Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Team Udayavani, Nov 19, 2024, 10:14 AM IST
ಸಾವು ಹೇಗೆ ಬರುತ್ತೆ ಎಂಬುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಈಗಿದ್ದ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಇರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಅದರಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಮದುವೆಯ ಸಂಭ್ರಮದಲ್ಲಿ ತನ್ನ ಸಂಬಂಧಿಕರ ಜೊತೆ ನೃತ್ಯ ಮಾಡುತ್ತಲೇ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಭಾನುವಾರ(ನ.17) ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದ್ದು ಇದೀಗ ಕುಟುಂಬ ಸದಸ್ಯರು ಶಾಕ್ ಗೆ ಒಳಗಾಗಿದ್ದಾರೆ.
ಮೃತ ದುರ್ದೈವಿಯನ್ನು ಭೋಜ್ಪುರ ಗ್ರಾಮದ ನಿವಾಸಿ ಶಿವಂ (22) ಎನ್ನಲಾಗಿದೆ.
ಶಿವಂ ಇಲ್ಲಿನ ಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಈತನಿಗೆ ಆಗ್ರಾದ ಮೋಹಿನಿ ಅವರೊಂದಿಗೆ ವಿವಾಹವಾಗಬೇಕಿತ್ತು ಅದರಂತೆ ಶಿವಂ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು ಅಲ್ಲದೆ ಮದುವೆ ಕಾರ್ಯಕ್ಕೆ ಕುಟುಂಬ ಸದಸ್ಯರು ಎಲ್ಲರು ಮನೆಗೆ ಬಂದಿದ್ದರು ಸೋಮವಾರ(ನ.18) ರಂದು ಮದುವೆ ನಡೆಯಬೇಕಿತ್ತು ಅದರಂತೆ ಭಾನುವಾರ ಕುಟುಂಬ ಸದಸ್ಯರ ಜೊತೆಗೆ ಶಿವಂ ನೃತ್ಯ ಮಾಡುತ್ತಿದ್ದ ಈ ವೇಳೆ ಏಕಾಏಕಿ ಹೃದಯಾಘಾತವಾಗಿದೆ ಕೂಡಲೇ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ಕರೊದೊಯ್ದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಇತ್ತ ಶಿವಂ ಮೃತಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಶೋಕ ಮಡುಗಟ್ಟಿದೆ.
हाथरस, यूपी में शादी के दिन दूल्हे शिवम की मौत हो गई। डांस के बाद वो भात कार्यक्रम में जाकर बैठा और वहीं जमीन पर गिर पड़ा। डॉक्टर इसे साइलेंट अटैक मान रहे हैं।@madanjournalist pic.twitter.com/u8gsUKZobM
— Sachin Gupta (@SachinGuptaUP) November 18, 2024
ಶಿವಂ ತನ್ನ ಕುಟುಂಬ ಸದಸ್ಯರ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
MUST WATCH
ಹೊಸ ಸೇರ್ಪಡೆ
Sagara ಉಪ ಅರಣ್ಯ ಸಂಕ್ಷಣಾಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ;ರತ್ನಾಕರ ಹೊನಗೋಡು ಎಚ್ಚರಿಕೆ
Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.