Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Team Udayavani, Nov 15, 2024, 7:04 PM IST
ಚಿಕ್ಕಬಳ್ಳಾಪುರ: ಸರ್ಕಾರ ಕೋವಿಡ್ ಹಗರಣಗಳ ಬಗ್ಗೆ ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಬೇಕು. ಜನರ ದೃಷ್ಟಿಯಲ್ಲಿ ನಮ್ಮನ್ನು ಖಳ ನಾಯಕರೆಂದು ಬಿಂಬಿಸಲು ಹೊರಟಿದ್ದಾರೆ. ಇವರಿಗೆ ಒಳ್ಳೆದಾಗುವುದಿಲ್ಲ. ಯಾವಾಗಲೂ ಕಾಲಚಕ್ರ ತಿರುಗುತ್ತಾ ಇರುತ್ತದೆ. ಆಗ ಯಾರ್ಯಾರು ಎಲ್ಲಿ ಇರುತ್ತಾರೆಂಬುದನ್ನು ನೋಡೋಣ ಎಂದು ಸಂಸದ ಡಾ.ಕೆ.ಸುಧಾಕರ್ ಕಿಡಿಕಾರಿದರು.
ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೋವಿಡ್ ಹಗರಣದ ಬಗ್ಗೆ ಪದೆ ಪದೆ ತನಿಖೆ ಆಯಾಮಗಳನ್ನು ಮಾರ್ಪಾಡು ಮಾಡುತ್ತಿರುವ ಸರ್ಕಾರಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದರು.
ಕೋವಿಡ್ ತನಿಖೆಗೆ ನ್ಯಾ.ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆ ತನಿಖೆ ಪೂರ್ಣವೇ ಆಗಿಲ್ಲ. ಪೂರ್ಣಯಾಗದೆ ಅವರ ಹತ್ತಿರ ಪ್ರಾಥಮಿಕ ವರದಿ ತರಿಸಿಕೊಂಡು ಅದರ ಮೇಲೆ ಡಿಸಿಎಂ ಅಧ್ಯಕ್ಷತೆಯಲ್ಲಿ 7 ಮಂದಿ ಪ್ರಭಾವಿ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮತಿ ರಚಿಸಿ ಅವರಿಗೂ ವರದಿ ನೀಡುವಂತೆ ಆದೇಶಿಸಿದೆ. ಇದಾದ ತಿಂಗಳ ಕಳೆಯುವುದರಲ್ಲಿ ಈಗ ಎಸ್‌ಐಟಿ ತನಿಖೆ ರಚನೆ ಮಾಡಲಾಗಿದೆ. ಇಡೀ ಪ್ರಪಂಚದಲ್ಲಿ ಕೋವಿಡ್ ಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಅವತ್ತು ಯಾವುದು ಎಷ್ಟು? ಅಥವ ಅವತ್ತಿನ ಪರಿಕರಗಳು ಸಿಗುತ್ತಿತ್ತಾ? ಆಗ ಸಿಎಂ ಆಗಿದ್ದ ಯಡಿಯೂರಪ್ಪ, ಆರೋಗ್ಯ ಸಚಿವರಾಗಿದ್ದ ಶ್ರೀರಾಮಲು ಅವರು ಏಕಾಏಕಿ ನಿರ್ಣಯ ಕೈಗೊಂಡಿದ್ದಲ್ಲ. ತಾಂತ್ರಿಕಾ ಸಲಹಾ ಸಮಿತಿ, ಟಾಸ್ಕ್ ಫೋರ್ಸ್ ಇತ್ತು. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ವಿಮಾನ ಕಳಿಸಿ ಚೀನಾದಿಂದ ಪಿಪಿ ಕಿಟ್ ತರಿಸಿದ್ದೇವೆ. ಆಗ ಪಿಪಿ ಕಿಟ್ ಎಲ್ಲಿತ್ತು ಎಂದು ಇವರು ಹೇಳಲಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಕರ್ನಾಟಕಕ್ಕೆ ಬಂದ ದಿನ ದೇಶದ ಯಾವ ರಾಜ್ಯಕ್ಕೆ ಪಿಪಿ ಕಿಟ್ ಬಂದಿತ್ತು ಎಂಬುದನ್ನು ಇವರು ಹೇಳಲಿ ನೋಡೋಣ ಎಂದು ಸಂಸದ ಡಾ.ಕೆ.ಸುಧಾಕರ್ ಸವಾಲು ಹಾಕಿದರು. ಆಗ ಪಾಪ ಮನೆಗಳಲ್ಲಿ ಇದ್ದವರು ಈಗ ಅಧಿಕಾರ ಸಿಕ್ಕಿದೆ ಅಂತ ಹೇಳಿ ಮಾಡುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.