌ ಜತೆ ಜೋಡಿಯಾಗಲು ಬಯಸುತ್ತೀರಾ” ಎಂದು ಕೇಳಲಾಗಿದೆ.

ಇದಕ್ಕೆ ಚೈತ್ರಾ ಅವರು ಶಿಶಿರ್‌ ಅವರ ಜತೆಗಿನ ಜೋಡಿಯನ್ನು ಮುರಿದು ತ್ರಿವಿಕ್ರಮ್‌ ಜತೆ ಜೋಡಿ ಆಗಲು ಮುಂದಾಗಿದ್ದಾರೆ. ತ್ರಿವಿಕ್ರಮ್‌ ದೈಹಿಕವಾಗಿ, ಮಾನಸಿಕವಾಗಿ ಬಹಳ ಗಟ್ಟಿ ಆಗಿರುವ ವ್ಯಕ್ತಿ ಎಂದು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ತ್ರಿವಿಕ್ರಮ್‌ ಜತೆ ಜೋಡಿ ಆಗುವ ವಿಚಾರವನ್ನು ಚೈತ್ರಾ ಅವರು ಎಲ್ಲರ ಮುಂದೆ ಬಂದು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಶಿಶಿರ್‌ “ನಾನೇನು ಕಡ್ಲೇಪುರಿ ತಿಂತೀನಾ ಅಲ್ಲಿ. ಇಲ್ಲಿ ಬಂದು ದೈಹಿಕವಾಗಿ, ಮಾನಸಿಕವಾಗಿ ಬಂದು ಮಾತನಾಡ್ತಾರೆ. ನಾಮಿನೇಷನ್‌ ಅಂಥ ಬಂದಾಗ ಅಯ್ಯೋ ಅಮ್ಮ ಅಂಥ ಬಂದು ಬಿಡ್ತಾರೆ” ಎಂದು ಗರಂ ಆಗಿದ್ದಾರೆ.

ಇದಕ್ಕೆ ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಇಡೀ ವಾರದ ಟಾಸ್ಕ್‌ನಿಂದ ಆಚೆ ಇಡುತ್ತಾರೆ ಅಂಥ ದೇವ್ರಾಣೆ ಗೊತ್ತಿರಲಿಲ್ಲ ಅಣ್ಣಾ ಅಂಥ ತಲೆ ಮುಟ್ಟಿ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

12 ವರ್ಷದಿಂದ ಮಣ್ಣು ಹೊತ್ತಿರೋ ನಾವಲ್ಲ ಆ್ಯಕ್ಟರ್ ಗಳು. ಇಲ್ಲಿದ್ದಾರೆ ನೋಡಿ ದೊಡ್ಡ ಆ್ಯಕ್ಟರ್ ಗಳು ಎಂದು ಶಿಶಿರ್‌ ಗರಂ ಆಗಿದ್ದಾರೆ.

ನಿನ್ನೆ ನಾಮಿನೇಷನ್‌ ವಿಚಾರದಲ್ಲಿ ಚೈತ್ರಾ ಅವರಿಗೋಸ್ಕರ ಶಿಶಿರ್‌ ತಮ್ಮನ್ನು ತಾವೇ ನಾಮಿನೇಟ್‌ ಆಗಿದ್ದರು.  ಯಾರೆಲ್ಲ ಹಂಗಿಸಿದ್ದಾರೆ ಅವರಿಗೆಲ್ಲ ಉತ್ತರ ಕೊಟ್ಟು ನಿನ್ನನ್ನು ನೀನು ಪ್ರೂವ್ ಮಾಡು ಎಂದು ಶಿಶಿರ್ ಚೈತ್ರಾಗೆ ಧೈರ್ಯ ತುಂಬಿದ್ದರು.

ಈ ಸಂಚಿಕೆ ಬುಧವಾರ(ನ.13ರಂದು) ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಟಾಪ್ ನ್ಯೂಸ್

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

ಬೆಂಗಳೂರಿನ ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

Bengaluru ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ

UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

PM MODI: ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನಕ್ಕೆ ಕಾಂಗ್ರೆಸ್‌ ಸಂಚು

PM MODI: ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನಕ್ಕೆ ಕಾಂಗ್ರೆಸ್‌ ಸಂಚು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ss

BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

BBK11: ಜೋಡಿ ಹಕ್ಕಿ ಅನುಷಾ-ಧರ್ಮ ನಡುವೆ ವಾಗ್ವಾದ.. ನಾನು ನಾಲಾಯಕ್‌ ಎಂದ ಕ್ಯಾಡ್ಬರಿಸ್ ಹೀರೋ

BBK11: ಜೋಡಿ ಹಕ್ಕಿ ಅನುಷಾ-ಧರ್ಮ ನಡುವೆ ವಾಗ್ವಾದ.. ನಾನು ನಾಲಾಯಕ್‌ ಎಂದ ಕ್ಯಾಡ್ಬರಿಸ್ ಹೀರೋ

BBK11: ನಾಮಿನೇಟ್ ವಿಚಾರದಲ್ಲಿ ಅಸಲಿ ಆಟ ಆಡಿದ ಬಿಗ್ ಬಾಸ್: ಇಕ್ಕಟ್ಟಿನಲ್ಲಿ ಸ್ಪರ್ಧಿಗಳು

BBK11: ನಾಮಿನೇಟ್ ವಿಚಾರದಲ್ಲಿ ಅಸಲಿ ಆಟ ಆಡಿದ ಬಿಗ್ ಬಾಸ್: ಇಕ್ಕಟ್ಟಿನಲ್ಲಿ ಸ್ಪರ್ಧಿಗಳು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

ಬೆಂಗಳೂರಿನ ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

Bengaluru ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ

UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.