Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Team Udayavani, Nov 15, 2024, 11:17 AM IST
ಶಿವಮೊಗ್ಗ: ರೈತರಿಗೆ ಯಾವುದೇ ಧರ್ಮ ಇಲ್ಲ ಎಲ್ಲರೂ ರೈತರೇ. ಜಮೀರ್ ಅವರಿಗೆ ನಾನು ನಾಲ್ಕಾರು ಬಾರಿ ಕರೆದು ಬಂದಿದ್ದೇನೆ. ವಕ್ಫ್ ಬಗ್ಗೆ ಶಿವಮೊಗ್ಗಕ್ಕೆ ಬರುವವರು ಆಶ್ರಯ ಬಡಾವಣೆ ಬಗ್ಗೆ ಕರೆದರೆ ಬರಲ್ವ? ಹೀಗಾಗಿ ಜಮೀರ್ ಅವರನ್ನು ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಓಡಾಡಬೇಡ ಮಗನೇ ಎನ್ನಬೇಕಾಗುತ್ತದೆ. ಜಮೀರ್ ಬಂದರೆ ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತದೆ ಹಾಗಾಗಿ ಗಡಿಪಾರು ಮಾಡಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ (ನ.15) ಮಾತನಾಡಿದ ಅವರು, ಬಡವರ ರೈತರ ಜಾಗವನ್ನು ವಕ್ಫ್ ಗೆ ಸೇರಿಸುವುದನ್ನು ಮುಂದುವರಿಸಿದ್ದೇ ಆದರೆ ಇಡೀ ರಾಜ್ಯದ ಜನ ಜಮೀರ್ ಗೆ ಹೊಡಿತಾರೆ ಎಂದಿದ್ದೆ. ನಮ್ಮ ವೈಚಾರಿಕ ಹೋರಾಟ ನಾವು ಮಾಡಿಯೇ ಮಾಡುತ್ತೇವೆ. ನ. 26 ರಂದು ರಾಜ್ಯ ಮಟ್ಟದ ಹೋರಾಟ ಮಾಡಲಿದ್ದೇವೆ ಎಂದರು.
ಹಳೆ ಶಿವಮೊಗ್ಗದ ಅನೇಕ ಜಾಗವನ್ನು ವಕ್ಪ್ ಗೆ ಸೇರಿಸಲು ಹೊರಟಿದ್ದರು. ಕೂಡಲಿಯ ಅಕ್ಷೋಭ್ಯಾ ಮಠದ ಜಾಗವನ್ನು ಸಹ ವಕ್ಫ್ ಗೆ ಸೇರಿಸಲು ಹೊರಟಿದ್ದರು ಎಂದು ಆರೋಪಿಸಿದರು.
ಕಾಡಿನ ಸಂಪತ್ತಿಗೆ ಸೆಸ್ ಹಾಕುತ್ತಾರಂತೆ ಈ ಸರ್ಕಾರದ ಮಂತ್ರಿಗಳು. ಹಾಗಾದರೆ ಮರಗಿಡಗಳಿಂದ ಬರುವ ಗಾಳಿಗೂ ಸೆಸ್ ಹಾಕಿ. ಕಾಂಗ್ರೆಸ್ ತತ್ವವೇ ದೇಶ ತುಂಡು ಮಾಡುವುದು. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂದರೆ ಎಲ್ಲಾ ಮಂತ್ರಿಗಳು ಸೇರಿ ಭಿಕ್ಷೆ ಬೇಡಲಿ. ರಾಜ್ಯದ ಜನ ನಿಮಗೆ ಭಿಕ್ಷೆ ನೀಡುತ್ತಾರೆ ಎಂದು ಚನ್ನಬಸಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.