Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
ಸಭೆಯಲ್ಲಿದ್ದ ಕೆಲವು ಮಂದಿಯಿಂದ ಘರ್ಷಣೆ, ಕುರ್ಚಿಗಳ ಎಸೆದ ಉದ್ರಿಕ್ತರು, ಈ ಬಗ್ಗೆ ಮಾಜಿ ಸಂಸದೆ ಹೇಳಿದ್ದೇನು? ವಿಡಿಯೋ ನೋಡಿ
Team Udayavani, Nov 17, 2024, 8:58 PM IST
ಅಮರಾವತಿ: ಸಾರ್ವಜನಿಕ ಸಭೆಗೆ ಆಗಮಿಸಿದ ಬಿಜೆಪಿ ಮಾಜಿ ಸಂಸದೆ ನವನೀತ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಜನರ ಗುಂಪು ಹಲ್ಲೆ ನಡೆಸಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಖಲ್ಲಾರ್ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 45 ಮಂದಿ ವಿರುದ್ಧ ಎಫ್ ಐಆರ್ (ಪ್ರಥಮ ವರ್ತಮಾನ ವರದಿ) ದಾಖಲಿಸಿದ್ದಾರೆ ಮತ್ತು ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ರಾತ್ರಿ 10 ಗಂಟೆ ಸುಮಾರಿಗೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ನವನೀತ್ ರಾಣಾ ತನ್ನ ಬೆಂಬಲಿಗರೊಂದಿಗೆ ಆಗಮಿಸಿದಾಗ ಜನರ ಗುಂಪಿನಲ್ಲಿದ್ದ ಕೆಲವರು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದು, ಅಶ್ಲೀಲ ಸನ್ನೆ ಮಾಡಿದ್ದಾರೆ. ಈ ವೇಳೆ ಆಕೆಯ ಬೆಂಬಲಿಗರು ಹಾಗೂ ಗುಂಪಿನಲ್ಲಿದ್ದ ಆರೋಪಿಗಳೊಂದಿಗೆ ಘರ್ಷಣೆ ನಡೆದಿದ್ದು, ನವನೀತ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಕುರ್ಚಿಗಳನ್ನು ಎಸೆದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲʼ ಎಂದು ಅಮರಾವತಿ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ಹೇಳಿದ್ದಾರೆ.
Today navneet rana was do rally in amaravati jihadi attached her with chairs and so of the police got injured We want against this jihadis @Dev_Fadnavis @mieknathshinde @NiteshNRane @TigerRajaSingh @narendramodi @AmitShah @rajnathsingh pic.twitter.com/v7be2jUwWG
— Kattar हिन्दू (@Dharmendar28614) November 17, 2024
ಭಾರತೀಯ ನ್ಯಾಯ ಸಂಹಿತಾ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಗಲಭೆ, ಕೊಲೆ ಯತ್ನ ಮತ್ತಿತರ ನಿಬಂಧನೆಗಳ ಅಡಿಯಲ್ಲಿ 40-45 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಶಂಕಿತ ನಾಲ್ವರ ಬಂಧಿಸಲಾಗಿದೆ ಎಂದು ತಿಳಿಸಿದರು.
#WATCH | Amravati, Maharashtra: On yesterday’s violence during her election rally, BJP leader Navneet Rana says, “… Religious slogans were raised while I was addressing a public rally in Khallar Village. I tried to calm them down… I ended my speech and got down to meet the… pic.twitter.com/wF88XMXQY1
— ANI (@ANI) November 17, 2024
ನವನೀತ್ ರಾಣಾ ನಂತರ ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿ “ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಜನರ ಗುಂಪಿನಲ್ಲಿದ್ದ ನಿರ್ದಿಷ್ಟ ಸಮುದಾಯದ ಗುಂಪು ಆಕ್ಷೇಪಾರ್ಹ ಪದಗಳ ಬಳಸಿ, ಅಲ್ಲಾ ಹು ಅಕ್ಬರ್ ಘೋಷಣೆ ಕೇಳಲಾರಂಭವಾಯಿತು. ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಉದ್ರಿಕ್ತ ಮಂದಿ ಕುರ್ಚಿಗಳ ಎಸೆಯಲಾರಂಭಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಣಾ ಅವರನ್ನು ರಕ್ಷಕರ ಸಹಾಯಕರೊಂದಿಗೆ ಕರೆದೊಯ್ಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.