Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಮತ್ತೊಂದು ಪ್ರದರ್ಶನ

Team Udayavani, Nov 16, 2024, 6:04 PM IST

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ನವೆಂಬರ್‌ ಬಂತೆಂದರೆ ಕನ್ನಡಿಗರಿಗೆಲ್ಲರಿಗೂ ಹುರುಪು. ರಾಜ್ಯೋತ್ಸವದ ಸಂಭ್ರಮ. ಎಲ್ಲೆಡೆ ಹಳದಿ ಕೆಂಪು ಬಣ್ಣಗಳಿಂದ ತುಂಬಿದ ರೋಮಾಂಚನ. ಕನ್ನಡವೆಂದರೆ ಬರಿ ಕರ್ನಾಟಕವಲ್ಲ ಅಸೀಮ ಅದಿಗಂತವೆಂಬಂತೆ ಸಾಗರದಾಚೆಯೂ ಕನ್ನಡಹಬ್ಬದ ಉತ್ಸಾಹ ಇನಿತು ಹೆಚ್ಚೇ ಇರುತ್ತದೆ. ಕನ್ನಡಕೂಟ ಲಕ್ಸಂಬರ್ಗ್‌ ಕನ್ನಡೋತ್ಸವವನ್ನು ಆಚರಿಸಿ ಅದರೊಟ್ಟಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಇ.ವಿ. ತಂಡದ ವತಿಯಿಂದ ಬಿಲ್ಲಹಬ್ಬ ಯಕ್ಷಗಾನವನ್ನು ನಡೆಸಿಕೊಟ್ಟಿದೆ.

ಯಕ್ಷಗಾನ ಗುರು ಅಜಿತ್‌ ಪ್ರಭು ಹಾಗೂ ನರೇಂದ್ರ ಶೆಣೈರವರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯುರೋಪ್‌ ಘಟಕ ಉದ್ಘಾಟನೆಯಾಗಿ, “ಯಕ್ಷ ಶಿಕ್ಷಣ’ ಪರಿಕಲ್ಪನೆಯ ಅಡಿ ಕಲಿಕಾಸಕ್ತರಿಗೆ ಯಕ್ಷಗಾನವನ್ನು ಕಲಿಸುತ್ತಾ ಅದನ್ನು ವೇದಿಕೆಗಳಲ್ಲಿ ಪ್ರದರ್ಶಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಿಶೇಷ ವೇಷಭೂಷಣ, ನೃತ್ಯ, ಸಂಭಾಷಣೆಯ ಸಂಯೋಜನೆಯಲ್ಲಿ ರಾಮಾಯಣ, ಮಹಾಭಾರತ ಪ್ರಸಂಗಗಳನ್ನು ಮನೋಜ್ಞವಾಗಿ ನೋಡುಗರಿಗೆ ತಲುಪಿಸಲಾಗುತ್ತದೆ.

ಬಿಲ್ಲಹಬ್ಬವು ಪೌರಾಣಿಕ ಕಥಾ ಹಿನ್ನಲೆಯನ್ನು ಹೊಂದಿದ್ದು , ಬಿಲ್ಲಹಬ್ಬವು ಶೌರ್ಯ ಪ್ರದರ್ಶನಕ್ಕೆ ಸಂಬಂಧಪಟ್ಟ ಒಂದು ಕಾರ್ಯಕ್ರಮ. ಕಂಸನ ಹತ್ತಿರ ಪ್ರತೀ ದಿನವು ಪೂಜಿಸಲಾಗುತ್ತಿದ್ದ ಬೃಹತ್‌ ಗಾತ್ರದ ಒಂದು ಧನಸ್ಸು ಇತ್ತು. ಇದನ್ನು ಒಂದು ದೊಡ್ಡ ಪೆಟ್ಟಿಗೆಯೊಳಗೆ ಇಡಲಾಗುತ್ತಿತ್ತು. ಈ ಬಿಲ್ಲನ್ನು ವರ್ಷಕ್ಕೊಮ್ಮೆ ಕಂಸನು ಶೌರ್ಯ ಪ್ರದರ್ಶನಕ್ಕಾಗಿ ಬಳಸುತ್ತಿದ್ದನು.

