History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

12 ನಕ್ಸಲರು, 9 ನಾಗರಿಕರು, 3 ಪೊಲೀಸರು ಸಾವು

Team Udayavani, Nov 20, 2024, 7:58 AM IST

ANF-Coombing

ಕುಂದಾಪುರ: ರಾಜ್ಯದಲ್ಲಿ ನಕ್ಸಲ್‌ -ಪೊಲೀಸ್‌ ಕದನದ ರಕ್ತಸಿಕ್ತ ಅಧ್ಯಾಯ ಆರಂಭವಾದುದು 2002ರಲ್ಲಿ. ಇದುವರೆಗೆ ನಕ್ಸಲ್‌ ಸಂಬಂಧಿ ಚಟುವಟಿಕೆ ಹಾಗೂ ನಕ್ಸಲರು ಮತ್ತು ಪೊಲೀಸರು- ಎಎನ್‌ಎಫ್‌ ಮುಖಾಮುಖಿಯಲ್ಲಿ ಒಟ್ಟು 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 12 ಮಂದಿ ನಕ್ಸಲರು, 9 ಮಂದಿ ನಾಗರಿಕರು ಹಾಗೂ ಮೂವರು ಪೊಲೀಸರು ಸೇರಿದ್ದಾರೆ.

ಬಯಲಾದ ಚಳವಳಿ
2002ರ ನವೆಂಬರ್‌ನಲ್ಲಿ ಪಶ್ಚಿಮ ಘಟ್ಟದಲ್ಲಿ ನಕ್ಸಲರು ತರಬೇತಿ ಪಡೆಯುತ್ತಿದ್ದಾಗ ಆಕಸ್ಮಿಕ ಗುಂಡು ಹಾರಾಟ ನಡೆದು ಚೀರಮ್ಮ ಎಂಬ ವೃದ್ಧೆಗೆ ಗಾಯ. ನಕ್ಸಲ್‌ ಗುಪ್ತ ಚಟುವಟಿಕೆ ಹೊರ ಜಗತ್ತಿಗೆ ಬಹಿರಂಗ.

ಮೊತ್ತಮೊದಲ ಚಕಮಕಿ
2003ರ ಆ. 6ರಂದು ಕುದುರೆಮುಖ ಸಮೀಪದ ಸಿಂಗ್ಸಾರ್‌ ಗ್ರಾಮದಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ.

ಮೊತ್ತಮೊದಲ ಹತ್ಯೆ
2003ರ ನ. 17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದ ಬಲ್ಯೊಟ್ಟು ರಾಮಪ್ಪ ಪೂಜಾರಿಯವರ ಮನೆ ಸಮೀಪದಲ್ಲಿ ನಕ್ಸಲ್‌ ಚಳವಳಿಗಾರರಾದ ಪಾರ್ವತಿ ಹಾಗೂ ಹಾಜಿಮಾರನ್ನು ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು.

2005ರ ಫೆ. 6ರಂದು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಗುಡ್ಡದಲ್ಲಿ ನಕ್ಸಲ್‌ ನಾಯಕ ಸಾಕೇತ್‌ರಾಜನ್‌, ಸಹವರ್ತಿ ಶಿವಲಿಂಗು ಅವರು ಪೊಲೀಸ್‌ ಎನ್‌ಕೌಂಟರಿನಲ್ಲಿ ಮೃತಪಟ್ಟರು.

2005ರ ಜೂ. 23ರಂದು ಕುಂದಾಪುರ ಬಳಿಯ ಶಂಕರನಾರಾಯಣ ವ್ಯಾಪ್ತಿಯ ದೇವರಬಾಳು ಸಮೀಪ ರಾಮನಹಕ್ಲು ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಮೂಡಿಗೆರೆ ತಾಲೂಕಿನ ಉಮೇಶ್‌, ಬೆಳಗಾವಿಯ ಅಜಿತ್‌ ಕುಸುಬಿ ಸಾವು.

2006ರ ಡಿ. 26ರಂದು ಶೃಂಗೇರಿ ತಾಲೂಕಿನ ಕೆಸಮುಡಿ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ನಾರಾವಿಯ ಕುತ್ಲೂರಿನ ದಿನಕರ ಮೃತ.

