Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
ಆದಿ ಚುಂಚನಗಿರಿ ಮಠದಲ್ಲಿ ಬೆಳೆದವನು ನಾನು..
Team Udayavani, Nov 16, 2024, 4:21 PM IST
ಮಂಗಳೂರು: ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆಂದು ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಮರ ಮತ ನನಗೆ ಬೇಕಾಗಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ವೋಟ್ ಬೇಡ ಎಂದು ಹೇಳಿ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ ಎಷ್ಟು ಸರಿ ಎಂದು ಕೇಳಿದ್ದೆ. ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವರೆಂದು ಲಘವಾಗಿ ಮಾತನಾಡಿದ್ದಾರೆ. ಯಾಕೆ ಅವರ ಬಳಿ ವೋಟ್ ಕೇಳುತ್ತೀರಿ ಎಂದಿದ್ದೆ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.
ಮಂಗಳೂರಿನಲ್ಲಿ ಶನಿವಾರ (ನ.16) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಂಗಡಿ, ಗುಜರಿಯಂಗಡಿಯಲ್ಲಿ ದುಡಿದು ದೇವೇಗೌಡರನ್ನು ಕೊಂಡುಕೊಳ್ಳುತ್ತಾರಾ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಹೌದು ಸ್ವಾಮಿ ನಾವು ಬಡವರು, ಅವರ ಬಳಿ ಯಾಕೆ ವೋಟು ಕೇಳುತ್ತೀರಿ? ಕುಮಾರಸ್ವಾಮಿಗೆ ಅದೇ ಪ್ರಶ್ನೆ ನಂದು. ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ. ಯೂ ಟರ್ನ್ ಕುಮಾರಸ್ವಾಮಿ ಎಂದು ಅವರಿಗೆ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಅವರು. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಹೇಳಿರುವುದು. ಒಕ್ಕಲಿಗರ ಬಗ್ಗೆ ನನಗೆ ಗೌರವ ಇದೆ. ಒಕ್ಕಲಿಗರ ವಿರುದ್ದ ಯಾವ ಹೇಳಿಕೆ ನೀಡಿಲ್ಲ ಎಂದು ಜಮೀರ್ ಹೇಳಿದರು.
ಲೋಕಾಯುಕ್ತ ನೊಟೀಸ್ ಬಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಆ ಕುರಿತು ಬರುತ್ತಿದೆ. ನೊಟೀಸ್ ಕೊಡುವುದು ಸಾಮಾನ್ಯ. ಇಡಿಯವರು ಎಸಿಬಿಗೆ ಪಾವರ್ಡ್ ಮಾಡಿದ್ದಾರೆ, ಕೇಸ್ ಅಲ್ಲಿಂದ ಲೋಕಯುಕ್ತಾಗೆ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇ ಬೇಕು ಎಂದರು.
ನಾನು ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಸ್ವಾಮೀಜಿ. ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದವನು ನಾನು. ಸ್ವಾಮೀಜಿ ಬಳಿ ಕೇಳಲು ಹೇಳಿ. ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವ ಎಂದು ಜಮೀರ್ ಅಹಮದ್ ಹೇಳಿದರು.
ಕಾಲಾ ಹೇಳಿಕೆಗೆ ಡಿಕೆಶಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಂದು ನನಗೆ, ಅವರ ಅಭಿಪ್ರಾಯ ಹೇಳಿದ್ದಾರೆ. ಏನಂತ ಹೇಳಿದ್ದಾರೆ. ಡಿಕೆಶಿ ಹೇಳಿಕೆ ನಾನು ನೋಡಿಲ್ಲ. ಹೇಳಿಕೆ ನೋಡಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.