UV Fusion: ವಯೋಮಾನದ ಕಾಲಘಟ್ಟಕ್ಕೆ ಬದುಕಿನನುಭವದ ಸಾರ


Team Udayavani, Nov 20, 2024, 11:56 AM IST

14

ಬದುಕು ಅನಿಶ್ಚಿತ. ಇಲ್ಲಿ ಒಂದೊಂದು ಕಾಲಘಟ್ಟಕ್ಕೂ ಅದರದೇ ಆದ ಅನುಭವದ ತಿರುವಿದೆ. ಬದುಕಿನ ಎಲ್ಲ ಅನಿರೀಕ್ಷಿತ ಘಟ್ಟವನ್ನು ಮೆಟ್ಟಿನಿಂತು ಬದುಕು ಗಟ್ಟಿಗೊಳಿಸಬೇಕು. ಹಸುಳೆ, ಬಾಲ್ಯ, ಹರೆಯ, ಯೌವನ, ಮದ್ಯವಯಸ್ಕ, ವೃದ್ಧಾಪ್ಯ ಹೀಗೆ ಆರು ವಿಧಗಳಾಗಿ ಬದುಕಿನ ವಯೋಮಾನದ ಮಹಾಧ್ಯಾಯ ರೂಪುಗೊಳ್ಳುತ್ತದೆ. ಎಲ್ಲರಿಗೂ ಎಲ್ಲ ಅನುಭವದ ಕಾಲಘಟ್ಟವೂ ಅದ್ಭುತವಾಗಿಯೂ ಸ್ವಾರಸ್ಯಕರವಾಗಿಯೂ ಇರುವುದಿಲ್ಲ, ಅದೊಂದು ಬಗೆಯ ವರದಂತೆಯೇ ಪ್ರಾಪ್ತವಾಗಬೇಕು ಮತ್ತು ತಾವು ಬೆಳೆಯುತ್ತಿರುವ ತಮ್ಮ ಸುತ್ತಮುತ್ತಲಿನ ಪರಿಸರದ ಆಧಾರದ ಮೇಲೆ ಅದು ನಿರ್ಣಯವಾಗುತ್ತದೆ.

ಕೆಲವರಿಗೆ ವಯಸ್ಸಿಗೆ ಮೀರಿದ ಅನುಭವವಿದ್ದು ಅವರ ಹೊರ ಅರಿವಿನ ಗುಣಮಟ್ಟಕ್ಕೆ ತಕ್ಕನಾದ ಜ್ಞಾನದ ಶ್ರೇಷ್ಟೆತೆಯು ಸಿದ್ಧಿಸಿರುತ್ತದೆ. ಮತ್ತೂ ಕೆಲವರಿಗೆ ಅದೆಷ್ಟೇ ವಯಸ್ಸು ಕಳೆದರೂ ಬುದ್ಧಿ ಇಲ್ಲದಂತೆ ವರ್ತಿಸುತ್ತಾರೆ ಅವರ ಜ್ಞಾನದ ಗುಣಮಟ್ಟ ಅನುಭವದ ಸಾರವಾಗಿ ಶೂನ್ಯವಾಗಿರುತ್ತದೆ. ‘ಓದು ಒಕ್ಕಾಲು-ಬುದ್ಧಿ ಮುಕ್ಕಾಲು’ ಗಾದೆಯಂತಿರುತ್ತದೆ.

ತಮ್ಮ ಸುತ್ತಮುತ್ತಲಿನ ವಾತಾವರಣದ ಅನುಸಾರವಾಗಿ ಹಾಗೂ ನಾವು ಎಂತವರ ಸಂಗದಲ್ಲಿದ್ದೇವೆ ಎಂಬುದು ಸಹ ಗಮನಾರ್ಹವಾಗಿರುತ್ತದೆ. ಕೆಲವೊಮ್ಮೆ ನಾವು ನೋಡುವ, ಕೇಳುವ ನಮ್ಮ ಗಮನಕ್ಕೆ ಬಂದಂತಹ ವಿಚಾರಗಳ ಬಗ್ಗೆ ನಾವೆಷ್ಟು ಲಕ್ಷ್ಯ ಕೊಡುತ್ತೀವಿ ಹಾಗೂ ಅದನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದೇ ಬಹು ಮುಖ್ಯ.