2007ರ ಜು. 1ರಂದು ಮೆಣಸಿನ ಹಾಡ್ಯ ಸಮೀಪದ ಮೇಗೂರು ಗ್ರಾಮದಲ್ಲಿ ಕೊಪ್ಪದ ಗುಡ್ಡೆ ತೋಟದಲ್ಲಿ ಒಂದೇ ಮನೆಯಲ್ಲಿ ಐವರನ್ನು ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಲಾಯಿತು. ಸಿಂಗನೂರಿನ ಗೌತಮ್‌ ಎಂಬ ನಕ್ಸಲ್‌ ಹಾಗೂ ಪರಮೇಶ್ವರ್‌, ರಾಮೇಗೌಡ್ಲು, ಸುಂದರೇಶ್‌, ಕಾವೇರಿ ಮೃತರು. ಈ ಮನೆಯಲ್ಲಿ ಪೊಲೀಸರ ಗುಂಡಿನ ಮೊರೆತದ ಬಳಿಕವೂ ಎಂಟು ವರ್ಷದ ಬಾಲಕ ಮಾತ್ರ ಬದುಕುಳಿದಿದ್ದ.

2008ರ ನ. 19ರಂದು ಕಳಸ ಹೊರನಾಡು ರಸ್ತೆಯ ಮಾವಿನಹೊಳೆ ಬಳಿ ನಡೆದ ಪೊಲೀಸ್‌- ನಕ್ಸಲ್‌ ಮುಖಾಮುಖೀಯಲ್ಲಿ ಮನೋಹರ್‌, ನವೀನ್‌, ಅಭಿಲಾಷ್‌ ಮೃತ್ಯು.

2010ರ ಮಾ. 1ರಂದು ಅಂಡಾರು ಗ್ರಾಮದ ಮುನಿಯಾಲು ಮುಟ್ಲುಪ್ಪಾಡಿ ಸಮೀಪದ ಮೈರೋಳಿ ಜಡ್ಡು ಬಳಿಯ ಎನ್‌ಕೌಂಟರ್‌ನಲ್ಲಿ ಕುತ್ಲೂರಿನ ವಸಂತ ಯಾನೆ ಆನಂದ ಮೃತ.

2012ರ ಸೆ. 4ರಂದು ಸುಬ್ರಹ್ಮಣ್ಯ ಬಾಗಿಮಲೆ ಅರಣ್ಯದಲ್ಲಿ ನಡೆದ ಎಎನ್‌ಎಫ್‌ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಸದಸ್ಯ ರಾಯಚೂರಿನ ಯಲ್ಲಪ್ಪ (39) ಮೃತಪಟ್ಟಿದ್ದ.

ನಕ್ಸಲರಿಂದ ಮೃತಪಟ್ಟ ನಾಗರಿಕರು
2005ರ ಮೇ 17ರಂದು ಪೊಲೀಸ್‌ ಮಾಹಿತಿದಾರ ಎಂದು ಮೆಣಸಿನಹಾಡ್ಯದ ಶೇಷಯ್ಯನ ಭೀಕರ ಹತ್ಯೆ

2007ರಲ್ಲಿ ಜು. 1ರಂದು ಶಿವಮೊಗ್ಗ ಜಿಲ್ಲೆಯ ಹೊಸಗದ್ದೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗೆ ಬೆಂಕಿ

2008ರ ಮೇ 15ರಂದು ಹೆಬ್ರಿಯ ಸೀತಾನದಿ ಬಳಿಯ ನಾಡಾ³ಲುವಿನಲ್ಲಿ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಚಿಕ್ಕಮ್ಮನ ಮಗ ಸುರೇಶ್‌ ಶೆಟ್ಟಿ ಅವರು ನಕ್ಸಲರಿಂದ ಬರ್ಬರ ಹತ್ಯೆಗೊಳಗಾದರು.

