Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Team Udayavani, Nov 20, 2024, 11:32 AM IST
ಬೆಂಗಳೂರು: ಸಾಮಾನ್ಯವಾಗಿ ಇಂಗ್ಲಿಷ್ ವಾಕ್ಯ ರಚನೆ, ಮನುಷ್ಯರ ಆರೋಗ್ಯ ಸಮಸ್ಯೆ ಮತ್ತು ಪರಿಹಾರಕ್ಕೆ ಸಾಕಷ್ಟು ಚಾಟ್‌ಬಾಟ್‌ಗಳಿವೆ. ಆದರೆ, ನಿಮ್ಮ ಮನೆಯಲ್ಲಿರುವ ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳಿಗಾಗಿಯೇ ಈಗ ಕೃತಕ ಬುದ್ಧಿಮತ್ತೆ (ಎಐ)ಯ ಚಾಟ್‌ಬಾಟ್ ಬಂದಿದೆ!
ಸಾಕುಪ್ರಾಣಿಗಳು ಅಥವಾ ಜಾನು ವಾರುಗಳು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ಲಕ್ಷಣಗಳನ್ನು ಹೇಳಿದರೆ, ಈ ಕೃತಕ ಬುದ್ಧಿಮತ್ತೆಯು ರೋಗವನ್ನು ಪತ್ತೆಹಚ್ಚಿ ಕ್ಷಣಾರ್ಧದಲ್ಲಿ ಮಾಹಿತಿ ನೀಡುತ್ತದೆ. ಎಕ್ಸ್-ರೇ ಅಥವಾ ಸ್ಕ್ಯಾನಿಂಗ್ ವರದಿ ಅಪ್‌ಲೋಡ್ ಮಾಡಿದರೆ, ಆ ಜಾನುವಾರು ಅಥವಾ ಸಾಕುಪ್ರಾಣಿಗೆ ಇಂತಹದ್ದೇ ಕಾಯಿಲೆ ಇದೆ ಅಂತ ನಿಖರವಾಗಿ ಹೇಳುತ್ತದೆ. ಜಾನುವಾರು ಗಳಿಗಾಗಿಯೇ ಎಐ ಚಾಟ್‌ಬಾಟ್ ಪರಿಚಯಿಸಿರುವುದು ಇದೇ ಮೊದಲು ಎಂದು ಅದನ್ನು ಅಭಿವೃದ್ಧಿಪಡಿಸಿರುವ ಟ್ರೇಲ್ಸ್ ಮಾರ್ಟ್‌ನ ಅಭಿಷೇಕ್ ಡಿ.ಜಿ. ವಿಶ್ಲೇಷಿಸುತ್ತಾರೆ.
ಈ ವೇದಿಕೆಯು ಸದ್ಯಕ್ಕೆ ಪಶು ವೈದ್ಯರಿಗಾಗಿಯೇ ಪರಿಚಯಿಸಲಾಗಿದೆ ಎಂದು ಅಭಿಷೇಕ್ ತಿಳಿಸಿದರು.
ಪಶುವೈದ್ಯರು vetrin.in ನಲ್ಲಿ ಸಾಕುಪ್ರಾಣಿಗಳು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರ ನೀಡಿ, ರೋಗಪತ್ತೆ ಮಾಡಬಹುದು. ಶೇ. 92.47ರಷ್ಟು ನಿಖರತೆಯನ್ನು ಈ ಎಐ ಚಾಟ್‌ಬಾಟ್ ಹೊಂದಿದೆ. ಇದರಿಂದ ಸಮಯ ಉಳಿತಾಯದ ಜತೆಗೆ ರೋಗಪತ್ತೆ ಬಗ್ಗೆ ಎರಡನೇ ಅಭಿಪ್ರಾಯದ ಮೂಲಕ ಖಾತ್ರಿಪಡಿಸಿಕೊಳ್ಳಲು ಅನುಕೂಲ ಆಗುತ್ತದೆ. ಸದ್ಯ 800 ಪಶುವೈದ್ಯರು ಇದರ ಉಪಯೋಗ ಪಡೆಯುತ್ತಿದ್ದು, ನಿತ್ಯ 100-150 ಪಶುವೈದ್ಯರು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.