ವಯೋಮಾನದ ಅನುಸಾರವಾಗಿಯೇ ನಮಗೆ ನಾವು ಬಹಳ ಜಾಣರೆಂದು ಭ್ರಮಿಸಿರುತ್ತೇವೆ. ಭ್ರಮೆ ಎಂಬುದು ಸ್ವಯಂಕೃತ ಅಪರಾಧವೇನಲ್ಲ ಆದರೆ ಅದರ ಪ್ರಭಾವ ಮಾತ್ರ ಬಲು ತೀಕ್ಷ್ಣವಾಗಿದ್ದು ಮತ್ತೂಬ್ಬರು ಅದನ್ನು ಅಪಹಾಸ್ಯವಾಗಿಯೂ ಅಥವಾ ಅಪರಾಧವೆಂತಲೂ ಪರಿಗಣಿಸುವುದು ಸಹಜ. ಆದರೂ ಅವರವರ ಮಟ್ಟಿಗಂತು ಎಲ್ಲರೂ ಜಾಣ-ಜಾಣೆಯರೇ.

ಒಂದು ಹಸುಳೆ ಒಂದು ಸಭಾಂಗಣದಲ್ಲಿ ಮಲಮೂತ್ರ ವಿಸರ್ಜಿಸಿದರೆ ಅದು ತಪ್ಪಲ್ಲ. ಅದಕ್ಕಿನ್ನು ಲೋಕದ ಅರಿವಿಲ್ಲ, ಏನು ತಿಳಿಯದು. ಅದೇ ಬಾಲ್ಯವೋ, ಹರೆಯದಲ್ಲಿಯೋ ಹೀಗಾದರೆ ಅವರಿಗೆ ಭ್ರಾಂತು, ಮಾನಸಿಕ ಅಸ್ತವ್ಯಸ್ಥರು, ಹುಚ್ಚರು ಎಂತಲೂ ಸಮಾಜ ತಮ್ಮನ್ನು ನೋಡುವ ಪರಿಗಣಿಸುವ ರೀತಿನೀತಿಗಳಲ್ಲಿ ಬದಲಾವಣೆ ಆಗುತ್ತದೆ. ಹಸುಳೆಯಿಂದ ಬಾಲ್ಯಕ್ಕೆ ನಾಲ್ಕೆದು ವರ್ಷಗಳಲ್ಲಿ ಸಾಮಾನ್ಯ ಜ್ಞಾನವನ್ನು ನಾವು ಕಲಿಯಲೇಬೇಕು ಮತ್ತು ಕಲಿಸುವುದು ಹಸುಳೆಯ, ಪೋಷಕರ ಕರ್ತವ್ಯ. ಸಾಮಾನ್ಯ ಜ್ಞಾನದಿಂದ ಒಳಹರಿವು ಅಭಿವೃದ್ಧಿಯಾಗಿ ಸಭಾಂಗಣದ ಸಮ್ಮುಖದಲ್ಲಿ ಬಾಲ್ಯವು ಮೆಚ್ಚುಗೆ ಗಳಿಸಿದರೆ ಅದು ವಯೋಗುಣದ ಅಭಿವೃದ್ಧಿ ಕೌಶಲಕ್ಕೆ ಸಿಗುವ ಪ್ರಶಂಸೆ.

ಬಾಲ್ಯದಿಂದ ಹದಿಹರೆಯ ಇದೊಂದು ಬಗೆಯ ಹಸಿಮಣ್ಣಿನಂತಹ ಮೆದುಳು, ಇದು ಎಷ್ಟೊತ್ತು ಬೇಯಬೇಕು ಮತ್ತು ಯಾವ ಆಕಾರಕ್ಕೆ ತಿದ್ದಿ-ತೀಡಿ ಒಣಗಿಸಬೇಕು ಎಂದು ಹಸಿಮಣ್ಣಿಗೆ ರೂಪು ನೀಡುವ ಕಾಲವದು. ಆದರೆ ಹದಿಹರೆಯವದು ಚಂಚಲ ಮನಸ್ಸು ಮಂಗನಂತೆ ಜಿಗಿಯುತ್ತದೆ. ಹಸಿ-ಬಿಸಿ ಕಾಮನೆಗಳ ಚಾಂಚಲ್ಯ ಬುದ್ಧಿಗೆ ಯಾರದೇ ತಿಳುವಳಿಕೆಯ ಮಾತು ಸಲ್ಲದು. ಸುತ್ತಮುತ್ತಲಿನ ವಾತಾವರಣದ ಅರಿವಿಗಿಂತಲೂ ತನ್ನೊಳಗಿನ ಹವಾಗುಣದ ಬಗೆಯಲ್ಲಿ ಮಗ್ನರಾಗಿ ತನ್ನನ್ನೇ ತಾ ಮರೆಯುವಂತಹ ಸ್ಥಿತಿಯೂ ಉಂಟು. ಇದೊಂದು ಘಟ್ಟ ಪಾರಾಗಿ ಮುನ್ನಡೆದರೆ ಹರೆಯ ಜಯಸಿದಂತೆಯೇ ಮುಂದಿನ ಭವಿಷ್ಯಕ್ಕೊಂದು ಹೊಸಭಾಷ್ಯ ಬರೆದಂತೆ.

