Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
Team Udayavani, Nov 17, 2024, 4:41 PM IST
ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ‘ಕಾಂತಾರ -1’ (Kantara: Chapter 1) ಚಿತ್ರತಂಡದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ದಕ್ಷಿಣ ಭಾರತದಲ್ಲಿ ದೊಡ್ಡ ಹಿಟ್ ಆಗಿದ್ದ ʼಕಾಂತಾರʼ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಸಿ ಮೋಡಿ ಮಾಡಿತ್ತು. ಸಿನಿಮಾದ 100ನೇ ದಿನದ ಸಂಭ್ರಮದಂದು ಸಿನಿಮಾದ ʼಪ್ರೀಕ್ವೆಲ್ʼ ಅನೌನ್ಸ್ ಮಾಡಲಾಗಿತ್ತು.
ಕುಂದಾಪುರದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದು ಕೆಲ ದಿನಗಳ ಬಳಿಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಮೂರನೇ ಹಂತದ 60 ದಿನಗಳ ಶೆಡ್ಯೂಲ್ ಇತ್ತೀಚೆಗೆ ಶುರುವಾಗಿದೆ.
ಸಿನಿಮಾದ ಅರ್ಧದಷ್ಟು ಚಿತ್ರೀಕರಣವನ್ನು ಪೂರ್ಣಗೊಂಡಿದ್ದು, ಉಳಿದ ಭಾಗದ ಚಿತ್ರೀಕರಣ ಈಗ ನಡೆಯುತ್ತಿದೆ. ಇದಲ್ಲದೆ, ರಿಷಬ್ ಕುದುರೆ ಸವಾರಿ ಮತ್ತು ಪುರಾತನ ಸಮರ ಕಲೆಯಾದ ಕಳರಿಪಯಟ್ಟು ತರಬೇತಿಯನ್ನು ಕಳೆದ ಒಂದು ವರ್ಷದಿಂದ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ʼಕಾಂತಾರ: ಅಧ್ಯಾಯ 1ʼ ಚಲನಚಿತ್ರದಾದ್ಯಂತ ಪ್ರಾಚೀನ ಸಮರ ಕಲೆಗಳು ಹೆಚ್ಚಾಗಿ ಕಾಣಸಿಗಲಿದೆ. ಮೂರನೇ ಹಂತದ ಚಿತ್ರೀಕರಣ 60 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಹಾಡಿನ ಚಿತ್ರೀಕರಣ, ಆ್ಯಕ್ಷನ್ ದೃಶ್ಯ ಸೇರಿದಂತೆ ಕಥೆಯ ಸ್ವರೂಪಕ್ಕೆ ವಿಶಿಷ್ಟವಾದ ಹಲವಾರು ದೃಶ್ಯಗಳ ಶೂಟ್ ಆಗಲಿದೆ ಎಂದು ವರದಿಯಾಗಿದೆ.
ಹೊಂಬಾಳೆ ಫಿಲ್ಮ್ಸ್ ʼಕಾಂತಾರ -1ʼ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 2025 ರ ಅಕ್ಟೋಬರ್ 2 ರಂದು ʼಕಾಂತಾರ ಚಾಪ್ಟರ್ -1ʼ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಭಾನುವಾರ(ನ.17ರಂದು) ಅನೌನ್ಸ್ ಮಾಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಸಿನಿಮಾ ತೆರೆಗೆ ಬರಲಿದೆ.
𝐓𝐇𝐄 𝐌𝐎𝐌𝐄𝐍𝐓 𝐇𝐀𝐒 𝐀𝐑𝐑𝐈𝐕𝐄𝐃 🔥
𝐓𝐇𝐄 𝐃𝐈𝐕𝐈𝐍𝐄 𝐅𝐎𝐑𝐄𝐒𝐓 𝐖𝐇𝐈𝐒𝐏𝐄𝐑𝐒 🕉️#KantaraChapter1 Worldwide Grand Release on 𝐎𝐂𝐓𝐎𝐁𝐄𝐑 𝟐, 𝟐𝟎𝟐𝟓.#KantaraChapter1onOct2 #Kantara@shetty_rishab @VKiragandur @hombalefilms @HombaleGroup @ChaluveG… pic.twitter.com/VoehP4xW96— Hombale Films (@hombalefilms) November 17, 2024
ಈಗಾಗಲೇ ಟೀಸರ್ ಮೂಲಕ ʼಕಾಂತಾರ-1ʼ ಕುತೂಹಲ ಹೆಚ್ಚಾಗಿಸಿದೆ. ರಿಷಬ್ ಶೆಟ್ಟಿ ನಿರ್ದೇಶಕ ಹಾಗೂ ಪ್ರಮುಖ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಇತರೆ ಪಾತ್ರವರ್ಗದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರ ಪ್ರೀಕ್ವೆಲ್ʼ ಪಂಜರ್ಲಿ ದೈವದ ಹುಟ್ಟು ಮತ್ತು ಇತಿಹಾಸದ ಕಥೆಯನ್ನೊಳಗೊಳ್ಳಲಿದೆ ಎನ್ನಲಾಗಿದೆ.
ರಿಷಬ್ ಶೆಟ್ಟಿ ಅವರು ಪ್ರಶಾಂತ್ ವರ್ಮಾ ನಿರ್ದೇಶನದ ʼಜೈ ಹನುಮಾನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.