Udupi: ಗೀತಾರ್ಥ ಚಿಂತನೆ-93: ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Team Udayavani, Nov 14, 2024, 1:17 AM IST
ಯಾವತ್ತೂ ನಮ್ಮ ಭಾವನೆಗಳಿಗೆ ಸರಿಯಾಗಿ ನಾವು ವಾದಿಸುವುದು. ಅರ್ಜುನನಿಗಾದದ್ದೂ ಹೀಗೆಯೇ. “ಕೌರವರನ್ನು ಕೊಂದು ಸುಖಪಡುವುದೇನಿದೆ? ಒಂದೋ ಭೋಗ, ಒಂದೋ ಭಿಕ್ಷೆ (ಹಿಂದೆ ಹೇಗಿದ್ದರೂ ಭಿಕ್ಷಾಟನೆ ಅನುಭವವಿದೆಯಲ್ಲ?). ರಾಜ್ಯ ಸಿಗದಿದ್ದರೆ ಬೇಡ. ಒಂದು ವೇಳೆ ಅವರೇ ನಮ್ಮನ್ನು ಕೊಂದರೆ ಅತ್ತ ರಾಜ್ಯವೂ ಇಲ್ಲ, ಸುಖವೂ ಇಲ್ಲ, ಇತ್ತ ಪಾಪ ಮತ್ತು ಹಿರಿಯರನ್ನು ಇದಿರಿಸಿದೆವೆಂಬ ಅಪಚಾರ ಬೇರೆ. ಇದು ಸಂದಿಗ್ಧ ವಿಷಯ’ ಎನ್ನುತ್ತಾನೆ ಅರ್ಜುನ. ಮನುಷ್ಯ ಯಾರಿಗೋಸ್ಕರವಾದರೂ ಬದುಕುತ್ತಾನೆ? ಅರ್ಜುನ ಯಾರಿಗೋಸ್ಕರ ಬದುಕಿದ್ದಾನೋ ಅವರೇ ಎದುರು ನಿಂತಿದ್ದಾರೆ. ಒಂದು ವೇಳೆ ಕೌರವರೇ ಸತ್ತು ಹೋದರೆ ಲೋಕ ಶೂನ್ಯವಾಗಿ ಕಾಣುತ್ತದೆ.
ಸ್ನೇಹಿತರು, ಪಕ್ಕದ ಮನೆಯವರು, ಬಂಧುಗಳು ಹೀಗೆ ಯಾವುದಾದರೂ ಒಂದು ಬೆಂಚ್‌ಮಾರ್ಕ್‌ನಡಿ ತುಲನೆ ಮಾಡುತ್ತೇವೆ. ಇವರಿಗಿಂತ ಹೊರಗಿನ ಲೋಕದವರು ಇವರಿಗೆ ಬೇಡವೇ ಬೇಡ. ಸ್ಪರ್ಧೆ ನಡೆಸುವುದು ಸಮಾನಮನಸ್ಕರ ಜತೆ. ಕೈಕೇಯಿ ಅಷ್ಟೆಲ್ಲ ಹಠ ಹಿಡಿದದ್ದು ಕೌಸಲ್ಯೆ ಜತೆಗಿನ ಸ್ಪರ್ಧೆಗಾಗಿ. ಅರ್ಜುನನಲ್ಲಿ ಭಾವನೆ ಮತ್ತು ವಿಚಾರಗಳು ಮಿಶ್ರವಾಗಿದೆ. ಒಂದಕ್ಕೊಂದು ಅಡ್ಡ ಬರುತ್ತದೆ. ನಿಶ್ಚಯ ಮಾಡುವುದು ಕಷ್ಟವಾಗುತ್ತದೆ. ನಾನು ನಿನ್ನಲ್ಲಿ ದೈನ್ಯದಿಂದ ಕೇಳುತ್ತಿದ್ದೇನೆ. ಯಾವುದು ಧರ್ಮ? ಯಾವುದು ಅಧರ್ಮ ಎನ್ನುವುದನ್ನು ಶಿಷ್ಯನಾಗಿ ನನಗೆ ಹೇಳು ಎನ್ನುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.