ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
10 ರಿಂದ 15 ಜನ ಕೂಲಿ ಕೆಲಸಗಾರರೊಂದಿಗೆ ಸಕ್ಕರೆ ಆರತಿ ತಯಾರಿಸುತ್ತಾರೆ
Team Udayavani, Nov 15, 2024, 6:07 PM IST
ಉದಯವಾಣಿ ಸಮಾಚಾರ
ಕನಕಗಿರಿ: ಪಟ್ಟಣದ ಕಾಸಿಂಸಾಬ್ ಮಂಗಳೂರು ಅವರ ಕುಟುಂಬ ಕಳೆದ 40 ವರ್ಷಗಳಿಂದ ಸಕ್ಕರೆ ಆರತಿ ತಯಾರಿಸುತ್ತಿದ್ದಾರೆ. ಮಿಠಾಯಿ, ಕಾರ, ಜಿಲೇಬಿ, ಮೈಸೂರು ಪಾಕ್ ಸೇರಿದಂತೆ ನಾನಾ ತಿನಿಸು ತಯಾರಿಸುತ್ತಿದ್ದಾರೆ . ಜತೆಗೆ ತಮ್ಮ ತಂದೆ ಕಾಲದಿಂದ ನಾನಾ ಬಗೆಯ ಸಕ್ಕರೆ ಆರತಿ ತಯಾರಿಸುತ್ತಿದ್ದಾರೆ .
ಪ್ರತಿವರ್ಷ ಗೌರಿ ಹುಣ್ಣಿಮೆಯ 10 15 ದಿನಗಳ ಮೊದಲೇ ಸಕ್ಕರೆ ಆರತಿ ತಯಾರಿಸಲು ಕಾಸಿಂಸಾಬ್ ಕುಟುಂಬದ ಸದಸ್ಯರು, ಕೆಲಸಗಾರರು ಸಿದ್ಧತೆ ನಡೆಸಿ ಹುಣ್ಣಿಮೆ ಮುಗಿಯುವುದರೊಳಗೆ 30-40 ಕ್ವಿಂಟಲ್ ಬಣ್ಣಬಣ್ಣದ ಸಕ್ಕರೆ ಆರತಿ ತಯಾರಿಸಿ ಗಂಗಾವತಿ, ಕೊಪ್ಪಳ ಸೇರಿದಂತೆ ನಾನಾ ಕಡೆ ಮಾರುತ್ತಾರೆ.
ಗ್ರಾಮೀಣ ಭಾಗದ ಜನತೆ ಕೆ.ಜಿ., ಕ್ವಿಂಟಲ್‌ಗಟ್ಟಲೇ ಖರೀದಿಸಿ ಮಾರುತ್ತಿದ್ದಾರೆ. ಕಾಸಿಂಸಾಬ್ ಮಂಗಳೂರು ಕುಟುಂಬ
ಈಗಾಗಲೇನೂರಾರು ಕೆ.ಜಿ. ಸಕ್ಕರೆ ಆರತಿ ತಯಾರಿಸಿದ್ದಾರೆ.
ಕಡಿಮೆ ಲಾಭ: ಮಂಗಳೂರು ಕುಟುಂಬದಲ್ಲಿ 60ಕ್ಕೂ ಹೆಚ್ಚು ಸಕ್ಕರೆ ಆರತಿ ತಯಾರಿಸುವ ಮಣಿ(ಅಚ್ಚು)ಗಳಿದ್ದು, ಒಂದು ಸಲ 30 ಕೆ.ಜಿ ಸಕ್ಕರೆ ಸುಡುತ್ತಿದ್ದಾರೆ. ಹಿರಿಯರಿಂದಲೂ ಸಕ್ಕರೆ ಆರತಿ ತಯಾರಿಸುತ್ತಿರುವ ಕಾರಣ ಇದನ್ನು ಮಕ್ಕಳು, ಮೊಮ್ಮಕ್ಕಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ವರ್ಷ 20.30 ಕ್ವಿಂಟಾಲ್ ಸಕ್ಕರೆ ಸುಟ್ಟು ಆರತಿ ತಯಾರಿಸುತ್ತಾರೆ.
ಹೆಚ್ಚು ಶ್ರಮ, ಲಾಭ ಕಡಿಮೆ ಇದ್ದರೂ ಕುಟುಂಬಸ್ಥರಿದ್ದರೂ ಜತೆಗೆ 10 ರಿಂದ 15 ಜನ ಕೂಲಿ ಕೆಲಸಗಾರರೊಂದಿಗೆ ಸಕ್ಕರೆ ಆರತಿ ತಯಾರಿಸುತ್ತಾರೆ. ಲಕ್ಷ ರೂ. ಖರ್ಚಾದರೂ ಉಳಿಯೋದು ಮಾತ್ರ ಸಾವಿರಾರು ರೂ.ಹಣ ಎನ್ನುತ್ತಾರೆ ಕಾಸಿಂಸಾಬ್ ಮಂಗಳೂರು.
ಭಾವೈಕ್ಯತೆಗೆ ಸಾಕ್ಷಿ
ಹೊಸದಾಗಿ ಮದುವೆ ನಿಶ್ಚಯಿಸಿದ ವಧುಗಳಿಗೆ ಇತರರಿಗೆ ಈ ಭಾಗದಲ್ಲಿ ಸಕ್ಕರೆ ಆರತಿ ವಿತರಿಸುವ ರೂಢಿಯಿದೆ. ಗೌರಿ ಹುಣ್ಣಿಮೆಯಂದು ಮಹಿಳೆಯರು ಸಕ್ಕರೆ ಆರತಿಯೊಂದಿಗೆ ಗೌರಮ್ಮನಿಗೆ ಬೆಳಗುತ್ತಾರೆ. ಸಕ್ಕರೆ ಆರತಿಯಲ್ಲಿ ಬಹುತೇಕ ಹಿಂದೂ ದೇವರುಗಳ ಕೆತ್ತನೆಯಿದ್ದರೂ ಮುಸ್ಲಿಂರು ಸಕ್ಕರೆ ಆರತಿ ತಯಾರಿಸುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ.
35-40 ವರ್ಷಗಳಿಂದ ನಮ್ಮ ಕುಟುಂಬ ನಾನಾ ಕಲಾಕೃತಿಯ ಬಣ್ಣ, ಬಣ್ಣದ ಸಕ್ಕರೆ ಆರತಿ ತರಾರಿಸುತ್ತಿರುವುದು ಹೆಮ್ಮೆಯಿದೆ.
ಕನಕಗಿರಿ ಸೇರಿದಂತೆ ನಾನಾ ಕಡೆ ಕೆ.ಜಿಗೆ 100ರೂ. ಗೆ ಮಾರಾಟ ಮಾಡಲಾಗುತ್ತಿದೆ. ಉತ್ತಮ ವ್ಯಾಪಾರದ ನಿರೀಕ್ಷೆ ಇದ್ದು, ಈ ವರ್ಷ ಬೆಲೆ ಏರಿಕೆ ಕಾರಣ ವ್ಯಾಪಾರ, ಲಾಭ ಕುಸಿಯಲಿದೆ ಎನ್ನಲಾಗಿದೆ.
ಮರ್ತುಜ್‌ಸಾಬ್ ಮಂಗಳೂರು,
ಆರತಿ ತಯಾರಕ, ಕನಕಗಿರಿ
*ಪ್ರವೀಣ ಕೋರಿಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.