Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Team Udayavani, Nov 15, 2024, 5:12 PM IST
ಶಿವಮೊಗ್ಗ: ಕೋವಿಡ್ ಸಂದರ್ಭದಲ್ಲಿ ಹಗರಣ ಆಗಿದೆ ಎಂದು ಹೇಳಿ ಎಸ್ಐಟಿ ರಚನೆ ಮಾಡಿ ಹಗೆ ತೀರಿಸಿಕೊಳ್ಳುತ್ತಿದ್ದಾರೆ. ಸದಾ ಅವರೇ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಜಕೀಯ ಜಿದ್ದು ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ (ನ.15) ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇರಲಿಲ್ಲ. ಮಾಸ್ಕ್ ಪಿಪಿಇ ಕಿಟ್ ಇರಲಿಲ್ಲ. ರಾತ್ರಿ ಮಲಗಿದರೆ ಬೆಡ್ ಸಿಗುತ್ತಿರಲಿಲ್ಲ. ಜನರನ್ನು ಬದುಕಿಸುವುದು ಮುಖ್ಯವಾಗಿತ್ತು. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಜನರ ಸಾವು ಬದುಕಿಸುವ ಕೆಲಸ ಮಾಡಿದೆ ಎಂದರು.
ಕಾಂಗ್ರೆಸ್ ಆರೋಪವನ್ನು ಜನ ನೋಡುತ್ತಿದ್ದಾರೆ. ಇದು ಯಾವುದನ್ನೂ ನಡೆಯುವುದಿಲ್ಲ. ಮುಡಾ ಹಗರಣದ ನಂತರ ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಗ್ಯಾರೆಂಟಿ ಘೋಷಣೆ ಮಾಡಿದ್ದರು. ಈಗ ಅದನ್ನು ಕೊಡಲಾಗುತ್ತಿಲ್ಲ. ಗ್ಯಾರೆಂಟಿ ಯೋಜನೆ ಜಾರಿ ಮಾಡಿ ಬೆಲೆ ಏರಿಕೆ ಮಾಡಿದರು. ಅಬಕಾರಿ ಹಗರಣ ನಡೆದಿದೆ. ಅಬಕಾರಿ ಸಚಿವರು ತೀರ್ಥಹಳ್ಳಿಗೆ ಬಂದಿದ್ದರು. ಸಚಿವರು ತೀರ್ಥಹಳ್ಳಿಗೆ ಬಂದಿದ್ದರೆಂದು ಪ್ರತಿ ಬ್ರಾಂಡಿ ಅಂಗಡಿಯಿಂದ ಹಣ ಎತ್ತಿದ್ದಾರೆ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಕ್ಯಾಬಿನೆಟ್ ನಲ್ಲಿ ಇದ್ದಾರೆ ಎಂದು ಟೀಕೆ ಮಾಡಿದರು.
ಉಪ ಚುನಾವಣೆಯಲ್ಲಿ ಮೂರು ಸ್ಥಾನ ಎನ್ ಡಿಎ ಗೆಲ್ಲುತ್ತದೆ. ಎಲ್ಲಾ ಸಚಿವರು ವಿಧಾನಸೌಧಕ್ಕೆ ಬೀಗ ಹಾಕಿಕೊಂಡು ಪ್ರಚಾರಕ್ಕೆ ಹೋಗಿದ್ದರು. ಪ್ರಿಯಾಂಕ ಖರ್ಗೆ ಅವರು ರಜಾಕಾರರು ಮುಸ್ಲಿಂರಲ್ಲ ಅಂದಿದ್ದಾರೆ. ನನಗೆ ಬಹಳ ಆಶ್ಚರ್ಯವಾಯ್ತು. ಖರ್ಗೆ ಅವರ ಕುಟುಂಬ ಸಹ ಅವರಿಂದ ತೊಂದರೆಗೆ ಒಳಪಟ್ಟ ಕುಟುಂಬ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.