Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

ಆತ್ಮಹತ್ಯೆಗಳಿಗೆ ದುಡುಕಿನ ನಿರ್ಧಾರವೇ ಕಾರಣ ;  ಬದಲಾಗಲಿ ತತ್‌ಕ್ಷಣದ ತೀರ್ಮಾನ

Team Udayavani, Nov 15, 2024, 6:50 AM IST

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  
ಮಂಗಳೂರು: ಮಗು, ಪತ್ನಿಯನ್ನುಕೊಂದು ಆತ್ಮಹತ್ಯೆ, ಹುಟ್ಟಿದ ವಾರದೊಳಗೆ ಮಗು ಮೃತಪಟ್ಟ ಬಳಿಕ ತಾಯಿ ಆತ್ಮಹತ್ಯೆ, ಯಾರೋ ಬ್ಲ್ಯಾಕ್‌ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆಂದು ಉದ್ಯಮಿ ಆತ್ಮಹತ್ಯೆ, ಮಗುವಿನೊಂದಿಗೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ, ನದಿಗೆ ಹಾರಿ ಯುವಕ ಆತ್ಮಹತ್ಯೆ…
ಇವು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ  ಒಂದೂವರೆ ತಿಂಗಳೊಳಗೆ ನಡೆದಿರುವ ದುರಂತ ಘಟನೆಗಳಲ್ಲಿ ಕೆಲವು. ಕೌಟುಂಬಿಕ ಕಲಹ, ಬ್ಲ್ಯಾಕ್‌ಮೇಲ್ , ಆರ್ಥಿಕ ಸಂಕಷ್ಟ, ಅನಾರೋಗ್ಯ…ಹೀಗೆ ಕಾರಣ ಗಳು ಹಲವು. ಆದರೆ ಇವೆಲ್ಲವೂ ಪರಿಹಾರವಿಲ್ಲದ ಸಮಸ್ಯೆಗಳೇನಲ್ಲ.  ಸಮಾಜದಲ್ಲಿ ಆತಂಕದ ಛಾಯೆ ಮೂಡಿಸುತ್ತಿರುವ “ಆತ್ಮಹತ್ಯೆ’ಗೆ ಸಮಾಜವೇ ಕಡಿವಾಣ ಹಾಕಬೇಕಿದೆ. ಹೊಸ ಬದುಕಿನ, ಹೊಸ ಬೆಳಕಿನ ಭರವಸೆಯ ಮೇಲೆ ಹೊಸಜೀವನ ಕಟ್ಟುವಂತಾಗಬೇಕಿದೆ.
ಕಳೆದ ಶುಕ್ರವಾರ ಮೂಲ್ಕಿ ಠಾಣೆ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿ ಕೊಂಡಿದ್ದು, ಅವರ ಮನೆಯಲ್ಲಿ ಪತ್ನಿ, ಪುತ್ರ ಕೊಲೆಯಾಗಿದ್ದರು.  ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ.
ಅ.6ರಂದು ಉದ್ಯಮಿ ಮಮ್ತಾಜ್‌ ಅಲಿ ಕೂಳೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಲ್ಯಾಕ್‌ವೆುàಲ್‌, ಕಿರುಕುಳವೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ರವಿವಾರ  ತನ್ನ ಎರಡೂವರೆ ವರ್ಷದ ಮಗನೊಂದಿಗೆ ಗುರುಪುರ ಸೇತುವೆ ಮೇಲೇರಿದ ಕಾರ್ಮಿಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ದಾಗ ಸಾರ್ವಜನಿಕರು ರಕ್ಷಿಸಿದ್ದಾರೆ. ಕಳೆದ ತಿಂಗಳು ಯುವಕನೋರ್ವ ಗುರುಪುರ ನದಿಗೆ ಹಾರಿ ಪ್ರಾಣಬಿಟ್ಟಿದ್ದ.
ಸೋಮವಾರದಂದು ನಗರದ ಲೇಡಿ ಗೋಷನ್‌ ಆಸ್ಪತ್ರೆಯ ಕಟ್ಟಡ ದಿಂದ ಹಾರಿದ 28 ವರ್ಷದ ಬಾಣಂತಿ ಯೋರ್ವರು ಪ್ರಾಣ ತ್ಯಜಿಸಿದ್ದಾರೆ. ಇವರ ಹಸುಗೂಸು ಒಂದು ವಾರದ ಹಿಂದೆ ಮೃತಪಟ್ಟಿತ್ತು. ನ.6ರಂದು ಕಾರ್ಕಳ ಈದುಗ್ರಾಮದ 29 ವರ್ಷ ವಯಸ್ಸಿನ ಶಿಕ್ಷಕಿಯೋರ್ವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಗುರುವಾರ ಕಡೆಕಾರು ಪಡುಕರೆಯ ವ್ಯಕ್ತಿಯೋರ್ವರು, ನ.7ರಿಂದ ನ.10ರ ನಡುವೆ ಉಪ್ಪೂರು ಕೊಳಲಗಿರಿಯ ಓರ್ವರು, ನ.3ರಂದು ಮಣಿಪಾಲದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿ ಕೊಂಡಿದ್ದರು. ನ.2ರಂದು ಲಾಯಿಲ ಕುಂಟಿನಿಯ 26 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಜಿಲ್ಲೆಯ ವಿವಿಧೆಡೆ ಇನ್ನೂ ಹಲವು ಆತ್ಮಹತ್ಯೆ ಘಟನೆಗಳು ವರದಿಯಾಗುತ್ತಲೇ ಇವೆ.
ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ 
