Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Team Udayavani, Nov 14, 2024, 7:16 AM IST
ಮೇಷ: ಆರೋಗ್ಯ ಕಾಪಾಡಲು ಧನಾತ್ಮಕ ಚಿಂತನೆ, ಧ್ಯಾನದ ಅಭ್ಯಾಸ ಮಾಡಿ.ಉದ್ಯೋಗಸ್ಥರ ಬುದ್ಧಿಮತ್ತೆಗೆ ಸವಾಲು. ಉದ್ಯಮ ಗಳ ಬೆಳವಣಿಗೆಗೆ ಪೈಪೋಟಿಯ ಬಾಧೆ. ಹಿರಿಯರ ಹಾರೈಕೆ ಲಭಿಸುವ ದಿನ. ಮಕ್ಕಳ ಓದಿನಲ್ಲಿ ಪ್ರಗತಿ.
ವೃಷಭ: ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಸರಕಾರಿ ಅಧಿಕಾರಿಗಳಿಗೆ ಸ್ಥಳಾಂತರ ಯೋಗ. ಖಾಸಗಿ ಉದ್ಯಮಗಳ ಸ್ಥಿತಿ ಸುಧಾರಣೆ. ಶೇರು ವ್ಯವಹಾರದಲ್ಲಿ ಲಾಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರಿಗೆ ಉಲ್ಲಾಸ.
ಮಿಥುನ: ಕಾಗದದ ಹುಲಿಗಳಿಗೆ ಹೆದರದಿರಿ. ಉದ್ಯೋಗದಲ್ಲಿ ಯಶಸ್ಸಿನ ಭರವಸೆ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ. ವ್ಯವಹಾರ ಮಾತುಕತೆಯ ಮಧ್ಯಸ್ಥಿಕೆ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ನಿಲ್ಲದ ಕಿರಿಕಿರಿ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆ. ಆಭರಣಗಳಿಗೆ ಅಧಿಕ ಬೇಡಿಕೆ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಮನೆಯಲ್ಲಿ ಸಂಭ್ರಮದ ವಾತಾವರಣ.
ಸಿಂಹ: ಕುಂಠಿತವಾದಂತೆ ಕಂಡರೂ ನಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಹೆಚ್ಚು ದುಡಿಯಲು ಉತ್ತೇಜನ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ನಿರ್ಮಾಣ ಕಾಮಗಾರಿಗಳ ವೇಗ ವರ್ಧನೆ. ಮನೆಯಲ್ಲಿ ಮಂಗಲಕಾರ್ಯದ ಸಿದ್ಧತೆ.
ಕನ್ಯಾ: ಹೆಚ್ಚಿನ ಮಟ್ಟಿಗೆ ಅನುಕೂಲದ ದಿನ. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇಜನ. ಉದ್ಯಮದಲ್ಲಿ ಶೀಘ್ರ ಪ್ರಗತಿ . ಉದ್ಯೋಗಾಸಕ್ತರನ್ನು ಅರಸಿಬರುವ ಅವಕಾಶಗಳು. ಗುಣಮಟ್ಟ ಕಾಯ್ದು ಕೊಳ್ಳದ ಹೋಟೆಲುಗಳಿಗೆ ನಷ್ಟ.
ತುಲಾ: ಕಾರ್ಯಸಾಮರ್ಥ್ಯದೊಂದಿಗೆ ಸಮಯಪಾಲನೆಗೂ ಬೆಲೆ ಇರಲಿ. ಅಕಸ್ಮಾತ್ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ ವ್ಯವಹಾರ ವಿಸ್ತರಣೆ. ಅವಿವಾಹಿತರಿಗೆ ವಿವಾಹ ಯೋಗ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.
ವೃಶ್ಚಿಕ: ಮನಸ್ಸನ್ನು ಮುದುಡಿಸಿಕೊಳ್ಳದಿರಿ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸರ್ವತ್ರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ. ಸಣ್ಣ ಪ್ರಮಾಣದ ಕೃಷಿ ಕೈಗೊಳ್ಳಲು ನಿರ್ಧಾರ.
ಧನು: ವಾತಾವರಣದಲ್ಲಿ ಅಸ್ಥಿರತೆ. ಆತ್ಮೀಯ ರಿಂದ ಸಕಾಲದಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ದೀರ್ಘಕಾಲದ ಕೌಟುಂಬಿಕ ಸಮಸ್ಯೆಗೆ ಪರಿಹಾರ.
ಮಕರ: ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡವಿದ್ದರೂ ನೆಮ್ಮದಿ..ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.ಎಳನೀರು ವ್ಯಾಪಾರದಿಂದ ಇಮ್ಮಡಿ ಲಾಭ.
ಕುಂಭ: ನಿತ್ಯದ ವ್ಯವಹಾರಗಳಲ್ಲಿ ಸುಧಾರಣೆ. ಹಿತಶತ್ರುಗಳ ಬಾಧೆ ನಿವಾರಣೆ. ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ. ಕುಟುಂಬದಲ್ಲಿ ಆನಂದದ ಘಟನೆ. ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ.
ಮೀನ: ಉದ್ಯೋಗ ಸ್ಥಾನದಲ್ಲಿ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಜನಗೌರವ. ಬಂಧುವರ್ಗದಲ್ಲಿ ಶುಭಕಾರ್ಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ತಾಯಿ ಅಥವಾ ಮಾತೃಸಮಾನರ ಆರೋಗ್ಯ ಸುಧಾರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.