IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Team Udayavani, Nov 19, 2024, 1:29 PM IST
ಪಣಜಿ: ನವಿಲಿನ ಚಿತ್ರಕ್ಕೆಈಗ ಹೊಸ ಬಣ್ಣ !ರಂಗೋಲಿಗಳ ಬಣ್ಣದೊಳಗೆ ನವಿಲಿನ ಗರಿಯ ಕಣ್ಣ ಬಣ್ಣ ಕಳೆದು ಹೋದರೂ ಅಚ್ಚರಿ ಇಲ್ಲ.
ಐವತ್ತೈದನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫಿ) ಕ್ಕೆ ಸಜ್ಮುಗೊಳ್ಳುತ್ತಿರುವ ಪಣಜಿ ಐನಾಕ್ಸ್ ಆವರಣಕ್ಕೆ ಕಾಲಿಟ್ಟರೆ ಕಾಣಸಿಗುವುದು ಇದೇ ದೃಶ್ಯಾವಗಳಿಗಳು.
ಬುಧವಾರದಿಂದ (ನ.20) ಈ ನವಿಲು ಗರಿ ಬಿಚ್ಚಿ ಕುಣಿಯಬೇಕು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎನ್ ಎಫ್ ಡಿ ಸಿ ಹಾಗೂ ಇಎಸ್ ಜಿ (ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ) ಸಂಯುಕ್ತವಾಗಿ ಈ ಉತ್ಸವವನ್ನು ಆಯೋಜಿಸುತ್ತಿವೆ. 2004 ರಲ್ಲಿ ಚಿತ್ರೋತ್ಸವದ ರಥ ಗೋವಾಕ್ಕೆ ಬಂದು ನಿಂತಿತು. ಅದು 35ನೇ ಚಿತ್ರೋತ್ಸವ. ಬಳಿಕ ಗೋವಾದ ಪಣಜಿಯನ್ನೇ ಚಿತ್ರೋತ್ಸವದ ಕಾಯಂ ತಾಣವಾಗಿ ಕೆಲವು ವರ್ಷಗಳಲ್ಲೇ ಘೋಷಿತವಾಯಿತು. ಹಾಗೆ ಗೋವಾದಲ್ಲಿ ನಡೆಯುತ್ತಿರುವ 21ನೇ ಉತ್ಸವವಿದು. ನ. 20 ರಿಂದ 28 ರವರೆಗೆ ಈ ಚಿತ್ರೋತ್ಸವ ನಡೆಯಲಿದೆ.
ಈ ಬಾರಿ ಚಿತ್ರ ನವಿಲಿಗೆ ಹೊಸ ಬಣ್ಣ ಬಂದಿರುವುದು ನಿಜ. ಅದು ದೇಸೀ ಬಣ್ಣ. ಈ ಬಾರಿಯ ಥೀಮ್ ದೇಸಿ. ದೇಶದ ವಿವಿಧ ರಾಜ್ಯಗಳಲ್ಲಿನ ರಂಗೋಲಿಯ ಸಂಸ್ಕೃತಿಯನ್ನು ಉಣ ಬಡಿಸಲಾಗುತ್ತಿದೆ. ನವಿಲಿನ ಗರಿಯ ಕಣ್ಣ ಮೇಲೂ ಮಿರಿ ಮಿರಿ ಮಿಂಚುವುದು ಈ ರಂಗೋಲಿಗಳೇ. ಹಾಗಾಗಿಯೇ ನವಿಲಿನ ಗರಿಯ ಕಣ್ಣಿನ ಬಣ್ಣಗಳು ಈ ರಂಗೋಲಿಯಲ್ಲಿ ಕಳೆದು ಹೋದರೂ ಅಚ್ಚರಿ ಎನಿಸದು.
ಕೆಂಪು ಹಾಸಿನಿಂದ (ರೆಡ್ ಕಾರ್ಪೆಟ್) ಹಿಡಿದು ಪತ್ರಿಕಾಗೋಷ್ಠಿಯ ತಾಣ, ಸಂವಾದಗಳ ತಾಣ, ಐನಾಕ್ಸ್ ಥಿಯೇಟರ್ ಗಳ ಪರಿಸರ ಎಲ್ಲವೂ ಅಲಂಕೃತಗೊಂಡಿರುವುದು ಈ ಕೊಲ್ಲಂ ಮತ್ತಿತರ ದೇಸಿ ರಂಗೋಲಿಗಳ ಸಾಲಿನಿಂದ ಹಾಗೂ ಬಣ್ಣಗಳಿಂದ.
ಬೆಳಗ್ಗೆಯೊಳಗೆ ಚಿತ್ರಾವತಿ !:
ಇಂದ್ರನ ಅಮರಾವತಿ ಎಲ್ಲರಿಗೂ ತಿಳಿದೇ ಇದೆ. ಗೋವಾದ ಪಣಜಿ ಇನ್ನು ಹತ್ತು ದಿನಗಳಂತೂ ಚಿತ್ರಗಳ ನಗರಿ ಚಿತ್ರಾವತಿ (ಚಿತ್ರಗಳ ನಗರಿ ಎಂಬ ಕಲ್ಪಿತ ಹೆಸರು) ಎಂದುಕೊಳ್ಳಬಹುದು. ಬಸ್ ಸ್ಟ್ಯಾಂಡಿನಿಂದ ಹಿಡಿದು ಐನಾಕ್ಸ್ ಥಿಯೇಟರ್ ಗಳು, ಕಲಾ ಅಕಾಡೆಮಿ, ಮಿರಾಮಾರ್ ಬೀಚ್ ನ ವೃತ್ತದವರೆಗೂ ರಸ್ತೆಯ ಎರಡೂ ಬದಿಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗುತ್ತವೆ.