ಆತ್ಮಹತ್ಯೆ ಪ್ರಕರಣಗಳನ್ನು ವಿಶ್ಲೇಷಿಸಿ ದಾಗ ಕಾರಣಗಳು ಭಿನ್ನವಾಗಿರುವುದು ಕಂಡು ಬರುತ್ತಿದೆ. ಆದರೆ ಎಲ್ಲ ಕೃತ್ಯಗಳಿಗೆ ಸಾಮಾನ್ಯವಾದ ಒಂದೇ ಕಾರಣ ಆತ್ಮಸ್ಥೈರ್ಯ, ಬದುಕಿನ ಭವಿಷ್ಯದ ಮೇಲಿನ ಭರವಸೆ ಬತ್ತಿ ಹೋಗಿರುವುದು. ಎಲ್ಲ ಸಮಸ್ಯೆಗಳಿಗೂ ಒಂದಲ್ಲೊಂದು ರೀತಿಯ ಪರಿಹಾರ ಇದ್ದೇ ಇದೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ.
ಆತ್ಮಹತ್ಯೆ ತಡೆಯಲು ಸಾಧ್ಯ ಎನ್ನುತ್ತಾರೆ ತಜ್ಞರು
ಮಾನಸಿಕವಾಗಿ ಆರೋಗ್ಯದಿಂದ ಇದ್ದ ಕೆಲವರೂ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ.    ಯಾರಾದರೂ ಆತ್ಮಹತ್ಯೆ  ಯೋಚನೆ ಯಲ್ಲಿದ್ದಾರೆ ಎಂದು ಗೊತ್ತಾದರೆ ಕೂಡಲೇ ಅವರನ್ನು ಮನೋರೋಗ ತಜ್ಞರ ಬಳಿಗೆ ಕರೆದೊಯ್ಯಬೇಕು. ಅಗತ್ಯ ಇರುವವರಿಗೆ ಶಾಕ್‌ ತೆರಪಿ(ಇಸಿಟಿ) ಕೂಡ ನೀಡಲಾಗುತ್ತದೆ. ಮಾತು ಕಡಿಮೆ, ಬೆರೆಯುವಿಕೆ ಕಡಿಮೆ, ಹಿಂದಿನಿಂದ ಮಾಡಿಕೊಂಡು ಬಂದ ಚಟುವಟಿಕೆ ಕಡಿಮೆ ಮಾಡುವುದು, ಈ ಹಿಂದೊಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿರುವುದು ಇತ್ಯಾದಿ ಗಮನಕ್ಕೆ ಬಂದರೆ ಅದನ್ನು ನಿರ್ಲಕ್ಷಿಸಬಾರದು ಎನ್ನುತ್ತಾರೆ ಮನೋರೋಗ ತಜ್ಞರು.
ಒಂದು ಕರೆ ನಿರ್ಧಾರ ಬದಲಿಸುತ್ತದೆ
ಆತ್ಮಹತ್ಯೆ ಬಹುತೇಕ ಸಂದರ್ಭಗಳಲ್ಲಿ ಆ ಕ್ಷಣದ ನಿರ್ಧಾರ. ಆ ಕ್ಷಣದಲ್ಲಿ ದುಡುಕದೆ ಇದ್ದರೆ ಭವಿಷ್ಯ ಉತ್ತಮವಾಗಿರುತ್ತದೆ. ಆ ಕ್ಷಣ ದಾಟಿದವರು ಆತ್ಮಹತ್ಯೆಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚು. ಯಾರಿಗಾದರೂ ಆತ್ಮಹತ್ಯೆಯ ಯೋಚನೆ ಬಂದರೆ ಆತ್ಮೀಯರಿಗೆ ಕರೆ ಮಾಡಬೇಕು ಅಥವಾ 14416 ಸಹಾಯವಾಣಿಗೆ ಕರೆ ಮಾಡಿದರೆ ಸೂಕ್ತ ಸಲಹೆ, ಪರಿಹಾರ ದೊರೆಯುತ್ತದೆ. ಈ ಸಹಾಯವಾಣಿ ವಾರದ ಎಲ್ಲ ದಿನವೂ 24 ತಾಸುಗಳ ಕಾಲವೂ ಸೇವೆಯಲ್ಲಿರುತ್ತದೆ. ಇದಕ್ಕೆ ಕರೆ ಮಾಡಿದ ಎಷ್ಟೋ ಮಂದಿ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ ಎನ್ನುತ್ತಾರೆ ದ.ಕ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿ ಡಾ| ಸುದರ್ಶನ್‌ ಸಿ.ಎಂ.
ಮನೋಚೈತನ್ಯದ ಆಸರೆ 
2-3 ವರ್ಷಗಳಲ್ಲಿ ಮಾನಸಿಕ ಅನಾರೋಗ್ಯ ಹಾಗೂ ಈ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಚಿಕಿತ್ಸೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ವೆನ್ಲಾಕ್‌ ಆಸ್ಪತ್ರೆಯ ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗದಲ್ಲಿ ಪ್ರತಿದಿನ ಚಿಕಿತ್ಸೆ ಲಭ್ಯವಿದೆ. ಮಂಗಳವಾರ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ  ಮತ್ತು ಶುಕ್ರವಾರ  ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮನೋಚೈತನ್ಯ ಕಾರ್ಯಕ್ರಮದಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮಾರ್ಚ್‌ನಿಂದ ನವೆಂಬರ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 4,226 ಮಂದಿ ಕೌನ್ಸೆಲಿಂಗ್‌/ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.
-ಡಾ| ಪ್ರಜಕ್ತಾ ವಿ.ರಾವ್‌ 
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞೆ

ಟಾಪ್ ನ್ಯೂಸ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

3

Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.