Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
ಶಬ್ದಕ್ಕಿಂತ 5 ಪಟ್ಟು ವೇಗ ದಲ್ಲಿ ಸಂಚ ರಿ ಸುವ ಕ್ಷಿಪ ಣಿ ಯಶಸ್ವಿ ಪ್ರಯೋಗ, ಇಂಥ ಕ್ಷಿಪಣಿಯುಳ್ಳ ಕೆಲವೇ ದೇಶಗಳ ಪಟ್ಟಿಗೆ ಭಾರತ
Team Udayavani, Nov 18, 2024, 7:40 AM IST
ಹೊಸದಿಲ್ಲಿ: ಭಾರ ತದ ಸೇನಾ ಶಕ್ತಿಗೆ ದೊಡ್ಡ ಮಟ್ಟದ ಬಲ ನೀಡು ವಂತೆ ಈಗ ಸೇನೆಯ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ ಸೇರ್ಪಡೆಗೊಂಡಿದೆ. ಇದೇ ಮೊದಲ ಬಾರಿಗೆ ಭಾರ ತ ವು ದೀರ್ಘ ವ್ಯಾ ಪ್ತಿಯ ಹೈಪ ರ್ ಸಾ ನಿಕ್ ಕ್ಷಿಪ ಣಿ ಯ ಪರೀ ಕ್ಷಾರ್ಥ ಪ್ರಯೋ ಗ ವನ್ನು ಯಶ ಸ್ವಿಯಾಗಿ ನೆರ ವೇ ರಿ ಸಿದೆ. ಈ ಮೂಲಕ ಎಲ್ಲ ರೀತಿಯ ವೈಮಾ ನಿಕ ರಕ್ಷಣ ವ್ಯವ ಸ್ಥೆಯ ಕಣ್ಣು ತಪ್ಪಿ ಸಿ, ಗರಿಷ್ಠ ವೇಗ ದಲ್ಲಿ ಗುರಿ ಯನ್ನು ಛೇದಿ ಸುವಂಥ ಕ್ಷಿಪ ಣಿ ಗ ಳನ್ನು ಹೊಂದಿ ರುವ ಕೆಲವೇ ದೇಶ ಗಳ ಸಾಲಿಗೆ ಭಾರತ ಸೇರ್ಪ ಡೆ ಗೊಂಡಿದೆ.
ರಕ್ಷಣ ಸಂಶೋ ಧನೆ ಮತ್ತು ಅಭಿ ವೃದ್ಧಿ ಸಂಸ್ಥೆ (ಡಿಆರ್ ಡಿ ಒ) ಅಭಿ ವೃ ದ್ಧಿ ಪ ಡಿ ಸಿ ರುವ ಈ ಕ್ಷಿಪ ಣಿಯು ವಿವಿಧ ಪೇಲೋ ಡ್ ಗ ಳನ್ನು ಹೊತ್ತು 1,500 ಕಿ.ಮೀ. ಗಿಂತಲೂ ಹೆಚ್ಚು ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಡಿ ಶಾ ಕರಾ ವ ಳಿ ಯಾಚೆಗಿನ ಡಾ| ಎ ಪಿಜೆ ಅಬ್ದುಲ್ ಕಲಾಂ ದ್ವೀಪ ದಲ್ಲಿ ಶನಿವಾರ ರಾತ್ರಿ ಇದರ ಪ್ರಯೋಗ ನಡೆ ದಿದೆ.
ಸಾಮಾ ನ್ಯ ವಾಗಿ ಸ್ಫೋಟ ಕ ಗಳು ಅಥವಾ ಅಣ್ವಸ್ತ್ರ ಸಿಡಿ ತ ಲೆ ಗ ಳನ್ನು ಹೊತ್ತೂ ಯ್ಯ ಬಲ್ಲ ಹೈಪ ರ್ ಸಾ ನಿಕ್ ಕ್ಷಿಪ ಣಿ ಗಳು ಶಬ್ದದ ವೇಗ ಕ್ಕಿಂತ (ಮ್ಯಾಕ್ 5 ಅಂದರೆ ತಾಸಿಗೆ 6,125 ಕಿ.ಮೀ.) 5 ಪಟ್ಟು ವೇಗ ದಲ್ಲಿ ಸಂಚ ರಿ ಸು ತ್ತವೆ. ಹೈಪ ರ್ ಸಾನಿಕ್ ಕ್ಷಿಪ ಣಿ ಗಳ ಸುಧಾ ರಿತ ಆವೃ ತ್ತಿ ಗಳು ತಾಸಿಗೆ 24,140 ಕಿ.ಮೀ. (ಮ್ಯಾಕ್ 20) ವರೆಗೂ ಸಂಚ ರಿ ಸಬಲ್ಲವು. ಆತ್ಮನಿರ್ಭರ ಧ್ಯೇಯದಡಿ ಇದನ್ನು ನಿರ್ಮಿಸಲಾಗಿದೆ.
