Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
ಸವಿರುಚಿಯೊಂದಿಗೆ ಸದವಕಾಶ ಸೃಷ್ಟಿಸುತ್ತಿರುವ "ಶ್ರೀರುಚಿ'
Team Udayavani, Nov 16, 2024, 3:00 PM IST
ವಿದೇಶದಲ್ಲಿ ನೆಲೆಸಿದ ನಮಗೆ ನಮ್ಮ ಸ್ವದೇಶದ ನೆನಪು ಪ್ರತೀಕ್ಷಣವೂ ಮೂಡುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಸಂಪ್ರದಾಯದ ಅಡುಗೆಯ ರುಚಿ ಮತ್ತು ಖಾದ್ಯ ವಸ್ತುಗಳ ಬಗೆಗಿನ ನೆನಪುಗಳು ಇನ್ನೂ ಹೆಚ್ಚು ಹೊಮ್ಮುತ್ತವೆ.
ಕೆಲವರಿಗೆ ತಮ್ಮ ಊರಿನ ಅಡುಗೆಯ ಹಂಬಲ ಎಷ್ಟು ತೀವ್ರವಾಗಿರುತ್ತದೆಯೆಂದರೆ, ತಮ್ಮ ಊರಿಗೆ ಹೋದಾಗ ಅಲ್ಲಿಂದ ಸರಕುಪೆಟ್ಟಿಗೆಯಲ್ಲಿ ಆ ವಸ್ತುಗಳನ್ನು ತಂದೂ ಬಿಡುತ್ತಾರೆ ಅಥವಾ ಅಂಚೆ ಮೂಲಕ ವಿದೇಶಕ್ಕೆ ತಲುಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅನಿವಾಸಿಗಳು ಭಾರತದ ಸಣ್ಣ ಕೈಗಾರಿಕೆಗಳ ಸಹಾಯದಿಂದ, ತಮ್ಮ ತವಕದ ಖಾದ್ಯ ವಸ್ತುಗಳನ್ನು ವಿದೇಶದಲ್ಲಿ ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ ನಾನಾ ಪ್ರದೇಶಗಳಲ್ಲಿ ತಿನಿಸುಗಳ ವೈಶಿಷ್ಟ್ಯತೆಯು ಕಂಡುಬರುತ್ತದೆ. ಜನಪ್ರಿಯ ಖಾದ್ಯ ವಸ್ತುಗಳನ್ನು ಆಮದು ಮಾಡುವ ಸಣ್ಣ ಪ್ರಮಾಣದ ವ್ಯಾಪಾರಗಳು ಕೋವಿಡ್ ಅನಂತರದ ಅವಧಿಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಇಂಗ್ಲೆಂಡಿನಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಖಾದ್ಯ ವಸ್ತುಗಳಿಗೆ ಸಾಕಷ್ಟು ಅಂಗಡಿಗಳು ಮತ್ತು ಉಪಹಾರ ಕೇಂದ್ರಗಳಿವೆ. ಆದರೆ ಕರ್ನಾಟಕದ, ವಿಶೇಷವಾಗಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ನಾನಾ ಚಟ್ನಿ ಪುಡಿಗಳಂತಹ ಖಾದ್ಯ ವಸ್ತುಗಳಿಗೆ ವ್ಯಾಪಕ ಅಂಗಡಿಗಳು ಇಲ್ಲ.
ಮತ್ತೊಂದು ಮುಖ್ಯ ವಿಚಾರವೆಂದರೆ, ಗ್ರಾಹಕರಿಗೆ ತಮ್ಮ ಇಷ್ಟದ ಖಾದ್ಯ ವಸ್ತುಗಳ ಮಾರುಕಟ್ಟೆ ಹೆಸರು (ಬ್ರ್ಯಾಂಡ್) ತಿಳಿದಿರಬಹುದು, ಆದರೆ ಭಾರತೀಯ ಖಾದ್ಯ ಉತ್ಪಾದಕರಿಗೆ ರಫ್ತು ಮಾಡಲು ಸುಲಭ ಸಂಪರ್ಕವಿಲ್ಲ. ಈ ಅಂತರವನ್ನು ಅವಕಾಶವನ್ನಾಗಿ ಗುರುತಿಸಿದ ಮಹೇಶ್ ಮಲಕಣ್ಣವರ್, ತಮ್ಮ ಪತ್ನಿ ಪ್ರಭಾ ಮಲಕಣ್ಣವರ್ ಅವರೊಂದಿಗೆ, ಖಾದ್ಯ ವಸ್ತುಗಳ ಸರಬರಾಜು ಸರಪಳಿಯನ್ನು ನಿರ್ಮಿಸಿದ್ದಾರೆ.
