Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
ವಾಯು ಮಾಲಿನ್ಯದ ಭೀಕರ ಪರಿಣಾಮ
Team Udayavani, Nov 16, 2024, 7:40 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ವಲಯದಲ್ಲಿ ಮಾಲಿನ್ಯದ ಪ್ರಮಾಣ ದಿನೇ ದಿನೆ ಹೆಚ್ಚುತ್ತಿದ್ದು, ಶುಕ್ರವಾರ ವಾಯು ಗುಣಮಟ್ಟದ ಸೂಚ್ಯಂಕ 411ಕ್ಕೆ ಕುಸಿದಿದೆ. ದಿಲ್ಲಿಯ ಮಲಿನ ಗಾಳಿಯ ಉಸಿರಾಟವು ದಿನವೊಂದಕ್ಕೆ 25 ಸಿಗರೇಟ್ ಸೇದುವುದಕ್ಕೆ ಸಮ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯಲ್ಲಿ ಮಾಲಿನ್ಯ 3 ದಿನಗಳಿಂದ ಗಂಭೀರ ಸ್ಥಿತಿಯಲ್ಲೇ ಇರುವುದರಿಂದ ವಾಯು ಗುಣ ಮಟ್ಟ ನಿಯಂತ್ರಣ ಮಂಡಳಿಯು ರಾಜಧಾನಿ ವಲಯದಲ್ಲಿ 3ನೇ ಹಂತದ ನಿಯಂತ್ರಣವನ್ನು ಹೇರಿದೆ. ಹೀಗಾಗಿ ಕಟ್ಟಡಗಳ ನಿರ್ಮಾಣ, ಧ್ವಂಸ, ಕೈಗಾರಿಕೆಗಳಿಗೆ ನಿರ್ಬಂಧ ಹಾಗೂ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ವಾಹನ ಗಳನ್ನು ನಿಷೇಧಿಸಲಾಗಿದೆ.
ಕ್ಯಾನ್ಸರ್ ಭೀತಿ
ರಾಜಧಾನಿಯಲ್ಲಿ ವಿಷಾನಿಲ ಮಿಶ್ರಿತ ಗಾಳಿ ದಟ್ಟ ಮಂಜಿನಂತೆ ಆವರಿಸಿದ್ದು, ಶ್ವಾಸಕೋಶ ಸಹಿತ ಹಲವು ರೀತಿಯ ಕ್ಯಾನ್ಸರ್ ಜನರನ್ನು ಕಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ದಿಲ್ಲಿಯ ವಾತಾವರಣದಲ್ಲಿ ಧೂಳಿನ ಪ್ರಮಾಣ ಪ್ರತೀ ಘನ ಮೀಟರ್‌ಗೆ 247 ಮಿ. ಗ್ರಾಂನಷ್ಟಿದೆ. ಇದರ ಆರೋಗ್ಯಕರ ಪ್ರಮಾಣ 15 ಮಿಲಿಗ್ರಾಂ ಮಾತ್ರ. ಅಲ್ಲದೆ ದಿಲ್ಲಿಯ ಗಾಳಿಯಲ್ಲಿ ಗಂಧಕದ ಡೈಆಕ್ಸೆಡ್, ಇಂಗಾಲದ ಮೋನಾಕ್ಸೆ„ಡ್ ಹೆಚ್ಚಿದ್ದು, ಜನರ ಆಯುಷ್ಯ 7.8 ವರ್ಷ ಕುಸಿಯಬಹುದು ಎಂದು ಅಮೆರಿಕದ ಸಂಸ್ಥೆಯೊಂದು ತನ್ನ ವರದಿಯಲ್ಲಿ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.