Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ
Team Udayavani, Nov 15, 2024, 1:25 AM IST
ಕಡಬ: ಕೊಯಿಲ ಗ್ರಾಮ ಪಂಚಾಯತ್ ಅಧೀನದಲ್ಲಿರುವ ವಾಣಿಜ್ಯ ಕಟ್ಟಡದ ವಿದ್ಯುತ್ ಸಂಪರ್ಕದ ಮೀಟರ್ ಪೆಟ್ಟಿಗೆಯಲ್ಲಿ ತಡರಾತ್ರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಮೀಟರ್ ಪೆಟ್ಟಿಗೆ ಉರಿಯಲಾರಂಭಿಸಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ಬೆಂಕಿ ಅವಘಡವೊಂದು ತಪ್ಪಿದಂತಾಗಿದೆ.
ವಾಣಿಜ್ಯ ಮಳಿಗೆಯಲ್ಲಿ ಪೈಂಟ್ ಅಂಗಡಿ ಸೇರಿದಂತೆ 4 ಅಂಗಡಿಗಳಿದ್ದು, ಅವುಗಳಿಗೆ ವಿದ್ಯುತ್ ಸಂಪರ್ಕದ ಮೀಟರ್ ಹೊರಗಡೆ ಗೋಡೆಯಲ್ಲಿ ಅಳವಡಿಸಲಾಗಿದ್ದು, ಅದರಲ್ಲಿ ಬೆಂಕಿ ಉರಿಯಲಾರಂಭಿಸಿ ಕಟ್ಟಡದ ಸುತ್ತ ಹೊಗೆಯಾಡತೊಡಗಿತ್ತು. ರಾತ್ರಿ 3 ಗಂಟೆಯ ಹೊತ್ತಿಗೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನದ ಮಂದಿ ಅದನ್ನು ಗಮನಿಸಿ ಅಂಗಡಿ ಪಕ್ಕದವರಿಗೆ ಮತ್ತು ಅಂಗಡಿ ಮಾ‚ಲಕರಿಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಅಂಗಡಿ ಕಟ್ಟಡದ ಹತ್ತಿರದ ನಿವಾಸಿ ಪುರುಷೋತ್ತಮ ಮತ್ತು ಅಂಗಡಿ ಮಾ‚ಲಕ ಹಂಝ ಮತ್ತು ಅವರ ಸಹೋದರರು ಸ್ಥಳಕ್ಕೆ ಆಗಮಿಸಿ ಉರಿಯುತ್ತಿದ್ದ ಮೀಟರ್ ಪೆಟ್ಟಿಗೆಯ ಬೆಂಕಿಯನ್ನು ನಂದಿಸಿದರು.
ಸುದ್ದಿ ತಿಳಿದ ಮೆಸ್ಕಾಂ ಸಿಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ಮೀಟರ್‌ನಿಂದ ವೈರ್ ಮೂಲಕ ಅಂಗಡಿಯ ಒಳಗಡೆಗೆ ಬೆಂಕಿ ಆವರಿಸಲು ಆರಂಭಿಸಿ ಹೊಗೆಯಾಡತೊಡಗಿತ್ತು. ಸ್ಥಳೀಯ ನಿವಾಸಿ ಪುರುಷೋತ್ತಮ ಅವರು ಪೈಪ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದು, ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಪ್ಪಿದ ಭಾರೀ ಅವಘಡ
ಬೆಂಕಿ ಹೊತ್ತಿಕೊಂಡಿರುವ ಕಟ್ಟಡದ ಒಂದು ಭಾಗದ 2 ಕೊಠಡಿಯಲ್ಲಿ ಪೈಂಟ್, ಕೃಷಿಕರಿಗೆ ಸಂಬಂಧಿಸಿದ ಪ್ಲಾಸ್ಟಿಕ್ ವಸ್ತುಗಳು, ಇನ್ನೆರಡು ಕೊಠಡಿಯಲ್ಲಿ ದಿನಸಿ ಅಂಗಡಿಗಳು ಇದ್ದು, ಬಹು ಬೇಗನೇ ಬೆಂಕಿ ಹರಡುವ ಸಾಧ್ಯತೆ ಇತ್ತು. ಆದರೆ ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ ಎಂದು ಪೈಂಟ್ ಅಂಗಡಿಯ ಅರಫ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.