2007ರ ಅ. 7ರಂದು ಪೊಲೀಸ್‌ ಕಾನ್‌ಸ್ಟೆಬಲ್‌ ಅಪಹರಿಸಿ ಬಿಡುಗಡೆ. ಬಂದೂಕು ಹೊತ್ತೂಯ್ದ ನಕ್ಸಲರು. ಶೃಂಗೇರಿ ಸಮೀಪ ಕಿಗ್ಗದಲ್ಲಿ ವೆಂಕಟೇಶ್‌ ನಕ್ಸಲರಿಂದ ಹತ್ಯೆಗೀಡಾದರು.

2008ರ ಡಿ. 7ರಂದು ಹಳ್ಳಿಹೊಳೆಯಲ್ಲಿ ಕೃಷಿಕ ಕೇಶವ ಯಡಿಯಾಳ ನಕ್ಸಲ್‌ ದಾಳಿಗೆ ಬಲಿ. ಹೆಬ್ರಿಯಲ್ಲಿ ಮತ್ತಾವು ಬಳಿ ಗ್ರೆನೇಡ್‌ ಸ್ಫೋಟ.
ಮುಟ್ಲುಪ್ಪಾಡಿ ಸದಾನಂದ ಶೆಟ್ಟಿಯ ಬೈಕ್‌ ಸುಟ್ಟು ಹಾಕಿ ಕ್ರೌರ್ಯ ಮೆರೆದ ನಕ್ಸಲರು. ಮಡಾಮಕ್ಕಿ ಪಂಚಾಯತ್‌ ಅಧ್ಯಕ್ಷ ಶಿವಾನಂದ ಶೆಟ್ಟಿಗೆ ಬೆದರಿಕೆ.

ನಕ್ಸಲರ ಬಂಧನ
2010ರ ಡಿ. 10ರಂದು ಶಂಕರನಾರಾಯಣ ಪೊಲೀಸರಿಂದ ನಕ್ಸಲ್‌ ಮುಖಂಡ ಶೇಖರ್‌ ಯಾನೆ ಪ್ರೇಮ್‌ ಯಾನೆ ರಂಜಿತ್‌ ಬಂಧನ.

2012ರ ಮಾ. 2ರಂದು ನಕ್ಸಲರಿಗೆ ಬೆಂಬಲ ಕೊಟ್ಟ ಆರೋಪದಲ್ಲಿ ಕುತ್ಲೂರು ಗ್ರಾಮದ ಮಣಿಲ ಹೊಸಮನೆಯ ಲಿಂಗಪ್ಪ ಯಾನೆ ಲಿಂಗಣ್ಣ ಹಾಗೂ ಅವರ ಪುತ್ರ, ಮಂಗಳೂರು ವಿ.ವಿ. ವಿದ್ಯಾರ್ಥಿ ವಿಠಲನ ಬಂಧನ.

2012ರ ಮಾ. 10ರಂದು ಮಲವಂತಿಗೆ ಗ್ರಾಮದ ಪಶ್ಚಿಮಘಟ್ಟದ ಉದ್ಯಾìರು ಜಲಪಾತದ ಬಳಿ ಗುಂಡಿನ ಚಕಮಕಿ, ಅಂತಾರಾಜ್ಯ ಸಮಾವೇಶದ ಕ್ಯಾಂಪ್‌ ಪತ್ತೆ, ಶಸ್ತ್ರಾಸ್ತ್ರ , ಗ್ರೆನೇಡ್‌, ಸಾಹಿತ್ಯ ವಶ.

ಬೆಳ್ತಂಗಡಿ, ಸುಬ್ರಹ್ಮಣ್ಯದಲ್ಲಿ ನಕ್ಸಲ್‌ ಹೆಜ್ಜೆ
2012ರಲ್ಲಿ ಆ. 30 ಮತ್ತು 31ರಂದು ಮೊದಲ ಬಾರಿಗೆ ಬೆಳ್ತಂಗಡಿ ಪರಿಸರದ ಶಿಶಿಲ, ಶಿರಾಡಿ, ಅಡ್ಡೊಳೆಯ ಮನೆಗಳಿಗೆ 9 ಮಂದಿ ಸಶಸ್ತ್ರ ನಕ್ಸಲರು ಭೇಟಿ ನೀಡಿದ್ದರು. ಸುಬ್ರಹ್ಮಣ್ಯದ ಪಳ್ಳಿಗದ್ದೆಯ ನಾಲ್ಕು ಮನೆಗಳಿಗೆ ಭೇಟಿ ನೀಡಿದ್ದರು.

