Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
ಕಾಂಗ್ರೆಸ್‌ನವರು ದಾಖಲೆ ಸಹಿತ ಧರ್ಮಸ್ಥಳ, ಅಜ್ಜಯ್ಯನ ಮಠ ಅಥವಾ ಚಾಮುಂಡಿ ಸನ್ನಿಧಾನದಲ್ಲಿ ಸಾಬೀತುಪಡಿಸಲಿ: ಮಾಜಿ ಸಚಿವ
Team Udayavani, Nov 19, 2024, 9:17 PM IST
ದಾವಣಗೆರೆ: ಕಾಂಗ್ರೆಸ್ ಶಾಸಕರ ಖರೀದಿಸಲು ಬಿಜೆಪಿ ನೂರು ಕೋಟಿ ರೂ. ಆಫರ್ ನೀಡಿದೆ ಎನ್ನುವ ಮುಖ್ಯಮಂತ್ರಿಯವರು ಕೂಡಲೇ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು ಜತೆಗೆ ಇದರ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ರವಿ ಗಣಿಗ ಬಿಜೆಪಿಯವರು 50ಕೋಟಿ ರೂ. ಆಫರ್ ಕೊಟ್ಟಿರುವ ಬಗ್ಗೆ ಪೆನ್ ಡ್ರೈವ್ ಇದೆ ಎನ್ನುತ್ತಿದ್ದಾರೆ. ಅದನ್ನು ಕೂಡಲೇ ಬಹಿರಂಗಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೂರು ಕೋಟಿ ಆಫರ್ ಎನ್ನುತ್ತಿದ್ದಾರೆ. ಇದು 5೦೦೦ಕೋಟಿ ಹಣದ ಆಫರ್ ಬಗ್ಗೆ ಮಾತನಾಡುತ್ತಿದ್ದು ಇದು ಸಿಬಿಐ ಇಲ್ಲವೇ ಇಡಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳ, ಅಜ್ಜಯ್ಯನ ಮಠ ಅಥವಾ ಚಾಮುಂಡಿ ಸನ್ನಿಧಾನದಲ್ಲಿ ಸಾಬೀತುಪಡಿಸಿ:
ಕೋಟಿ ಕೋಟಿ ಹಣ ಪಡೆದು ಮಾರಾಟವಾಗಲು ನಿಮ್ಮ (ಕಾಂಗ್ರೆಸ್) ಶಾಸಕರು ದನ, ಎಮ್ಮೆ ಥರ ಜಾನುವಾರುಗಳಾ? ನಿಮ್ಮ ಶಾಸಕರರ ಬಗ್ಗೆ ನಿಮಗೆ ನಂಬಿಕೆ ಇಲ್ವಾ ? ಕಾಂಗ್ರೆಸ್‌ನವರು ದಾಖಲೆಗಳೊಂದಿಗೆ ಮಾತನಾಡಿ ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿ ಅರಿವೇ ಹಾವು ಬಿಡಬೇಡಿ. ಈ ಆರೋಪವನ್ನು ನೀವು ಧರ್ಮಸ್ಥಳ, ಅಜ್ಜಯ್ಯನ ಮಠ ಇಲ್ಲವೇ ಚಾಮುಂಡಿ ಸನ್ನಿಧಾನ ಎಲ್ಲಿ ಬರುತ್ತೀರೋ ಬಂದು ಸಾಬೀತು ಪಡಿಸಿ. ಬಿಜೆಪಿಯವರು ಯಾರೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿಲ್ಲ. ಕಾಂಗ್ರೆಸ್ ನವರಿಂದಲೇ ಸರ್ಕಾರ ಅಸ್ಥಿರಗೊಳ್ಳುತ್ತಿದೆ. ಸಿದ್ದರಾಮಯ್ಯ ಅವರನ್ನು ನೂರಕ್ಕೆ ನೂರರಷ್ಟು ಕಾಂಗ್ರೆಸ್ ನವರೇ ರಾಜೀನಾಮೆ ಕೊಡಿಸುತ್ತಾರೆ ಎಂದರು.
ಸಚಿವ ಸ್ಥಾನದಿಂದ ಜಮೀರ್ ವಜಾಗೊಳಿಸಿ:
ಮುಡಾ, ವಾಲ್ಮೀಕಿ ಹಗರಣಗಳನ್ನು ವಿಷಯಾಂತರ ಮಾಡಲು ಕೋವಿಡ್ ಪ್ರಕರಣಕ್ಕೆ ಎಸ್‌ಐಟಿ ರಚನೆ ಮಾಡಲು ನಿರ್ಧರಿಸಲಾಗಿದೆ. ಸಚಿವ ಜಮೀರ್ ಅಹಮ್ಮದ್ ಒಬ್ಬ ಮತಾಂಧ. ಹುಚ್ಚು ಹುಚ್ಚು ಆಟ ಆಡುತ್ತಿದ್ದಾರೆ. ಜಮೀರ್ ಅಹಮದ್ ರನ್ನು ಸಚಿವ ಸ್ಥಾನದಿಂದ ತಕ್ಷಣ ವಜಾ ಮಾಡಬೇಕು. ರಾಜ್ಯದಲ್ಲಿ ಸರ್ಕಾರ 14ಲಕ್ಷ ಬಿಪಿಎಲ್ ಕಾರ್ಡ್ ಅನರ್ಹ ಮಾಡಲು ಹೊರಟಿದ್ದು ಇದ್ದು ಪರಿಣಾಮ ಎದುರಿಸಬೇಕಾಗುತ್ತದೆ. ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.