Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
Team Udayavani, Nov 20, 2024, 7:10 AM IST
ನಾಂದೇಡ್: ಸಂಗಾತಿಯನ್ನು ಅರಸುತ್ತಾ, “ಜಾನಿ’ ಎಂಬ ಹೆಸರಿನ ಹುಲಿಯೊಂದು ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ 300 ಕಿ.ಮೀ. ಪ್ರಯಾಣಿಸಿದೆ ಎಂದು ವರದಿಯಾಗಿದೆ. 6-8 ವರ್ಷ ಪ್ರಾಯದ ಜಾನಿ, ಅಕ್ಟೋಬರ್ 3ನೇ ವಾರದಿಂದ ಟಿಪೇಶ್ವರ್ ಅಭಯಾರಣ್ಯದಿಂದ ಪ್ರಯಾಣ ಪ್ರಾರಂಭಿಸಿದೆ.
ಪ್ರಯಾಣದ ಸಂದರ್ಭದಲ್ಲಿ ಕಾಡು-ಮೇಡು, ಕೃಷಿ ಭೂಮಿ, ಹೆದ್ದಾರಿಗಳನ್ನು ದಾಟಿ ಆದಿಲಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳ ಮೂಲಕ ತೆಲಂಗಾಣದ ತಿರ್ಯಾನಿ ಪ್ರದೇಶದತ್ತ ಸಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿಗಳು, “ಚಳಿಗಾಲವು ಹುಲಿಗಳ ಸಂತಾನೋತ್ಪತ್ತಿಯ ಋತುವಾಗಿದೆ. ಈ ಸಂದರ್ಭದಲ್ಲಿ ಸಂಗಾತಿಗಳನ್ನು ಹುಡುಕುವುದು ಗಂಡು ಹುಲಿಗಳ ನೈಸರ್ಗಿಕ ಪ್ರವೃತ್ತಿ. ಆದರೆ ತನ್ನ ವಾಸಸ್ಥಳದ ಸಮೀಪ ಸೂಕ್ತ ಸಂಗಾತಿ ದೊರೆಯದಿದ್ದಲ್ಲಿ ಹುಲಿಗಳು ದೀರ್ಘ ಪ್ರಯಾಣ ಕೈಗೊಳ್ಳುತ್ತವೆ’ ಎಂದಿದ್ದಾರೆ. ಸದ್ಯ ಹುಲಿಗೆ ತೊಡಿಸಿರುವ ರೇಡಿಯೋ ಕಾಲರ್ ಮೂಲಕ ಅದರ ಜಾಡನ್ನು ಪರಿಶೀಲಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
MUST WATCH
ಹೊಸ ಸೇರ್ಪಡೆ
Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.