BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
Team Udayavani, Nov 19, 2024, 9:48 AM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ಕಳೆದ ಎರಡು ದಿನಗಳಿಂದ ವೈಲ್ಡ್ ಕಾರ್ಡ್ ಸ್ಪರ್ಧಿಗಳದ್ದೇ ಹವಾ ಜೋರಾಗಿದೆ. 50 ದಿನದ ಬಳಿಕ ದೊಡ್ಮನೆ ಆಟಕ್ಕೆ ಬಂದ ರಜತ್, ಶೋಭಾ ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಇದ್ದ ಸ್ಪರ್ಧಿಗಳಿಗೆ ಸವಾಲು ಆಗಿದ್ದಾರೆ.
ಮನೆಯ ಸಾಮಾಗ್ರಿ ಬಳಕೆ ಹಾಗೂ ಮನೆ ಕೆಲಸದ ವಿಚಾರದಲ್ಲೂ ರಜತ್, ಶೋಭಾ ಅವರೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪಡೆದುಕೊಂಡಿರುವುದು ಮನೆಮಂದಿಗೆ ತಲೆನೋವಿನ ಸಂಗತಿ ಆಗಿದೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿರುವ ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅರ್ಹ ಹಾಗೂ ಅನರ್ಹರು ಎನ್ನುವ ಆಯ್ಕೆಯನ್ನು ಮಾಡಲು ಇತರೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಅವಕಾಶ ನೀಡಿದ್ದಾರೆ. ಈ ವಿಚಾರದಲ್ಲಿ ಮಂಜು ಹಾಗೂ ಶೋಭಾ ನಡುವೆ ಮಾತಿನ ಯುದ್ಧವೇ ನಡೆದಿದೆ.
ಮನೆಯ ನೀತಿ ನಿಯಮಗಳನ್ನು ಅಲ್ಲಾಡಿಸಿದ್ದು ಶೋಭಾ ಅವರು ಅಂಥ ನನಗೆ ಅನ್ನಿಸುತ್ತದೆ ಎಂದು ಮಂಜು ಹೇಳಿದ್ದಾರೆ. ಇದಕ್ಕೆ ಗರಂ ಆದ ಶೋಭಾ ಅಲ್ಲಾಡಿಸುವುದಕ್ಕೆ ಗಿಲ್ಲಾಡಿಸುವುದ್ದಕ್ಕೆ ವಾಟ್. ನಿಮಗೆ ಕ್ಲಾರಿಟಿಯೇ ಇಲ್ಲ. ನಾನ್ ಸೆನ್ಸ್ ರೀಸನ್ ಕೊಡುತ್ತಿದ್ದೀರಿ ಎಂದಿದ್ದಾರೆ.
ಇದಕ್ಕೆ ಮಂಜು ಕಿರುಚಬೇಡಿ ರೀ ಇಲ್ಲೇ ಇದ್ದೀನಿ. ಕ್ಲಾರಿಟಿಯೇ ಹೇಳ್ತಾ ಇರೋದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ಕೇಳಿಸಿಕೊಳ್ಳಿ ರೆಸ್ಪೆಕ್ಟ್ ಕಳೆದುಕೊಳ್ಳಬೇಡಿ ಎಂದು ಆಕ್ರೋಶದ ಧ್ವನಿಯಲ್ಲೇ ಶೋಭಾ ಮಂಜು ಮೇಲೆ ರೇಗಾಡಿದ್ದಾರೆ.
ಮಾತಿನ ಸಮರಕ್ಕೆ ಮೂಕಸಾಕ್ಷಿಯಾಯ್ತಾ ದೊಡ್ಮನೆ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/fNXq8DrJQ6— Colors Kannada (@ColorsKannada) November 19, 2024
ಏನು ಮಾತನಾಡ್ತಾಳೆ ಅಪ್ಪ ನಾನು ನೀನು ಇದ್ರೆ ಉಚ್ಚೆನೇ ಮಾಡಿಕೊಳ್ಳುತ್ತೇವೆ ಎಂದು ಹನುಮಂತು ಧನರಾಜ್ ಅವರ ಬಳಿ ಹೇಳಿದ್ದಾರೆ.
ಮಂಗಳವಾರ ರಾತ್ರಿ (ನ.19ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ
Lockdown Days: ಲಾಕ್‌ಡೌನ್ ಎಂಬ ದಪ್ಪಕ್ಷರದಲ್ಲಿ ಬರೆದ ಇತಿಹಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.