Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ
Team Udayavani, Nov 18, 2024, 10:24 AM IST
ಬೆಂಗಳೂರು: ಕಂಪನಿಯೊಂದರ ಪಾಲುದಾರನ ಸೋಗಿನಲ್ಲಿ ಸಂದೇಶ ಕಳುಹಿಸಿದ ಸೈಬರ್ ವಂಚಕರು, ಉದ್ಯಮಿಯಿಂದ 1.05 ಕೋಟಿ ರೂ. ವರ್ಗಾಯಿಸಿಕೊಂಡು ವಂಚಿಸಿದ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರದ 4ನೇ ಬ್ಲಾಕ್ ನಿವಾಸಿ ಕೆ.ವಿ.ಗೋಪಾ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ವಿವರ: ದೂರುದಾರ ಉದ್ಯಮಿ ಕೆ.ವಿ.ಗೋಪಾ ಕುಮಾರ್ ನಂದಿನಿ ಲೇಔಟ್‌ನಲ್ಲಿ ಫಿಡೆಸ್ ಎಲೆಕ್ಟ್ರಾನಿಕ್ಸ್ ಹೆಸರಿನ ಕಂಪನಿ ಹೊಂದಿದ್ದು, ಅದರ ನಿರ್ದೇಶಕರಾಗಿದ್ದಾರೆ. ಇದೇ ಕಂಪನಿಗೆ ಎ.ಕೆ.ಸಂತೋಷ್ ಸಹ ನಿರ್ದೇಶಕರಾಗಿದ್ದಾರೆ.
ಇತ್ತೀಚೆಗೆ ಸಂತೋಷ್ ಸೋಗಿನಲ್ಲಿ ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್ ಮೂಲಕ ಗೋಪಾ ಕುಮಾರ್‌ಗೆ ಸಂದೇಶ ಕಳುಹಿಸಿ ತುರ್ತಾಗಿ 95 ಲಕ್ಷ ರೂ. ಕಳುಹಿಸುವಂತೆ ಕೋರಿದ್ದಾನೆ. ಕೂಡಲೇ ಗೋಪಾ ಕುಮಾರ್ ಆರ್‌ಟಿಜಿಎಸ್ ಮೂಲಕ ಅಪರಿಚಿತನ ಬ್ಯಾಂಕ್ ಖಾತೆಗೆ 50 ಲಕ್ಷ ರೂ. ವರ್ಗಾಯಿಸಿದ್ದಾರೆ. ಬಳಿಕ ಕಂಪನಿ ಪ್ರಾಜೆಕ್ಟ್ ಸಂಬಂಧ ಮತ್ತಷ್ಟು ಹಣ ಬೇಕೆಂದು ಆರೋಪಿ ಸಂದೇಶ ಕಳುಹಿಸಿದ್ದಾನೆ. ಆಗರೂ ದೂರುದಾರ ಅಪರಿಚಿತನ ಬ್ಯಾಂಕ್ ಖಾತೆಗೆ 45 ಲಕ್ಷ ರೂ. ಮತ್ತು 10 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಕಂಪನಿ ಸಹ ನಿರ್ದೇಶಕ ಸಂತೋಷ್‌ರನ್ನು ಹಣದ ಬಗ್ಗೆ ವಿಚಾರಿಸಿದಾಗ, ತಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದಾರೆ. ಬಳಿಕ ಕೆ.ವಿ.ಗೋಪಾ ಕುಮಾರ್‌ಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಂಚಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು
Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.