Bengaluru; ಮೊಬೈಲ್ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !
Team Udayavani, Nov 17, 2024, 6:30 AM IST
ಬೆಂಗಳೂರು: ಮೊಬೈಲ್ ದುರಸ್ತಿ ವಿಚಾರಕ್ಕೆ ತಾಯಿ ಮೇಲೆ ಹಲ್ಲೆಗೆ ಮುಂದಾಗಿದ್ದ ಮಗನಿಗೆ ತಂದೆಯೇ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಲ್ಲದೆ, ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಶಿನಗರ ನಿವಾಸಿ ತೇಜಸ್ (14) ಹತ್ಯೆಗೀಡಾದ ಬಾಲಕ. ಕೃತ್ಯ ಎಸಗಿದ ಆತನ ತಂದೆ ರವಿಕುಮಾರ್ (44)ನನ್ನು ಬಂಧಿಸಲಾಗಿದೆ. ಆರೋಪಿ ರವಿ ಕುಮಾರ್, ಪತ್ನಿ ಶಶಿಕಲಾ ಮತ್ತು ಇಬ್ಬರು ಮಕ್ಕಳಾದ ತೇಜಸ್ ಮತ್ತು ವಿಶಾಲ್ ಜತೆ ಕಾಶಿನಗರದಲ್ಲಿ ವಾಸವಾಗಿದ್ದರು. ಆರೋಪಿ ಮರಗೆಲಸ ಮಾಡುತ್ತಿದ್ದು ಹಿರಿಯ ಪುತ್ರ ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿ. 2ನೇ ಪುತ್ರ ತೇಜಸ್ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ದುಶ್ಚಟಗಳ ದಾಸನಾಗಿದ್ದ. ಇತ್ತ ತಂದೆ ರವಿಕುಮಾರ್ ಮದ್ಯ ವ್ಯಸನಿಯಾಗಿದ್ದು ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆ ಮೊಬೈಲ್ ರಿಪೇರಿ ವಿಚಾರವಾಗಿ ತೇಜಸ್ ಪೋಷಕರ ಜತೆ ಗಲಾಟೆ ಮಾಡಿದ್ದಾನೆ. ಅದರಿಂದ ಕೋಪಗೊಂಡ ತಂದೆ ಹಿಗ್ಗಾಮುಗ್ಗ ಥಳಿಸಿದ್ದರಿಂದ ಮೃತಪಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.