ಮಲಕಣ್ಣವರ್ ದಂಪತಿ, “ಶ್ರೀರುಚಿ’ ಎಂಬ ಆನ್‌ಲೈನ್www.shreeruchi.co.uk ಜಾಲತಾಣದ ಮೂಲಕ, ಭಾರತೀಯ ಮೂಲದ ಖಾದ್ಯ ಉತ್ಪಾದಕರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲು ಅವಕಾಶ ಒದಗಿಸಿದ್ದಾರೆ. ಈ ಪೋರ್ಟಲ್ ಒಂದು ಕೇಂದ್ರೀಕೃತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾರಾಟಗಾರರು ಮಾರುಕಟ್ಟೆ ಒಳನೋಟಗಳನ್ನು ಪಡೆಯಲು, ಸಂಪರ್ಕಗಳನ್ನು ಮಾಡಿಕೊಳ್ಳಲು ಮತ್ತು ಸುಗಮ ರಫ್ತು ಕಾರ್ಯಾಚರಣೆಗೆ ಅಗತ್ಯ ಸಂಪನ್ಮೂಲಗಳ ಪ್ರವೇಶವನ್ನು ಹೊಂದಲು ಸಹಾಯಮಾಡುತ್ತದೆ. ಉತ್ಪನ್ನ ಪಟ್ಟಿ, ಮಾರ್ಗದರ್ಶನ, ಲಾಜಿಸ್ಟಿಕ್ಸ್ ಬೆಂಬಲದಂತಹ ಪರಿಕರಗಳು ಪೋರ್ಟಲ್ ಮೂಲಕ ರಫ್ತು ಮಾಡುವವರಿಗೆ ಗೋಚರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ.
ಈ ಹೊಸ ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವ್ಯಾಪಾರ ದಾವಣಗೆರೆಯ ಪ್ರಸಿದ್ಧ ಶರಭೇಶ್ವರ ಹೊಟೇಲ್ ಖಾನಾವಳಿ. ದಶಕಗಳಿಂದ ಜವಾರಿ ಶೈಲಿಯ ಅಡುಗೆಯನ್ನು ಗ್ರಾಹಕರಿಗೆ ಉಣಬಡಿಸುತ್ತಿರುವ ಈ ಸಂಸ್ಥೆ, ಉತ್ತರ ಕರ್ನಾಟಕದ ರುಚಿಕರ ಮತ್ತು ಆರೋಗ್ಯಕರ ಪದಾರ್ಥಗಳ ಸರಪಳಿಯನ್ನು ಪ್ರಾರಂಭಿಸಲು ಶ್ರೀರುಚಿಯೊಂದಿಗೆ ಸಹಯೋಗದೊಂದಿಗೆ ಮುಂದಾಗಿದೆ. ಅವರ ಚಟ್ನಿ ಪುಡಿ ಮತ್ತು ಕಷಾಯ ಪುಡಿಗಳು ಈಗಾಗಲೇ ಬೇಡಿಕೆಯಲ್ಲಿವೆ. ಮಹೇಶ್ ಕೇವಲ ಉತ್ತರ ಕರ್ನಾಟಕದ ಖಾದ್ಯವಸ್ತುಗಳನ್ನಷ್ಟೇ ಅಲ್ಲದೆ, ವಿವಿಧ ರೀತಿಯ ಉಪಹಾರಗಳಿಗೆ ಸಹ ಅವಕಾಶ ಒದಗಿಸುತ್ತಿದ್ದಾರೆ.
ಅವರು ಖುದ್ದಾಗಿ ಆಹಾರ ಉತ್ಪಾದನೆ ನಡೆಯುವ ಕಾರ್ಖಾನೆಗಳಿಗೆ ಭೇಟಿ ನೀಡಿ, ಗುಣಮಟ್ಟ, ತಾಜಾ ಕಚ್ಚಾ ವಸ್ತುಗಳ ಬಳಕೆ ಮತ್ತು ಕಾರ್ಮಿಕರ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಅನಂತರವೇ, ಆ ಉತ್ಪಾದಕರಿಗೆ ತಮ್ಮ ಜಾಲತಾಣ “ಶ್ರೀರುಚಿ’ ಮೂಲಕ ಉತ್ಪನ್ನ ಮಾರಾಟದ ಅವಕಾಶವನ್ನು ಒದಗಿಸುತ್ತಾರೆ. ಕರ್ನಾಟಕದ ಶುದ್ಧ ರುಚಿಯನ್ನು ನಿಮ್ಮ ಮನೆಗೆ ತರುವದು ಶ್ರೀರುಚಿಯ ಉದ್ದೇಶ. ಕರ್ನಾಟಕದಿಂದ ಸ್ಥಳೀಯ ಮೂಲದ ಪದಾರ್ಥಗಳನ್ನು ಬಳಸಿಕೊಂಡು, ಸಾಂಪ್ರದಾಯಿಕ ವಿಧಾನದಲ್ಲಿ ರುಚಿಕರ ಮತ್ತು ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಲು ನಾವು ಬದ್ಧರಾಗಿದ್ದೇವೆ.
ಕರ್ನಾಟಕದ ಪಾಕಶಾಲೆಯ ಪರಂಪರೆಯನ್ನು ಸಂರಕ್ಷಿಸುತ್ತಾ, ಭಿನ್ನತೆಯ ಆಹಾರವಸ್ತುಗಳ ಪೂರೈಕೆಯನ್ನು ಈಡೇರಿಸುವ ಸಾಮರ್ಥ್ಯವಿರುವ ಎಲ್ಲ ಉತ್ಪಾದಕರಿಗೆ ಯುನೈಟೆಡ್ ಕಿಂಗ್‌ಡಮ್ ಮಾರುಕಟ್ಟೆಗೆ ಪ್ರವೇಶಿಸುವ ಅವಕಾಶವನ್ನು ಒದಗಿಸಲು ಮಹೇಶ್ ಅವರ ಶ್ರೀರುಚಿ ವ್ಯಾಪಾರವು ಉತ್ಸುಕವಾಗಿದೆ.
*ರಾಧಿಕಾ ಜೋಶಿ, ಲಂಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
Desi Swara@150: ಪೊಲೇಂಡ್ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.