Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ 4ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾ ಕೂಟ
Team Udayavani, Nov 16, 2024, 7:25 PM IST
ಉಡುಪಿ: ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳುವ ಕಲೆ ಕರಾಟೆ. ಈ ಕಲೆಯನ್ನು ನಿರಂತರ ಅಭ್ಯಾಸ ಮಾಡುವುದು ಇಂದಿನ ಅಗತ್ಯತೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಕರ್ನಾಟಕ (ಬುಡೋಕಾನ್ ಕರಾಟೆ ಇಂಟರ್ ನ್ಯಾಶನಲ್ ಆಸ್ಟ್ರೇಲಿಯ) ಇದರ ನೇತೃತ್ವದಲ್ಲಿ ನ.16ರಂದು ಶ್ರೀಕೃಷ್ಣ ಮಠದ ಮಧ್ವಾಂಗಣದಲ್ಲಿ ನಡೆದ 4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾ ಕೂಟವನ್ನು ಪಟ್ಟದ ಕಿರಿಯ ಶ್ರೀಗಳಾದ ಸುಶ್ರೀoದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಪ್ರಶಸ್ತಿ ಫಲಕಗಳನ್ನು ಅನಾವರಣಗೊಳಿಸಿ ಆಶೀರ್ವಚನದ ನುಡಿಗಳನ್ನಾಡಿದರು.
ಶ್ರೀಕೃಷ್ಣ ಮಲ್ಲ ಯುದ್ಧದಲ್ಲಿ ನಿಪುಣ. ಮಲ್ಲನ ಅಧಿಪತಿ ಕೃಷ್ಣನ ನಾಡಿನಲ್ಲಿ ಅಭೂತಪೂರ್ವ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿರುವುದು ಕೃಷ್ಣನಿಗೂ ಅತ್ಯಂತ ಸಂತೋಷದಾಯಕ ವಿಷಯವಾಗಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ ಎಲ್ಲರೂ ಸ್ವಯಂ ರಕ್ಷಣೆಗಾಗಿ ಇಂತಹ ಕಲೆಯ ಅಭ್ಯಾಸ ಮಾಡುವುದು ಅವಶ್ಯಕ. ಈ ಸ್ಪರ್ಧೆ ಯಶಸ್ವಿಯಾಗಿ ನಡೆಯಲಿ. ಆಯೋಜಿಸಿದ ಸಂಸ್ಥೆಗೂ ಭಾಗವಹಿಸಿದ ಎಲ್ಲರಿಗೂ ಶ್ರೀ ಕೃಷ್ಣ ಶ್ರೇಯಸ್ಸನ್ನುoಟುಮಾಡಲಿ ಎಂದು ಹರಸಿದರು.
ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವ ಸಲಹೆಗಾರ ಪ್ರಕಾಶ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ತುಳುನಾಡಿಗೂ ಕರಾಟೆ ಕಲೆಗೂ ಇರುವ ಸ್ವಾಮ್ಯತೆಯನ್ನು ಉಲ್ಲೇಖಿಸಿ ಕರಾಟೆ ಕಲೆಯ ಅಭ್ಯಾಸದ ಔಚಿತ್ಯವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಹಿರಿಯ ಕರಾಟೆ ಶಿಕ್ಷಕ ಪ್ರಭಾಕರ ಕುಂದರ್ ಮಲ್ಪೆ, ಬಿಲ್ಲವರ ಸೇವಾ ಸಂಘ(ರಿ.) ಮಲ್ಪೆ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಮತ್ತು ಶ್ರೀ ನಾರಾಯಣ ಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ. ಉಪಾಧ್ಯಕ್ಷೆ ವಿಜಯಾ ಜಿ. ಬಂಗೇರ, ಮುಳುಗು ತಜ್ಞ ಈಶ್ವರ್ ಮಲ್ಪೆ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಸಮಾಜ ಸೇವಕ ಹರಿಶ್ಚಂದ್ರ ಅಂಬಲಪಾಡಿ ಇವರನ್ನು ಸನ್ಮಾನಿಸಲಾಯಿತು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಶ್ರೀ ಕೃಷ್ಣ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್, ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸ್ಪರ್ಧಾ ಕೂಟದ ಸಂಘಟಕ ವಾಮನ್ ಪಾಲನ್, ಸೌತ್ ಏಷ್ಯಾ ಚೀಫ್ ಶೋಟೋಕಾನ್ ವರ್ಲ್ಡ್ ಕರಾಟೆ AKSKA ರಾಜ್ಯ ಉಪಾಧ್ಯಕ್ಷ ವಿನೋದ್ ಶಿವಮೊಗ್ಗ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ದ.ಕ. ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಈಶ್ವರ್ ಕಟೀಲ್, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತಾಕ್ಷ ಉದ್ಯಾವರ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಸಾಲ್ಯಾನ್, ಶಿವಮೊಗ್ಗ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಸ್ವಾಮಿ, ಕೆಡಿಎಫ್ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ ಕುಂದಾಪುರ ಮುಖ್ಯ ಶಿಕ್ಷಕ ಕಿರಣ್ ಕುಂದಾಪುರ, ಕೆನಿ ಮಾಬುನಿ ಕಿಟೋರಿಯೋ ಕರಾಟೆ ಉಡುಪಿ ಮುಖ್ಯ ಶಿಕ್ಷಕ ಸುಂದರಂ, ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಡೊ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯ ಶಿಕ್ಷಕ ರಘುರಾಜ್ ಪಣಿಯಾಡಿ, ವಿ.ಕೆ ಬುಡೋಕಾನ್ ಸೆಲ್ಫ್ ಡಿಫೆನ್ಸ್ ಅಂಡ್ ಕರಾಟೆ ಅಸೋಸಿಯೇಷನ್ ಮುಖ್ಯ ಶಿಕ್ಷಕ ಅಶೋಕ್ ಕುಲಾಲ್, ಬುಡೋಕಾನ್ ಕರಾಟೆ ಯುನಿಟಿ ಅಸೋಸಿಯೇಷನ್ ಇಂಡಿಯಾ ಮುಖ್ಯ ಶಿಕ್ಷಕ ಹರೀಶ್ ಬೆಳ್ಮಣ್, ಕೆಬಿಕೆ ಹಿರಿಯ ಶಿಕ್ಷಕ ಹರ್ಷ ಭಾಗವತ್ ಸಹಿತ ತೀರ್ಪುಗಾರರು, ವಿವಿಧ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಸ್ಪರ್ದಾಳುಗಳು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ಬಿಕೆಎಸ್ಎ ಉಪಾಧ್ಯಕ್ಷೆ ಅಮೃತಾ ಉಪಾಧ್ಯ ಸ್ವಾಗತಿಸಿದರು. ಪ್ರತೀಕ್ಷಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಬಿಕೆಎಸ್ಎ ಕಾರ್ಯದರ್ಶಿ ಮೇಘ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.