Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್ನಿಂದ ಆಕ್ಷೇಪ
ಪ್ರಧಾನಿ ಮೋದಿಗೆ ಅವಕಾಶ ನೀಡಲು ಈ ಕ್ರಮ: ಕಾಂಗ್ರೆಸ್ ನಾಯಕರು
Team Udayavani, Nov 15, 2024, 11:45 PM IST
ಗೊಡ್ಡಾ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಟೇಕ್ ಆಫ್ಗೆ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಅನುಮತಿ ನೀಡದ ಕಾರಣ ಚುನಾವಣ ಪ್ರಚಾರಕ್ಕೆ 45 ನಿಮಿಷ ವಿಳಂಬವಾಗಿದೆ. ಹೀಗೆಂದು ಕಾಂಗ್ರೆಸ್ ಆರೋಪಿಸಿ ಚುನಾವಣ ಆಯೋಗಕ್ಕೆ ದೂರು ನೀಡಿದೆ.
ಇನ್ನು ‘ಕಾಂಗ್ರೆಸ್ನ ಪ್ರಚಾರದ ವೇಳಾಪಟ್ಟಿಗೆ ಅಡ್ಡಿಪಡಿಸ ಲೆಂದೇ ಹೀಗೆ ಮಾಡಲಾಗಿದ್ದು, ಡಿಯೋಘರ್ನಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನಿಗೆ ಎಟಿಸಿ ಅಧಿಕಾರಿಗಳು ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಪ್ರಚಾರದಲ್ಲಿ ಸಮಾನ ಅವಕಾಶ ಇರಬೇಕು. ಪ್ರಧಾನಿಗಳ ಪ್ರಚಾರಕ್ಕೆ ಇತರರ ಪ್ರಚಾರಕ್ಕಿಂತ ಹೆಚ್ಚು ಆಧ್ಯತೆ ನೀಡಲಾಗುತ್ತಿದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ. ಝಾರ್ಖಂಡ್ನ 2 ರ್ಯಾಲಿಗಳಲ್ಲಿ ಮಾತನಾಡಿದ ರಾಹುಲ್ ಬಡವರ ವೆಚ್ಚದಲ್ಲಿ ಪ್ರಧಾನಿ ಮೋದಿ ಶ್ರೀಮಂತರ ಹಿತ ಕಾಯುತ್ತಿದ್ದಾರೆ. ಮೋದಿ ನೇತೃತ್ವದ ಸರಕಾರ ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದೂ ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.