ಪ್ರತಿ ವೃತ್ತಗಳಲ್ಲೂ ಇಫಿಯ ಪೋಸ್ಟರ್ ಗಳು, ಬ್ಯಾನರ್ ಗಳು ರಾರಾಜಿಸುತ್ತವೆ. ಥಿಯೇಟರ್ ಗಳ ಎದುರು ಚಿತ್ರಗಳ ಪೋಸ್ಟರ್ ಗಳು ಮಿಂಚತೊಡಗುತ್ತವೆ. ಇದರ ಮಧ್ಯೆ ಸಿನಿಮಾ ನಟರು, ಉದ್ಯಮಿಗಳು, ತಂತ್ರಜ್ಞರು ಹಾಗೂ ಸಿನಿಮಾಸಕ್ತರ ಓಡಾಟ ಆರಂಭವಾಗಿದೆ. ಒಟ್ಟೂ ಪಣಜಿಯ ಈ ಆವರಣ ಬುಧವಾರದಿಂದ ಬರೀ ಸಿನಿಮಾದವರದ್ದೇ. ಅದಕ್ಕೇ ಈ ಆವರಣ ಇನ್ನೂ ಚಿತ್ರಾವತಿಯ ಆವರಣ.
ಲಭ್ಯ ಮಾಹಿತಿಗಳ ಪ್ರಕಾರ ಇದುವರೆಗೆ 6 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಸಿನಿಮಾ ಉದ್ಯಮಿಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.
ರಾಜ್ಯ ಸರಕಾರದ ಲೆಕ್ಕಾಚಾರ:
ಗೋವಾ ಈಗಾಗಲೇ ಪ್ರವಾಸೋದ್ಯಮ ನಗರಿಯಾಗಿ ಜನಪ್ರಿಯವಾಗಿದೆ. ವಿಶೇಷವಾಗಿ ಮನರಂಜನ ಉದ್ಯಮದ ನಗರಿಯಾಗಿಯೂ ಪ್ರಸಿದ್ಧವಾಗಿದೆ. ಇದಕ್ಕೆ ಹೊಂದಿಕೊಂಡಂತೆಯೇ ಚಿತ್ರ ನಿರ್ಮಾಣ ನಗರಿಯಾಗಿ ಮಾರ್ಪಡಿಸುವ ಉದ್ದೇಶ ಸ್ಥಳೀಯ ರಾಜ್ಯ ಸರಕಾರದ್ದು. ಇದೇ ಹಿನ್ನೆಲೆಯಲ್ಲೇ ಗೋವಾವನ್ನು ಚಿತ್ರೋದ್ಯಮ ಸ್ನೇಹಿ ನಗರವಾಗಿ ರೂಪಿಸಲು ಯೋಜಿಸಿದೆ. ಇವೆಲ್ಲದರ ಯೋಜನೆಯ ಹಿನ್ನೆಲೆಯಲ್ಲೇ ಇಫಿ ಚಿತ್ರೋತ್ಸವವೂ ಪುನರ್ ರೂಪಿತಗೊಳ್ಳುತ್ತಿದೆ.
ಗೋವಾ ಸಂಸ್ಕೃತಿ, ಗೋವಾ ಸಿನಿಮಾ, ಕಲೆ, ಗುಡಿ ಉದ್ಯಮ ಹಾಗೂ ಸ್ಥಳೀಯ ಉದ್ಯಮಗಳ ವಹಿವಾಟಿಗೂ ಪೂರಕ ವಾತಾವರಣ ಕಲ್ಪಿಸುವ ಲೆಕ್ಕಾಚಾರವೂ ರಾಜ್ಯ ಸರಕಾರದ್ದು. ಹೀಗಾಗಿ ರಾಜ್ಯ ಸರಕಾರದ ಇಲಾಖೆಗಳೂ ಈ ಉತ್ಸವದ ತಯಾರಿಯಲ್ಲಿ ತೊಡಗಿವೆ.
ಪ್ರಸ್ತುತ ಐನಾಕ್ಸ್ ಆವರಣದಲ್ಲಿ ಸಿನಿಮಾ ಉತ್ಸವ ನಡೆಯುತ್ತಿದೆ. ಈ ಆವರಣ ಇಎಸ್ ಜಿ ಆಡಳಿತದಲ್ಲಿದೆ. ಈ ಹಿನ್ನೆಲೆಯಲ್ಲಿ ಇಫಿ ತನ್ನದೇ ಆದ ಆವರಣವನ್ನು ಹೊಂದಲು ನಿರ್ಧರಿಸಿದೆ. ಡೋನಪೌಲಾದಲ್ಲಿ ಆವರಣವನ್ನು ಹೊಂದುವ ಆಲೋಚನೆ ಇತ್ತು. ಆದರೆ ಇಂದಿಗೂ ಆ ಕನಸಿನ ನವಿಲು ಇನ್ನೂ ಮೊಟ್ಟೆಯ ಹಂತದಲ್ಲೇ ಇದೆ.
ಸದ್ಯ ಹತ್ತು ದಿನಗಳ ಕಾಲ ಇನ್ನು ಪಣಜಿ ಚಿತ್ರ ನಗರಿ !
-ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
MUST WATCH
ಹೊಸ ಸೇರ್ಪಡೆ
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.