ಈ ವೇಗವನ್ನು ಪತ್ತೆಹಚ್ಚಲು, ಛೇದಿಸಲು ಕ್ಷಿಪಣಿ ನಿಗ್ರಹ ವ್ಯವಸ್ಥೆಗಳಿಗೆ ಸಾಧ್ಯವಾಗದು. ಈ ಐತಿಹಾಸಿಕ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣ ಸಚಿವ ರಾಜನಾಥ್ ಸಿಂಗ್, ಭಾರತದ ಮೊತ್ತಮೊದಲ ದೀರ್ಘವ್ಯಾಪ್ತಿಯ ಹೈಪರ್ಸಾನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ಒಂದು ಅತ್ಯದ್ಭುತ ಹಾಗೂ ಐತಿಹಾಸಿಕ ಸಾಧನೆಯಾಗಿದೆ. ಇದರ ಮೂಲಕ ಭಾರತವು ಇಂಥ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ಆಯ್ದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಹೈಪರ್ಸಾನಿಕ್ ಹೊಂದಿರುವ 4ನೇ ರಾಷ್ಟ್ರ ಭಾರತ
ಪ್ರಸ್ತುತ ರಷ್ಯಾ, ಚೀನ ಮತ್ತು ಅಮೆರಿಕಗಳು ಹೈಪ ರ್ ಸಾ ನಿಕ್ ಕ್ಷಿಪ ಣಿ ಗ ಳನ್ನು ಹೊಂದಿದ್ದು, ಭಾರತವೂ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸುವ ಮೂಲಕ ಈ ಅಸ್ತ್ರ ಹೊಂದಿರುವ ಜಗತ್ತಿನ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫ್ರಾನ್ಸ್, ಜರ್ಮನಿ, ಆಸ್ಟ್ರೇ ಲಿಯಾ, ಜಪಾನ್, ಇರಾನ್ ಮತ್ತು ಇಸ್ರೇಲ್ ಕೂಡ ಹೈಪ ರ್ ಸಾ ನಿಕ್ ಕ್ಷಿಪಣಿ ವ್ಯವ ಸ್ಥೆ ಗ ಳನ್ನು ಅಭಿ ವೃ ದ್ಧಿ
ಪ ಡಿ ಸುವ ಯೋಜನೆಗ ಳನ್ನು ಹಾಕಿ ಕೊಂಡಿವೆ.
ಉಪಯೋಗವೇನು?
* ಶಬ್ದಕ್ಕಿಂತ 5 ಪಟ್ಟು ವೇಗ ಇರುವ ಕಾರಣ ಇದನ್ನು ಪತ್ತೆ ಹ ಚ್ಚ ಲು, ಛೇದಿ ಸ ಲು ಕ್ಷಿಪಣಿ ನಿಗ್ರಹ ವ್ಯವ ಸ್ಥೆ ಗ ಳಿಗೆ ಸಾಧ್ಯವಾಗದು
ಅತ್ಯಧಿಕ ವೇಗ ಮತ್ತು ಕುಶಲ ಚಲನೆಯಿಂದಾಗಿ ಗುರಿಯನ್ನು ನಿಖರವಾಗಿ ತಲುಪಬಲ್ಲುದು
ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು 1,500 ಕಿ.ಮೀ. ಗಿಂತಲೂ ಹೆಚ್ಚು ದೂರ
ಕ್ರಮಿ ಸಬಲ್ಲುದು
ಶತ್ರುದೇಶದ ಮೇಲೆ ಕ್ಷಣಮಾತ್ರದಲ್ಲಿ ದಾಳಿ ನಡೆಸಲು ಸಾಧ್ಯ
ಏನಿದು ಹೈಪ ರ್ ಸಾನಿಕ್ ಕ್ಷಿಪ ಣಿ?
ಶಬ್ದದ ವೇಗ ಕ್ಕಿಂತ 5 ಪಟ್ಟು ವೇಗ ದಲ್ಲಿ (ತಾಸಿಗೆ 6,125 ಕಿ.ಮೀ.) ಚಲಿ ಸುವ ಕ್ಷಿಪ ಣಿ ಯನ್ನು
ಹೈಪ ರ್ ಸಾ ನಿಕ್ ಕ್ಷಿಪಣಿ ಎನ್ನು ತ್ತಾರೆ.
ಇದ ರಲ್ಲಿ ಏರೋ ಡೈನಾಮಿಕ್ ಲಿಫ್ಟ್ ಬಳ ಕೆ ಯಾ ಗುವ ಕಾರಣ ಬ್ಯಾಲಿ ಸ್ಟಿಕ್ ಕ್ಷಿಪ ಣಿ ಗ ಳಿಗೆ ಹೋಲಿ ಸಿ ದರೆ ಇದರ ಸಾಮರ್ಥ್ಯ ಬಹ ಳಷ್ಟು ಹೆಚ್ಚು.
ಏರೋ ಡೈ ನಾ ಮಿಕ್ ಲಿಫ್ಟ್ನ ಮಾರ್ಗ ದ ರ್ಶ ನ ದಲ್ಲಿ ಸಂಚ ರಿ ಸುವ ಕಾರ ಣ ಅತ್ಯಂತ ವೇಗ ವಾಗಿ ಇದು ನಿಖ ರ ಗುರಿ ತಲು ಪ ಬ ಲ್ಲುದು.
ಹೀಗಾಗಿ ಕ್ಷಿಪಣಿ ರಕ್ಷಣ ವ್ಯವ ಸ್ಥೆ ಗೆ ಕೂಡ
ಇವುಗ ಳನ್ನು ಪತ್ತೆ ಹ ಚ್ಚಿ ಹೊಡೆ ದು ರು ಳಿ ಸಲು ಕಷ್ಟ ಸಾ ಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.