Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
"ಏಕ್ ಹೇ ತೋ ಸೇಫ್ ಹೇ' ಬಗ್ಗೆ ವಿಪಕ್ಷ ನಾಯಕ ಲೇವಡಿ
Team Udayavani, Nov 18, 2024, 11:52 PM IST
ರಾಂಚಿ: “ಪ್ರಧಾನಿ ಮೋದಿ, ಅಮಿತ್ ಶಾ, ಅದಾನಿ ಹಾಗೂ ಅಂಬಾನಿ ಒಂದಾಗಿದ್ದರೆ, ಅವರು ಸುರಕ್ಷಿತರಾಗುತ್ತಾರೆ. ಬಿಜೆಪಿಯ “ಏಕ್ ಹೇ ತೋ ಸೇಫ್ ಹೇ’ (ಒಂದಾಗಿದ್ದರೆ ಸುರಕ್ಷಿತವಾಗಿರುತ್ತೀವಿ) ಎಂಬ ಘೋಷಣೆಯ ನಿಜವಾದ ಅರ್ಥ ಇದೇ’. ಹೀಗೆಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಜಾರ್ಖಂಡ್ನ ರಾಂಚಿ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ಮಾಧ್ಯಮಗಳ ಎದುರು ರಾಹುಲ್ ಬಿಜೆಪಿಯ ಏಕ್ ಹೇ ತೋ ಸೇಫ್ ಹೇ ಘೋಷವಾಕ್ಯವನ್ನು ಲೇವಡಿ ಮಾಡಿದ್ದಾರೆ. ಮೋದಿ ಅದಾನಿ ಜತೆಗಿರುವ ಪೋಸ್ಟರ್ ಮತ್ತು ಅದಾನಿ ಸಂಸ್ಥೆಯು ವಹಿಸಿಕೊಂಡಿರುವ ಧಾರಾವಿ ಪುನರ್ ನಿರ್ಮಾಣ ನಕ್ಷೆ ಇರುವ ಪೋಸ್ಟರ್ ಅನ್ನು ರಾಹುಲ್ ತೆರೆದು ತೋರಿಸಿ, ” ಏಕ್ ಹೇ ತೋ ಸೇಫ್ ಹೇ’ ಎಂದರೆ ಇದೇ ಅರ್ಥ ಎಂದಿದ್ದಾರೆ.
ಧಾರಾವಿ ಪುನರಾಭಿವೃದ್ಧಿ ಯೋಜನೆ ನ್ಯಾಯಸಮ್ಮತವಾಗಿಲ್ಲ. ಈ ಯೋಜನೆಗಾಗಿ ಬಿಜೆಪಿಯ ಇಡೀ ಆಡಳಿತ ಮಂಡಳಿ ಅದಾನಿಗಾಗಿ ಕೆಲಸ ಮಾಡಿದೆ. ಅಲ್ಲದೇ, ದೇಶದ ಪ್ರಮುಖ ಆಸ್ತಿಗಳಾದ ಬಂದರು, ವಿಮಾನ ನಿಲ್ದಾಣ ಎಲ್ಲವನ್ನೂ ಪಾರದರ್ಶಕ ಟೆಂಡರ್ ನಡೆಸದೆಯೇ ಅದಾನಿ, ಅಂಬಾನಿಯಂಥ ಕೋಟ್ಯಧಿಪತಿಗಳ ಕೈಗೆ ಇಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಬಡವರು ಮತ್ತು ಕೋಟ್ಯಧಿಪತಿಗಳ ನಡುವಿನ ಹೋರಾಟ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.