Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
"ಅಪಾಯಕಾರಿ' ಮಟ್ಟಕ್ಕೆ ತಲುಪಿದ ಮಾಲಿನ್ಯ ; ನಿಯಂತ್ರಣಕ್ಕೆ ಇಂದಿನಿಂದಲೇ ಕಟ್ಟುನಿಟ್ಟಿನ ಕ್ರಮ
Team Udayavani, Nov 15, 2024, 11:57 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯವು ಅಪಾಯ ಕಾರಿ ಮಟ್ಟಕ್ಕೆ ತಲುಪಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಶುಕ್ರವಾರದಿಂದಲೇ ಜಾರಿ ಮಾಡಲಾಗುತ್ತಿದೆ.
ಆರೋಗ್ಯಕ್ಕೆ ಭಾರೀ ಅಪಾಯವನ್ನುಂಟು ಮಾಡುವ ಸ್ಥಿತಿಗೆ ಮಾಲಿನ್ಯವು ತಲುಪಿ ದ್ದರಿಂದ ಶುಕ್ರವಾರ ಬೆಳಗ್ಗೆ 8 ಗಂಟೆ ಯಿಂದಲೇ ಜಾರಿಗೆ ಬರುವಂತೆ “ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ’ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್- ಜಿಆರ್‌ಪಿಎ) 3ನೇ ಹಂತದ ನಿರ್ಬಂಧಗಳನ್ನು ಜಾರಿ ಮಾಡಲು ವಾಯು ಗುಣಮಟ್ಟ ನಿರ್ವಹಣ ಆಯೋಗ (ಸಿಎಕ್ಯುಎಂ) ಮುಂದಾಗಿದೆ. ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ)ವನ್ನು ತೀವ್ರತರ ಎಂದು ವರ್ಗೀಕರಿಸಲಾಗಿದ್ದು, ಎಕ್ಯುಐ 428ಕ್ಕೆ ತಲುಪಿದೆ. ಇದು ದೇಶದಲ್ಲಿ ಅತ್ಯಂತ ಅಪಾಯಕಾರಿ ಮಟ್ಟವಾಗಿದೆ!
ವಾಯುಮಾಲಿನ್ಯ ನಿಯಂತ್ರಣಕ್ಕೆ ದಿಲ್ಲಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ಧ್ವಂಸ ಸೇರಿದಂತೆ ಎಲ್ಲ ರೀತಿಯ ಚಟುವ ಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿ ಸುವುದು, ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಹೊರತಾದ ಬಸ್‌ಗಳ ಸಂಚಾರ ತಡೆ ಸೇರಿದಂತೆ ಅನೇಕ ನಿಯಮಗಳನ್ನು ಜಿಆರ್‌ಪಿಎ 3ನೇ ಹಂತದಲ್ಲಿ ಜಾರಿ ಗೊಳಿಸಲಾಗುತ್ತಿದೆ. ಇದಕ್ಕೆ ಹೆಚ್ಚುವರಿ ಯಾಗಿ, ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಗುರುಗ್ರಾಮ, ಘಾಜಿಯಾಬಾದ್, ಫರಿದಾಬಾದ್ ಮತ್ತು ಗೌತಮ್ ಬುದ್ಧ ನಗರಗಳಲ್ಲಿ ರಸ್ತೆಗಳಲ್ಲಿ ಹಳೆಯ ಹೊರ ಸೂಸುವಿಕೆ ಮಾನದಂಡಗಳ ಬಿಎಸ್-3 ಮತ್ತು ಬಿಎಸ್-4 ವರ್ಗದ ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ.
ಆನ್‌ಲೈನ್‌ನಲ್ಲಿ ಪ್ರಾಥಮಿಕ ತರಗತಿ
ಹೆಚ್ಚಿದ ಪರಿಸರ ಮಾಲಿನ್ಯದ ಹಿನ್ನೆಲೆ ಯಲ್ಲಿ ದಿಲ್ಲಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿನ ತರಗತಿಗಳನ್ನು ಆನ್ ಲೈನ್‌ನಲ್ಲಿ ನಡೆಸಲಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ನಿರ್ದೇಶನಗಳನ್ನು ನೀಡಲಿದೆ ಎಂದು ಸಿಎಂ ಆತಿಶಿ ಮರ್ಲೇನಾ ಟ್ವೀಟ್ ಮಾಡಿದ್ದಾರೆ.
ದಿಲ್ಲಿಗೆ ಬಂದರೆ ಗ್ಯಾಸ್ ಚೇಂಬರ್‌ಗೆ ಬಂದಂತೆ ಅನುಭವ: ಪ್ರಿಯಾಂಕಾ
ವಯನಾಡ್ ಲೋಕಸಭೆ ಉಪ ಚುನಾ ವಣೆ ಮುಗಿಸಿಕೊಂಡು ದಿಲ್ಲಿಗೆ ಆಗಮಿ ಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ದಿಲ್ಲಿಗೆ ಕಾಲಿಡುತ್ತಿದ್ದಂತೆ ಗ್ಯಾಸ್ ಚೇಂಬರ್‌ಗೆ ಬಂದಂಥ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಆಹ್ಲಾದಕರ ವಾತಾವರಣವಿರುವ, ವಾಯು ಗುಣಮಟ್ಟ ಸೂಚ್ಯಂಕ 35 ಇರುವ ವಯನಾಡಿನಿಂದ ದಿಲ್ಲಿಗೆ ಬರುತ್ತಿದ್ದಂತೆ, ಗ್ಯಾಸ್ ಚೇಂಬರ್‌ಗೆ ಬಂದಂತೆ ಅನಿ ಸಿತು. ಹೊಗೆಯ ಹೊದಿಕೆ ಇನ್ನೂ ಅಪಾ ಯಕಾರಿಯಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ವರ್ಷದಿಂದ ವರ್ಷಕ್ಕೆ ದಿಲ್ಲಿ ವಾಯುಮಾಲಿನ್ಯವು ಹದಗೆಡುತ್ತಿದೆ. ನಾವೆಲ್ಲರೂ ಒಂದಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನಿರ್ಬಂಧಗಳೇನು? ರಾಜಧಾನಿ ವ್ಯಾಪ್ತಿಯ ಅನಗತ್ಯ ಗಣಿಗಾರಿಕೆ ಚಟುವಟಿಕೆಗಳಿಗೂ ನಿರ್ಬಂಧ ಎಲೆಕ್ಟ್ರಿಕ್, ಸಿಎನ್‌ಜಿ ಹೊರತಾದ ಎಲ್ಲ ಅಂತಾರಾಜ್ಯ ಬಸ್‌ಗಳ ಸಂಚಾರಕ್ಕೆ ತಡೆ ಪ್ರಮುಖ ರಸ್ತೆಗಳಲ್ಲಿ ನೀರು ಚುಮುಕಿಸುವ ಕಾರ್ಯಾಚರಣೆ ಹೆಚ್ಚಿಸುವುದು ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಮತ್ತು ಧ್ವಂಸ ಚಟುವಟಿಕೆ ಸ್ಥಗಿತ ಪ್ರಾಥಮಿಕ ಹಂತದ ಶಾಲಾ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.