ನಕ್ಸಲ್‌ ಜತೆಗಿನ ಹೋರಾಟದಲ್ಲಿ ಹುತಾತ್ಮರಾದ ಪೊಲೀಸರು
2007ರ ಜು. 17ರಂದು ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿ ಎಎಸ್‌ಐ ವೆಂಕಟೇಶ್‌ ಹುತಾತ್ಮ.
2008ರ ನ. 19ರಂದು ಕಳಸ ಹೊರನಾಡು ರಸ್ತೆಯ ಮಾವಿನಹೊಳೆ ಬಳಿ ನಡೆದ ನಕ್ಸಲ್‌ -ಪೊಲೀಸ್‌ ಮುಖಾಮುಖೀಯಲ್ಲಿ ಕಾನ್‌ಸ್ಟೆಬಲ್‌ ಗುರುಪ್ರಸಾದ್‌ ಹುತಾತ್ಮ.
2011ರ ಆ. 9 ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ಕಾನ್‌ಸ್ಟೆಬಲ್‌ ಎಂ.ಎಸ್‌. ಮಾನೆ ಹುತಾತ್ಮ.

2024ರಲ್ಲಿ ಮತ್ತೆ ಕಾಣಿಸಿಕೊಂಡ ನಕ್ಸಲರು

ಕುಂದಾಪುರ: ಸುಮಾರು 12 ವರ್ಷಗಳಿಂದ ಸದ್ದು ಮಾಡದೆ ಇದ್ದ ನಕ್ಸಲರು 2024ರಲ್ಲಿ ಮತ್ತೆ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಕೊಲ್ಲೂರು ಭಾಗದಲ್ಲಿ ಈ ವರ್ಷ ಮೊದಲ ಬಾರಿಗೆ ನಕ್ಸಲ್‌ ಚಲನವಲನ ಕಂಡುಬಂದಾಗ “ಉದಯವಾಣಿ‘ ವರದಿ ಪ್ರಕಟಿಸಿತ್ತು.

ಫೆಬ್ರವರಿ 5: ನಕ್ಸಲರು ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್‌, ಬೆಳ್ಕಲ್‌ ಗ್ರಾಮಗಳಿಗೆ ಭೇಟಿ ನೀಡಿದ್ದರು. ಹಲವು ಮನೆಗಳಿಗೆ ತೆರಳಿರುವ ಅನುಮಾನ ವ್ಯಕ್ತವಾಗಿತ್ತು. ಅಂದು ಭೇಟಿ ನೀಡಿದ್ದು ಹೆಬ್ರಿ ಮೂಲದ ವಿಕ್ರಮ್‌ ಗೌಡ ನೇತೃತ್ವದ ತಂಡ ಎಂದೇ ಶಂಕಿಸಲಾಗಿತ್ತು.