ಪೆಟ್ಟಿಗೆಯಲ್ಲಿರುವ ಬಿಲ್ಲನ್ನು ಬಿಲ್ಲಾಳುಗಳು ತೆಗೆದು ನೇರವಾಗಿ ನಿಲ್ಲಿಸಿ ಅದರ ಎದೆ ಏರಿಸಬೇಕೆಂಬುದು ಬಿಲ್ಲಹಬ್ಬದ ಪ್ರಕ್ರಿಯೆ.
ಮಧುರೆ ರಾಜನಾದ ಕಂಸ ತನ್ನ ಸೋದರಿ ದೇವಕಿ-ವಸುದೇವರ ಅಷ್ಟಮ ಪುತ್ರನಿಂದಲೇ ತನ್ನ ಅಂತ್ಯ ಎಂದು ತಿಳಿದು, ದೇವಕಿಯ ಎಲ್ಲ ಶಿಶುಗಳನ್ನು ಕೊಲ್ಲುವ ಕಂಸ, ಕೃಷ್ಣನನ್ನು ಕೊಲ್ಲಲು ಮಾಡುವ ಪ್ರಯತ್ನಗಳೆಲ್ಲವೂ ವ್ಯರ್ಥವಾಗತೊಡಗಿತು.

ಕೃಷ್ಣನು ಬೆಳೆಯುತ್ತಿದ್ದಂತೆ ಅವನ ಲೀಲೆಗಳು ಕಂಸನ ಕಿವಿಗೆ ಬೀಳತೊಡಗಿದವು. ಹಾಗಾಗಿ ಮಥುರಾ ನಗರದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಬಿಲ್ಲಹಬ್ಬದ ಸಂದರ್ಭದಲ್ಲಿ ಕೃಷ್ಣ-ಬಲರಾಮರಿಗೆ ಅಕ್ರೂರನಿಂದ ಆಹ್ವಾನವನ್ನು ಕಳುಹಿಸಿ ಕೊಲ್ಲಲು ನಡೆಸುವ ಸಂಚು ಮತ್ತು ಅದನ್ನು ಅರಿತ ಕೃಷ್ಣ – ಬಲರಾಮನಿಂದಲೇ ಕಂಸನ ಅಂತ್ಯವಾಗುವ ಕಥಾ ಹಂದರವನ್ನು ಯಕ್ಷಗಾನದ ಮೂಲಕ ಪ್ರದರ್ಶಿಸಲಾಯಿತು.

ಕೃಷ್ಣನಾಗಿ ಅಜಿತ್‌ ಪ್ರಭು ತಲ್ಲೂರು, ಬಲರಾಮನಾಗಿ ಅಥರ್ವ್‌ ರಾವ್‌, ಕಂಸನಾಗಿ ಬಿಲ್ಜಿಯಂನ ಕಿಶೋರ್‌ ಕುಮಾರ್‌, ರಜಕನ ಪಾತ್ರದಲ್ಲಿ ಅರವಿಂದ್‌ ಸುಬ್ರಹ್ಮಣ್ಯ, ಕೃಷ್ಣಾವತಾರ ವೇಷದಲ್ಲಿ ಆದಿಶೇಷ ಅರವಿಂದ ಬಾಯಾರಿ, ಖುಷಿ ಶೆಣೈ, ಸ್ನಿಗಾœ ಚೌಹಾØಣ್‌ ನೆರೆದವರನ್ನು ರೋಮಾಂಚನಗೊಳಿಸಿದರು. ದುಃಸ್ವಪ್ನದಿಂದ ಬೆದರಿದ ಕಂಸ ಭಯದೊಂದಿಗೆ ನೆಲಕ್ಕುರುಳಿ ಆದರಿಂದ ಕೃಷ್ಣ-ಬಲರಾಮರನ್ನು ಕೊಲ್ಲುವ ಸಂಚು ಹೂಡುವ ಮನಸ್ಥಿತಿಯನ್ನು ತೋರಿದರೆ ಕೃಷ್ಣನಾಗಿ ಅಜಿತ್‌ರವರು ತಂತ್ರಕ್ಕೆ ಪ್ರತಿತಂತ್ರ ಹೂಡುವ, ನಿರರ್ಗಳ ಸಂಭಾಷಣೆಯಿಂದ ನೋಡುಗರನ್ನು ಹಿಡಿದಿಟ್ಟರು.

