Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ
Team Udayavani, Nov 18, 2024, 10:31 PM IST
ಮಂಗಳೂರು: ಅಬಕಾರಿ ಇಲಾಖೆಯವರು ರವಿವಾರ ಮುಂಜಾನೆ ನಗರದ ಗೋರಿಗುಡ್ಡೆ ನೆಹರೂ ರೋಡ್ನ ಚಂದ್ರಕಾಂತ್ ಅವರ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗೋವಾ ರಾಜ್ಯದ ವಿವಿಧ ಬ್ರ್ಯಾಂಡ್ಗಳ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮಾರಾಟ ಮಾಡುವ ಉದ್ದೇಶದಿಂದ ಅಬಕಾರಿ ಕಾಯಿದೆಗೆ ವಿರುದ್ಧವಾಗಿ ದಾಸ್ತಾನಿರಿಸಿದ್ದ ಅಂದಾಜು 64,500 ರೂ. ಮೌಲ್ಯದ 47.250 ಲೀ. ಮದ್ಯವನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆಯವರು ಮನೆಯ ಮೇಲೆ ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ. ಶನಿವಾರ ಮಧ್ಯರಾತ್ರಿ ಕೊಡಿಯಾಲಬೈಲ್ ಕಂಬಳಕ್ರಾಸ್ ಬಳಿಯ ಮನೆಯೊಂದಕ್ಕೆ ದಕ್ಷಿಣ ವಲಯ-1ರ ಅಬಕಾರಿ ಉಪನಿರೀಕ್ಷಕ ಹರೀಶ ಪಿ. ನೇತೃತ್ವದಲ್ಲಿ ದಾಳಿ ನಡೆಸಿ ಡಿಫೆನ್ಸ್ ಮದ್ಯ, ಗೋವಾ ಮದ್ಯ, ಬಿಯರ್ ವಶಪಡಿಸಿಕೊಳ್ಳಲಾಗಿತ್ತು.
ದ್ವಿಚಕ್ರ ವಾಹನದಲ್ಲಿ ಸಾಗಾಟ
ಮತ್ತೂಂದು ಪ್ರಕರಣದಲ್ಲಿ ರವಿವಾರ ಮಧ್ಯಾಹ್ನ ನಗರದ ವೆಲೆನ್ಸಿಯಾ ಬಳಿ ಶ್ಯಾಮಸುಂದರ ಅವರು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ 11.250 ಲೀ. ಡಿಫೆನ್ಸ್ ಮದ್ಯವನ್ನು ವಾಹನ ಸಹಿತ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಡಾ| ಸಿ.ಎಚ್. ಬಾಲಕೃಷ್ಣ ಆದೇಶ ದ.ಕ. ಜಿಲ್ಲಾ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ನಿರ್ದೇಶನದಂತೆ ದಕ್ಷಿಣ ವಲಯ-2ರ ಅಬಕಾರಿ ನಿರೀಕ್ಷಕಿ ಕಮಲಾ ಎಚ್.ಎನ್. ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಸಿಬಂದಿ ಸುನೀಲ್ ಬೈಂದೂರು, ಬಸವರಾಜ್ ತೋರೆ, ನವೀನ ನಾಯ್ಕ ಬಿ., ರಘುರಾಮ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.