Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Team Udayavani, Nov 17, 2024, 7:13 AM IST
17-11-2024
ಮೇಷ: ತಾಪತ್ರಯಗಳೊಂದಿಗೆ ಹೊಂದಾಣಿಕೆಗೆ ರಜಾದಿನ ಬಳಕೆ! ಬಂಧುಮಿತ್ರರ ಸೌಹಾರ್ದ ಭೇಟಿ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಚಿಂತೆ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.
ವೃಷಭ: ವಿರಾಮದ ಸದುಪಯೋಗಕ್ಕೆ ಪ್ರಯತ್ನ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ಬಂಧುವರ್ಗದವರಲ್ಲಿ ದೇವತಾಕಾರ್ಯ.
ಮಿಥುನ: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವಿದ್ಯಾರ್ಥಿಗಳಿಗೆ ಆಲಸ್ಯ. ಇಷ್ಟದೇವರ ಸ್ಥಳಕ್ಕೆ ಸಂದರ್ಶನ. ಕೇಟರಿಂಗ್ ವ್ಯವಹಾರದವರಿಗೆ ಬಿಡುವಿಲ್ಲದ ದಿನ.
ಕರ್ಕಾಟಕ: ಮನೆಯಲ್ಲಿ ಅನ್ನದಾನದ ಯೋಗ. ವ್ಯವಹಾರ ಸಂಬಂಧ ಅನಿವಾರ್ಯ ಪ್ರಯಾಣ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಪರಿಶ್ರಮಕ್ಕೆ ಮಾದರಿಯಾದ ವ್ಯಕ್ತಿಗೆ ಪುರಸ್ಕಾರ. ದಿನವಿಡೀ ಮಿಶ್ರ ಫಲಗಳ ಅನುಭವ.
ಸಿಂಹ: ಅರ್ಹತೆ ಉಳ್ಳವರನ್ನು ಮಾತ್ರ ಪುರಸ್ಕರಿಸಿ. ವೃತ್ತಿಪರರಿಗೆ ತಪ್ಪಿಸಿಕೊಳ್ಳಲಾರದ ಕೆಲಸದ ಒತ್ತಡ. ಹಿರಿಯರ ಸ್ವಾಸ್ಥ್ಯದ ಕಡೆಗೆ ಗಮನ. ಹತ್ತಿರದ ಪ್ರಾಕೃತಿಕ ತಾಣಕ್ಕೆ ಭೇಟಿ. ಇಷ್ಟಾರ್ಥ ಸಿದ್ಧಿಗಾಗಿ ದೇವತಾ ಪ್ರಾರ್ಥನೆ.
ಕನ್ಯಾ: ವ್ಯಾಪಾರಿ ವರ್ಗದವರಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಬಂಧುಗಳ ಮನೆಯಲ್ಲಿ ದೇವತಾರಾಧನೆ. ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಚಿಂತೆ.
ತುಲಾ: ಪಂಚಮ ಶನಿಯ ಮಹಿಮೆಯಿಂದ ಆರೋಗ್ಯಕ್ಕೆ ಹಾನಿ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ. ಸಂತೃಪ್ತರ ಸಹವಾಸದಿಂದ ಜೀವನಾಸಕ್ತಿ ವೃದ್ಧಿ.
ವೃಶ್ಚಿಕ: ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ಮಕ್ಕಳ ಉದ್ಯಮ ಸುಧಾರಣೆ. ಸಾಹಿತ್ಯ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗಿ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ.
ಧನು: ಕುಟುಂಬಸ್ಥರ ಸೌಹಾರ್ದ ಮಿಲನ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಗೃಹೋದ್ಯಮ, ಹೈನುಗಾರಿಕೆ ಆಸಕ್ತರಿಗೆ ಅನುಕೂಲ.ಗೊಂದಲದಲ್ಲಿರುವ ಎಳೆಯ ವ್ಯಕ್ತಿಗೆ ಮಾರ್ಗದರ್ಶನ.
ಮಕರ: ಒಡಹುಟ್ಟುಗಳ ಭೇಟಿ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಊರಿನ ಮುಖ್ಯ ದೇವಾಲಯಕ್ಕೆ ಭೇಟಿ.ಸಂಗಾತಿಯ ಸಂತೃಪ್ತಿಗಾಗಿ ಪ್ರಾರ್ಥನೆ.
ಕುಂಭ: ಸತ್ಪಾತ್ರರಿಗೆ ಸಕಾಲಿಕ ನೆರವು. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಆಸ್ಪತ್ರೆ, ಅನಾಥಾಲಯಕ್ಕೆ ಭೇಟಿ. ಮನೆಯವರಿಗೆ ಅತಿಥಿ ಸತ್ಕಾರ ಯೋಗ.
ಮೀನ: ನಾಳೆಯ ಮುಖ್ಯ ಕೆಲಸಗಳಿಗೆ ಸಿದ್ಧತೆ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಪ್ರಯತ್ನ. ಹಳೆಯ ಸಹಚರರ ಭೇಟಿ.ಕುಟುಂಬದಲ್ಲಿ ಶುಭಕಾರ್ಯಕ್ಕೆ ತಯಾರಿ. ದಂಪತಿಗಳ ನಡುವೆ ಅನುರಾಗ, ವಿಶ್ವಾಸ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
Horoscope: ದುಡಿಮೆಗೆ ತಕ್ಕ ಪ್ರತಿಫಲದ ಭರವಸೆ ನಿಮ್ಮದಾಗಲಿದೆ
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.