ಮೃತ್ಯು, ಕೂರ್ಮ, ವರಹ, ನರಸಿಂಹ, ವಾಮನ, ಪರಶುರಾಮ, ರಾಮ, ಅನಂತರ ಕೃಷ್ಣನಾಗಿ ಶ್ರೀಹರಿಯೇ ಬಂದಿದ್ದಾನೆ ಅನ್ನುವ ಸೂಚನೆ ಕಂಸನ ಕನಸಲ್ಲಿ ಬರುವ ಸನ್ನಿವೇಶವನ್ನು ಅಭಿನಯಿಸಿ ಪುಟಾಣಿಗಳು ನೆರೆದವರ ಚಪ್ಪಾಳೆ ಗಿಟ್ಟಿಸಿದರು. ರಜಕನ ಪಾತ್ರದಲ್ಲಿ ಅರವಿಂದ್‌ರವರು ಹಾಸ್ಯದ ಹೊನಲನ್ನು ಹರಿಸಿದರು. ಒಟ್ಟಾರೆಯಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ವತಿಯಿಂದ ಮತ್ತೂಂದು ಯಶಸ್ವಿ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

ಯಕ್ಷಗಾನದ ಬಡಗುತಿಟ್ಟಿನ ಹೆಸರಾಂತ ಭಾಗವತರು ಜನ್ಸಾಲೆ ರಾಘವೇಂದ್ರ ಆಚಾರ್ಯರವರ ಮುದ್ರಿಯ ಹಿಮ್ಮೇಳದೊಂದಿಗೆ ಒಂದು ಸುಂದರ ಪ್ರದರ್ಶನ ಅಚ್ಚುಕಟ್ಟಾಗಿ ಮೂಡಿಬರಲು ಸ್ವಾತಿ ಅಜಿತ್‌ ಪ್ರಭು, ರೇಷ್ಮಾ ಅರವಿಂದ್‌, ರಶ್ಮಿ ಸುಹಾಸ್‌, ರಾಧಿಕಾ ಶೆಣೈರವರು ಸ್ವಯಂ ಸೇವಕರಾಗಿ ಸಹಾಯಹಸ್ತ ನೀಡಿದರು. ಅಂತಿಮವಾಗಿ ಮಾತನಾಡಿದ ಅಜಿತ್‌ರವರು ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ಯಕ್ಷಗಾನದಂತಹ ಕಲೆಯನ್ನು ಪ್ರದರ್ಶಿಸುವುದು ಒಂದು ಶೋಭೆ. 2018ರಿಂದ ಪ್ರದರ್ಶನವನ್ನು ನೀಡುತ್ತಾ ಬಂದಿದ್ದು ಜರ್ಮನಿಯಲ್ಲಿ 13-14 ಕಲಾವಿದರು ಇಂದು ಯಕ್ಷಗಾನ ಮಾಡಲು ಸಮರ್ಥರಾಗಿದ್ದಾರೆ.

ಜರ್ಮನಿಯ ಹಲವಾರು ನಗರಗಳಿಂದ ಕಲಿಕಾರ್ಥಿಗಳಿರುವುದರಿಂದ ಅವರನ್ನೆಲ್ಲ ಒಟ್ಟುಗೂಡಿಸುವುದು, ಪ್ರದರ್ಶನಕ್ಕಾಗಿ ಸಿದ್ಧಗೊಳ್ಳುವುದು ಒಂದು ಸವಾಲೇ ಸರಿ. ಇಂತಹ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

*ಶೋಭಾ ಚೌಹ್ಹಾಣ್‌, ಫ್ರಾಂಕ್‌ಫ‌ರ್ಟ್‌

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swara@150: ಪೊಲೇಂಡ್‌ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ

Desi Swara@150: ಪೊಲೇಂಡ್‌ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.