ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಸ್ಥಳ ಅನ್ನಪೂರ್ಣ ಭೋಜನಾಲಯದ ಆಸನ ವ್ಯವಸ್ಥೆಯುಳ್ಳ ಮೇಲಂತಸ್ತಿನ ಕಟ್ಟಡ ಉದ್ಘಾಟನೆ

Team Udayavani, Nov 15, 2024, 9:00 AM IST

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಬೆಳ್ತಂಗಡಿ: ಭಾರತೀಯ ಸಂಸ್ಕೃತಿಯಲ್ಲಿ ತಂದೆ, ತಾಯಿ ಮತ್ತು ಅತಿಥಿಯನ್ನು ದೇವರಂತೆ ಗೌರವಿಸಬೇಕು ಎಂದಿದೆ. ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿರುವ ಡಾ| ವೀರೇಂದ್ರ ಹೆಗ್ಗಡೆಯವರು ಚತುರ್ವಿದ ದಾನಾಧಿಕಾರಿಯಾಗಿ ಸರ್ವಜನರ ಹಿತದ ಜತೆಗೆ ವಿಕಾಸಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಶ್ರೀ ಕಾಂಚಿ ಕಾಮಕೋಟಿ ಸಂಸ್ಥಾನದ ಪೀಠಾಧಿಪತಿ ಜಗದ್ಗುರು ಪೂಜ್ಯ ಶ್ರೀ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ತಾರಗೊಂಡಿರುವ ಅನ್ನಪೂರ್ಣದ ಮೇಲಂತಸ್ತಿನ ಸುಸಜ್ಜಿತ ಆಸನದ ವ್ಯವಸ್ಥೆಗಳನ್ನು ಹೊಂದಿರುವ ಭೋಜನಾಲಯವನ್ನು ನ.14ರಂದು ಉದ್ಘಾಟಿಸಿ, ಅಮೃತವರ್ಷಿಣಿಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವದಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಅಧ್ಯಯನ, ಅಭಿಯಾನ, ಆಚಾರ ಮತ್ತು ಅನ್ನದಾನ ವಿಶೇಷವಾದದ್ದು. ವಿಶ್ವದಲ್ಲಿ ದೇಶ ಆರ್ಥಿಕವಾಗಿ 3ನೇ ಸ್ಥಾನಕ್ಕೇರಲು ಗ್ರಾಮೀಣ ಭಾಗದ ಸ್ವ ಉದ್ಯೋಗದಿಂದ ಸಾಧ್ಯ. ಅದನ್ನು ಡಾ| ಹೆಗ್ಗಡೆ ಹಲವು ದಶಕಗಳಿಂದಲೇ ಕೈಗೂಡಿಸಿದ್ದಾರೆ. ಹಾಗಾಗಿ ದೇಶದ ವಿಕಾಸಕ್ಕೆ ನಾವೆಲ್ಲ ಆರ್ಥಿಕ ದಾರಿದ್ರ್ಯ, ಮನೋದಾರಿದ್ರ್ಯವನ್ನು ನಿರ್ಮೂಲ ಗೊಳಿಸಬೇಕು. ಉತ್ಸಾಹ ಮತ್ತು ಉದ್ಯಮದ ಮೂಲಕ, ಪ್ರಯತ್ನ ಮತ್ತು ಪ್ರಾರ್ಥನೆ ಮೂಲಕ ಜವಾಬ್ದಾರಿಯುತ ದೇಶಭಕ್ತರಾಗಿ ಎಂದು ಹೇಳಿದರು.

ಅನ್ನದಾನ ಎಂದರೆ ಧರ್ಮಸ್ಥಳ
ಶ್ರೀ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಅನ್ನದಾನ ಎಂದರೆ ನೆನಪಾಗುವುದೇ ಧರ್ಮಸ್ಥಳ. ಕ್ಷೇತ್ರವು ಡಾ| ಹೆಗ್ಗಡೆ ಮಾರ್ಗದರ್ಶನ ಹಾಗೂ ಬದ್ಧತೆಯಿಂದ ಸಾಮಾಜಿಕವಾಗಿ ರಾಜ್ಯದ ದೇಶದ ಪ್ರಸಿದ್ಧ ಕ್ಷೇತ್ರವಾಗಿ ಬೆಳಗಿದೆ. ಕ್ಷೇತ್ರವು ಸನಾತನ ಧರ್ಮಕ್ಕೆ ಗಟ್ಟಿಯಾಗಿ ಪುಣ್ಯಕೋಟಿಯಂತೆ ಆಶ್ರಯಿಸಿದೆ ಎಂದದರು.

