Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
ಗುಜ್ಜರಕೆರೆಯ ನೀರು ಕಲುಷಿತ: ಇಲಾಖೆಗಳ ನಿರ್ಲಕ್ಷ್ಯ
Team Udayavani, Nov 19, 2024, 3:30 PM IST
ಗುಜ್ಜರಕೆರೆ: ಗುಜ್ಜರಕೆರೆಯನ್ನು ಸ್ಮಾರ್ಟ್ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದರೂ ಕೆರೆಯ ನೀರು ಕಲುಷಿತ ಗೊಂಡಿದೆ. ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಜನಸ್ಪಂದನ ಸಿ.ಪಿ. ಗ್ರಾಮ್ ತಂತ್ರಾಂಶದಲ್ಲಿ ಮನವಿ ಸಲ್ಲಿಸಲಾಗಿತ್ತು.
ತಹಶೀಲ್ದಾರರ ಕಚೇರಿಯಿಂದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಾದ ಗುಜ್ಜರಕೆರೆ ತೀರ್ಥ ಸಂರಕ್ಷಣ ವೇದಿಕೆಗೆ ಮಾಹಿತಿ ನೀಡಲು ಒಂದು ವರ್ಷದ ಹಿಂದೆಯೇ ಸೂಚಿಸಲಾಗಿತ್ತು. ಆದರೆ ಪೂರಕ ಕಾರ್ಯ ನಡೆಸದೆ, ಮಾಹಿತಿಯನ್ನೂ ನೀಡದೆ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ ಎಂದು ಸಮಿತಿಯ ಪ್ರಮುಖರು ಆರೋಪಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಿಂದ ಸ್ಪಂದನೆ
ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ವತಿಯಿಂದ ನೀರಿನ ಶುದ್ಧತೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಸ್ಮಾರ್ಟ್ ಸಿಟಿ ಅ ಧಿಕಾರಿಗಳನ್ನು ಕಾರ್ಯ ಪ್ರವೃತ್ತರನ್ನಾಗಿಸಲು ತಹಶೀಲ್ದಾರ್‌ಗೆ ಮರು ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಯಿಂದ ಪೂರಕ ಸ್ಪಂದನೆ ದೊರೆತಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಮಾತ್ರ ಸುಂದರ
ಗುಜ್ಜರಕೆರೆಯು ಯೋಗಿ ಗೋರಕ್ಷನಾಥರಿಂದ ನಿರ್ಮಿ ತವಾಗಿದ್ದು, ಸ್ಥಳೀಯ ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆಯೂ ಆಗಿದೆ. ಸ್ಥಳೀಯ ಪರಿಸರಕ್ಕೆ ಅಂತರ್ಜಲ ಸಂರಕ್ಷಣ ಆಗರವಾಗಿದೆ. ಈ ಕೆರೆಯ ಪರಿಸರವೂ ತನ್ನದೇ ಆದ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಕೆರೆಯ ಮಹತ್ವಕ್ಕೆ ಸಂಬಂ ಧಿತ ಅಭಿವೃದ್ಧಿ ಕಾರ್ಯಗಳನ್ನು ನಡೆಸದೇ ಮೇಲ್ನೋಟಕ್ಕೆ ಸುಂದರವಾಗಿ ಕಾಣುವಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.
ಮೋಜು-ಮಸ್ತಿ ತಾಣವಾಗಿ ಪರಿವರ್ತನೆ
ಈ ಕೆರೆ ಪ್ರದೇಶ ಅನ್ಯರಾಜ್ಯದ ವಿದ್ಯಾರ್ಥಿಗಳ ಮೋಜು ಮಸ್ತಿಯ ತಾಣವಾಗಿಯೂ ಪರಿವರ್ತಿತವಾಗಿದೆ. ಇದಕ್ಕೆ ಲಗಾಮು ಹಾಕಬೇಕಿದೆ. ವಿದ್ಯಾರ್ಥಿಗಳ ಅಸಭ್ಯ ವರ್ತನೆಯಿಂದ ವಾಯು ವಿಹಾರಕ್ಕೆ ಆಗಮಿಸುವವರು, ಕೆರೆಯ ಪರಿಸರದಲ್ಲಿ ಆಡಲು ಬರುವ ಎಳೆಯ ಮಕ್ಕಳು ಮುಜುಗರಕ್ಕೆ ಒಳಪಡುವಂತಾಗಿದೆ. ಕೆರೆಯ ನೀರಿನಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಸೆದು ಜಲಚರಗಳ ಜೀವಕ್ಕೂ ಕುತ್ತು ತರುವ ಸ್ಥಿತಿ ತರಲಾಗಿದೆ. ಕೆರೆಯ ಸಂಪೂರ್ಣ ಪರಿಸರದ ರಕ್ಷಣೆಗೆ ಆದ್ಯತೆ ನೀಡಿಲ್ಲ. ರಾತ್ರಿ ವೇಳೆಯಲ್ಲಿ ಕೆರೆ ಪರಿಸರದಲ್ಲಿ ಅನೈತಿಕವಾಗಿ ವರ್ತಿಸುವವರ ಸಂಖ್ಯೆಯೂ ಮಿತಿ ಮೀರಿದೆ. ಆದ್ದರಿಂದ ರಾತ್ರಿ ವೇಳೆಯಲ್ಲಿ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನಿಗದಿತ ಅವಧಿ ಬಳಿಕ ಕೆರೆ ಪರಿಸರಕ್ಕೆ ಪ್ರವೇಶ ನಿಷೇ ಧಿಸಬೇಕು ಎಂದು ಸಮಿತಿಯವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.