Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ
Team Udayavani, Nov 13, 2024, 5:56 PM IST
ಅದೊಂದು ಪುಟ್ಟ ಊರು. ಆ ಊರಿಗೆ ಮುಕುಟದಂತಿರುವ ಪುಟ್ಟದೊಂದು ನಾ ಕಲಿತ ಸರಕಾರಿ ಶಾಲೆ. ದೊಡ್ಡ ಮಹಡಿಗಳಿಲ್ಲದಿದ್ದರೂ ಕೂಡ ಹಂಚಿನ ಕೆಳಗೆ ಕಲಿತ ಪಾಠಗಳು ಅದೆಷ್ಟೋ? ದೊಡ್ಡ ಸೌಲಭ್ಯ ಭರಿತ ಆಟದ ಮೈದಾನ ಇಲ್ಲದಿದ್ದರೂ ಕೂಡ ಸಣ್ಣದೊಂದು ಮೈದಾನದಲ್ಲಿ ಆಡಿದ ಆಟಗಳು, ಉಚಿ ತ ವಾಗಿ ಸಿಕ್ಕ ಕಡು ನೀಲಿ ಬಣ್ಣದ ಸಮವಸ್ತ್ರ ಹೊತ್ತ ಕನಸುಗಳು, ಶಿಕ್ಷಕರು ಟಸ್ ಪುಸ್ ಇಂಗ್ಲಿಷ್ ಹೇಳಿಕೊಡದಿದ್ದರೂ ಕೂಡ ಜೀವನ ಸಾಗಿಸಲು ಬೇಕಾದಷ್ಟು ಕಷ್ಟದ ಇಂಗ್ಲಿಷ್ ಹೇಳಿಕೊಟ್ಟದ್ದು ಅದೆಷ್ಟೋ?
ಉತ್ತಮ ಶಿಕ್ಷಕ ವೃಂದ, ಮಧ್ಯಾಹ್ನದ ಬಿಸಿಯೂಟ ಸೌಕರ್ಯ, ಕ್ಷೀರ ಭಾಗ್ಯ, ಉಚಿತ ಪುಸ್ತಕಗಳು,ಉಚಿತ ಸಮವಸ್ತ್ರ ಹೀಗೆ ಒಂದು ರೂಪಾಯಿಯೂ ಖರ್ಚಿಲ್ಲದೆ ಆ ಸರಕಾರಿ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿತ್ತು. ಆದರೆ ಇದೀಗ ಆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಬಂದಿದೆ. ಕಾರಣವಿಷ್ಟೇ; ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ಹಾಗಾಗಿ ಈ ಶಾಲೆಗೆ ಸರಕಾರ ನೀಡುವ ಸವಲತ್ತುಗಳನ್ನು ಹಿಂಪಡೆಯುತ್ತಿದೆ. ಇದು ಕೇವಲ ನನ್ನನೂರ ಸಮಸ್ಯೆಯಲ್ಲ ಅದೆಷ್ಟೋ ಊರುಗಳಲ್ಲಿ ಸರಕಾರಿ ಶಾಲೆಗಳು ಈಗಾಗಲೇ ಮುಚ್ಚಿದೆ. ಸರಕಾರಿ ಶಾಲೆಯಲ್ಲಿ ಕಲಿತ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಓದಿಸಬೇಕೆಂಬ ಹಠ; ಸರಕಾರಿ ಶಾಲೆಯಲ್ಲಿ ಸರಿಯಾಗಿ ವಿದ್ಯಾಭ್ಯಾಸ ಸಿಗುವುದಿಲ್ಲವೆಂಬ ಭಯ!
ಈ ಎಲ್ಲ ಕಾರಣಗಳಿಂದ ಪೋಷಕರ ಒಲವು ಖಾಸಗಿ ಶಾಲೆಯತ್ತ. ಸರಕಾರಿ ಶಾಲೆಗಳು ದಿನೇ ದಿನೇ ಉತ್ತಮವಾಗುತ್ತಿದೆ. ಅಲ್ಲದೆ ಇಂದಿಗೂ ಅದೆಷ್ಟೋ ಕಡುಬಡತನದಲ್ಲಿ ಇರುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ. ಈ ಸರಕಾರಿ ಶಾಲೆಗಳು. ಆದರೆ ಇಷ್ಟೆಲ್ಲ ಸೌಕರ್ಯ ಇರುವ ಶಾಲೆಗಳ ಬಗ್ಗೆ ಜನರಲ್ಲಿ ಅದ್ಯಾಕೋ ಎಲ್ಲಿಲ್ಲದ ತಾತ್ಸಾರ.
ಒಂದು ವೇಳೆ ಸರಕಾರಿ ಶಾಲೆಗಳು ತನ್ನ ಬಾಗಿಲನ್ನು ಮುಚ್ಚಿದ್ದಲ್ಲಿ ಮುಂದೆ ಶಿಕ್ಷಣದ ಬಗ್ಗೆ ಬೆಟ್ಟದಸ್ಟು ಕನಸು ಹೊತ್ತ ಬಡ ವಿದ್ಯಾರ್ಥಿಗಳ ಕಥೆ ಏನು ಎಂಬುದನ್ನು ಯೋಚಿಸುರೇ ಇಲ್ಲ. ಹೌದು ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಶಿಕ್ಷಣ ಅಗತ್ಯ. ಆದರೆ ಇಂಗ್ಲಿಷ್ ಶಿಕ್ಷಣವೇ ಸಕಲವು ಆಗಿ ಸರಕಾರಿ ಶಾಲೆಗಳ ಅಳಿವಿಗೆ ಕಾರಣವಾಗದೆ ಇರಲಿ ಎಂಬುವುದು ಪ್ರತಿಯೊಬ್ಬ ನಾಗರಿಕರಲ್ಲಿ ಚಿಂತನೆ ಮೂಡುವುದ ಅಗತ್ಯ.
ಇಂತಹ ಯೋಚನೆ ಮತ್ತು ಯೋಜನೆಗಳಿಂದ ಮಾತ್ರ ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಗಳನ್ನ ಉಳಿಸಲು ಸಾಧ್ಯ. ಊರಿನಲ್ಲಿರುವ ಸರಕಾರಿ ಶಾಲೆಗಳು ನಮ್ಮ ಹೆಮ್ಮೆಯಾಗಲಿ.! ಯುವ ಜನತೆಯಾದ ನಾವು ಸರಕಾರಿ ಉಚಿತವಾಗಿ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಿ ಮುಂದಿನ ಜನತೆಗೆ ಉದಾಹರಣೆಯಾಗುವ.
-ತನುಶ್ರೀ
ಎಸ್‌ಡಿಎಂ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.