ಮಂಜುನಾಥ ಸ್ವಾಮಿಯ ಇಚ್ಛೆ ಈಡೇರಿದೆ: ಡಾ| ಹೆಗ್ಗಡೆ
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಚತುರ್ದಾನದಲ್ಲಿ ಅನ್ನದಾನ ಶ್ರೇಷ್ಠವಾದುದು. ಭಕ್ತರ ಆರೋಗ್ಯ ದೃಷ್ಟಿಕೋನವನ್ನರಿತು ಆರಾಮದಾಯಕ ಭೋಜನಕ್ಕೆ ಆಸನದ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದನ್ನು ಕಾಂಚಿಶ್ರೀಗಳ ಹಸ್ತದಿಂದಲೇ ಉದ್ಘಾಟಿಸಬೇಕೆಂಬ ಮಂಜುನಾಥ ಸ್ವಾಮಿಯ ಇಚ್ಛೆ ಈಡೇರಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್‌, ದ.ಕ.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಮತ್ತು ಎಸ್‌.ಡಿ.ಎಂ.ಇ. ಸೊಸೈಟಿ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್‌ ಮುಖ್ಯ ಅತಿಥಿಗಳಾಗಿದ್ದರು. ಹೇಮಾವತಿ ವೀ.ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರೇಯಸ್‌ ಕುಮಾರ್‌, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಭಾಗವಹಿಸಿದರು.

ಉಜಿರೆ ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅನ್ನಪೂರ್ಣ ಭೋಜನಾಲಯದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್‌ ವಂದಿಸಿದರು. ಡಾ| ಶ್ರೀಧರ ಭಟ್‌ ಮತ್ತು ಸುನಿಲ್‌ ಪಂಡಿತ್‌ ನಿರೂಪಿಸಿದರು.

ಏಕಕಾಲದಲ್ಲಿ 3 ಸಾವಿರ ಮಂದಿಗೆ ಅನ್ನದಾನ
ಧರ್ಮಸ್ಥಳದಲ್ಲಿ ಕಳೆದ ವರ್ಷ 75,11,500 ಲಕ್ಷ ಮಂದಿ ಭೋಜನ ಸ್ವೀಕರಿಸಿದ್ದಾರೆ. 240 ಮಂದಿ ಸಿಬಂದಿ ದಿನದ 24 ತಾಸು ಕರ್ತವ್ಯ ನಿರ್ವ ಹಿಸುತ್ತಿದ್ದು, 1 ತಾಸಿನಲ್ಲಿ ತಯಾರಾದ ಭೋಜನದಿಂದ 12,000 ಮಂದಿಗೆ ಬಡಿಸುವಷ್ಟು ಸಾಮರ್ಥ್ಯದ ಆಧುನಿಕ ವ್ಯವಸ್ಥೆಯಿದೆ. ದಿನಕ್ಕೆ ಸರಾಸರಿ 20ರಿಂದ 22 ಸಾವಿರ ಭಕ್ತರು ಭೋಜನ ಸ್ವೀಕರಿಸುತ್ತಿದ್ದು, 24 ಕ್ವಿಂಟಾಲ್‌, ವಾರ್ಷಿಕವಾಗಿ 8,448 ಕ್ವಿಂಟಾಲ್‌ ಅಕ್ಕಿ ವಿನಿಯೋಗವಾಗುತ್ತದೆ. ಹಾಗಾಗಿ ಈಗ 1,170 ಆಸನವುಳ್ಳ ನೂತನ ಭೋಜನಾಲಯ ಹಾಗೂ ಈ ಹಿಂದಿನ ಕೆಳ ಅಂತಸ್ತು ಸೇರಿ ಏಕಕಾಲದಲ್ಲಿ ಒಟ್ಟು 3 ಸಾವಿರ ಮಂದಿ ಭೋಜನ ಸ್ವೀಕರಿಸಬಹುದಾದ ಅಚ್ಚುಕಟ್ಟಿನ ಭೋಜನಾಲಯ ಅನ್ನಪೂರ್ಣದಲ್ಲಿ ಸಿದ್ಧವಾಗಿದೆ.

ಡಾ| ಹೆಗ್ಗಡೆಗೆ ಮಲೆನಾಡ ರತ್ನ ಬಿರುದು
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಏಳು ತಿಂಗಳ ಬೇಡಿಕೆಯಂತೆ ನಾನು ಕರ್ನಾಟಕಕ್ಕೆ ಬಂದಿರುವೆ. ಭಕ್ತಿ ಮತ್ತು ಧರ್ಮದ ವಿಚಾರದಲ್ಲಿ ವಿಶ್ವಾಸ ಮುಖ್ಯ. ದೇಶದ ಸಂಸ್ಕೃತಿ ವಿಕಾಸ, ಕುಟುಂಬದ ವಿಕಾಸ, ಗ್ರಾಮೀಣ ವಿಕಾಸದ ಮೂಲಕ ಪ್ರಜಾಹಿತಕ್ಕಾಗಿ ರಾಜನೀತಿ ಬೇಕು. ಕರ್ನಾಟಕದ ಪ್ರಜೆಗಳಿಗೆ ಡಾ| ಹೆಗ್ಗಡೆಯೇ ಭರವಸೆ, ಅದಕ್ಕಾಗಿ ಅವರಿಗೆ ಮಲೆನಾಡ ರತ್ನ ಬಿರುದು ನೀಡಿ ಕಾಂಚಿ ಶ್ರೀಗಳು ಡಾ| ಹೆಗ್ಗಡೆಯವರನ್ನು ಗೌರವಿಸಿದರು.

ಟಾಪ್ ನ್ಯೂಸ್

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.