ಮಾರ್ಚ್‌ 18: ನಕ್ಸಲರ ಚಲನವಲನದ ವರದಿಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶಗಳಲ್ಲಿ ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್‌) ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಮಡಿಕೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಕೂಜುಮಲೆ ರಬ್ಬರ್‌ ಎಸ್ಟೇಟ್‌ ಬಳಿಯ ಅಂಗಡಿಯೊಂದಕ್ಕೆ 8 ಮಂದಿ ಶಂಕಿತ ನಕ್ಸಲರ ತಂಡವು ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿ ದಿನಸಿ ವಸ್ತುಗಳನ್ನು ಖರೀದಿಸಿದ ವರ್ತಮಾನ ಲಭ್ಯವಾಗಿತ್ತು. ಕೂಜುಮಲೆ ರಬ್ಬರ್‌ ಎಸ್ಟೇಟ್‌ ಸುಳ್ಯ ತಾಲೂಕಿನ ಗುತ್ತಿಗಾರು, ಕೊಲ್ಲಮೊಗ್ರು ಮತ್ತು ಕಲ್ಮಕಾರು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ಎಪ್ರಿಲ್‌ 6: ಕಡಬ ತಾಲೂಕಿನ ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡ ಆಗಮಿಸಿ ಊಟ ಮಾಡಿ ದಿನಸಿ ಸಾಮಗ್ರಿ ಪಡೆದು ತೆರಳಿತ್ತು. ತಂಡದಲ್ಲಿ 6 ಮಂದಿ ಇದ್ದು, ಮನೆಗೆ ಬಂದ ನಕ್ಸಲರು ಶಸ್ತ್ರಾಸ್ತ್ರ ಹಿಡಿದುಕೊಂಡಿದ್ದರು. ಬಳಿಕ ಅದೇ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಣ್ಯಕ್ಕೆ ತೆರಳಿದ್ದರು. 2012ರಲ್ಲಿ ಈ ಪ್ರದೇಶದ ಸಮೀಪದಲ್ಲೇ ನಕ್ಸಲರ ಮೇಲೆ ಶೂಟೌಟ್‌ ನಡೆದಿತ್ತು.

ಮಾ. 16: ನಕ್ಸಲರು ಮತ್ತೆ ಕೂಜುಮಲೆಗೆ ಭೇಟಿ ನೀಡಿದ್ದರು.

ಮಾರ್ಚ್‌ 23: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದರು. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಮೊಬೈಲ್‌ ಚಾರ್ಜ್‌ ಮಾಡಿ ಅಲ್ಲಿಂದ ತೆರಳಿದ್ದರು.

ಆಗಸ್ಟ್‌ 7: ಬೆಂಗಳೂರಿನಲ್ಲಿ ರಹಸ್ಯ ಸಭೆ ಹಾಗೂ ಗೆಳತಿಯೊಬ್ಬರನ್ನು ಭೇಟಿ ಮಾಡಲು ಆಗಮಿಸಿದ್ದ ಮಾವೋವಾದಿ ನಿಷೇಧಿತ ಸಂಘಟನೆಯ ಸದಸ್ಯ ಅನಿರುದ್ಧ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿರುವ ಪೊಲೀಸರು ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ರಾಜ್ಯದಲ್ಲಿ ಸದ್ದಡಗಿರುವ ನಕ್ಸಲ್‌ ಚಟುವಟಿಕೆ ಮತ್ತೆ ಚುರುಕುಗೊಳಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು.

ನವೆಂಬರ್‌ 8: ಕಾರ್ಕಳದ ಈದು ಗ್ರಾಮದಲ್ಲಿ ಇಬ್ಬರು ನಕ್ಸಲರ ಓಡಾಟದ ವದಂತಿ, ಶೋಧ ಕಾರ್ಯಾಚರಣೆ.

ನವೆಂಬರ್‌ 13: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬೇಗೌಡ ಎಂಬವರ ಒಂಟಿ ಮನೆಯಲ್ಲಿ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರು ಅಡುಗೆ ಸಿದ್ಧಪಡಿಸಿ ಊಟ ಮಾಡಿಕೊಂಡು ಹೋಗಿರುವುದು ಖಚಿತವಾಗಿತ್ತು.

ಟಾಪ್ ನ್ಯೂಸ್

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

13

Udupi: 10 ತಿಂಗಳಲ್ಲಿ 228 ಕಳವು ಕೇಸ್‌!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Peetabail-Naxal-encounter-Vikram

Encounter: ನಕ್ಸಲ್‌ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್‌ ಮಾರುವೇಷ’!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

14

UV Fusion: ವಯೋಮಾನದ ಕಾಲಘಟ್ಟಕ್ಕೆ ಬದುಕಿನನುಭವದ ಸಾರ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

12

UV Fusion: ಇಂಗ್ಲೆಂಡ್‌ ಟು ಕೋಲ್ಕತಾ ಬಸ್‌ ಒಂದು ನೆನಪು

11

UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.