ಯೌವನ ಇದೊಂದು ಬಗೆಯ ಸೌಂದರ್ಯಘಟ್ಟ, ಪಡ್ಡೆ ಹುಡುಗರ ಕಣ್ಣಿಗೆ ಮುಂಗುರಳ ತೀಡುತ್ತಾ ಮೋಡಿ ಮೋಡುವ ಯುವತಿಯರು, ಕುರುಚಲು ಗಡ್ಡದಿಂದಲೇ ಕಿರುನಗೆಯ ಬೀರಿ ಹುಡುಗಿಯರಿಗೆ ಬಲೆ ಬೀಸುವ ಯುವಕರು ಇದೊಂದು ವರ್ಗವಾದರೆ, ಸಂಸಾರದ ನೊಗ ಹೊರಲು ವ್ಯಾಸಂಗದ ಸರ್ಟಿಫಿಕೇಟ್‌ ಹಿಡಿದುಕೊಂಡು ಬೀದಿಬೀದಿ ಅಲೆಯುವ ಯುವಕರದ್ದು ಮತ್ತೂಂದು ವರ್ಗ. ‘ಬದುಕಿನ ಮಹಾತಿರುವು ಸಾಂಸಾರಿಕ ಜೀವನಾರಂಭೋತ್ಸವ’ ಇಲ್ಲಿ ಬೆಸೆದ ಬಂಧಗಳಿಗೆಲ್ಲ ತನ್ನ ಬದುಕಿನ ಅನುಭವವನ್ನು ಕಥೆಯಂತೆ ಬಣ್ಣಿಸುವ ಬಗೆಯಲ್ಲಿ ತಾನೇ ನಾಯಕ/ನಾಯಕಿ. ಇದೊಂದು ತಿರುವು ದಾಟಿದರೆ ಎಂಬಂತೆಯೇ ಶುರುವಾಯಿತು ಜೀವನ.

ಮದ್ಯವಯಸ್ಕ ಮಕ್ಕಳು ಮರಿ, ಹೆತ್ತವರ ಅನಾರೋಗ್ಯ ಬಾಡಿಗೆ, ಶುಲ್ಕ, ದಿನಸಿ ಚೀಟಿ ಹೀಗೆ ತಿಂಗಳು ಪೂರ್ತಿ ದುಡಿದದ್ದು ಒಂದೇ ದಿನಕ್ಕ/ವಾರಕ್ಕ? ಪ್ರಶ್ನಾತೀತವಾಗಿದೆ!

ಆಗಲೇ ನೆನಪಾಗುವುದು ಬಾಲ್ಯದಿಂದಿನ ಬದುಕಿನಾರಂಭದ ಅನುಭವದ ಕಥನ. ಹೆತ್ತವರ ಒದ್ದಾಟ, ತಮಗೆ ನೀಡುತ್ತಿದ್ದ ಮಾರ್ಗದರ್ಶನ, ಅವರ ಬದುಕಿನೊದ್ದಾಟ, ಹೀಗೆಲ್ಲ ಕಣ್ಮುಂದೆ ಹಾದು ಹೋಗುತ್ತಿದೆ ಅವರವರ ಅನುಭವದ ಪ್ರವಚನ. ಅದೆಷ್ಟು  ಅಸಡ್ಡೆ ಮಾಡಿದ್ದೆವೋ? ಇದೀಗ ತಮ್ಮ ಮಕ್ಕಳ ಸರದಿಯಾಗಿದೆ. ಪೀಳಿಗೆಯಿಂದ-ಪೀಳಿಗೆಗೆ ಸರಪಳಿಯಂತೆ ಹೀಗೆ ಸಾಗುತ್ತಲೇ ಹೋಗುತ್ತದೆ ಎನಿಸುವುದುಂಟು ಈ ಅನುಭವ ಕಥನ. ಆದರೆ ಒಳರಿವಿನ ತಮ್ಮ ಬುದ್ದಿಗೆ ಒಂದಿಷ್ಟು ತಿಳುವಳಿಗೆ ಹೇಳಿದರೆ ಬದಲಾವಣೆಯೂ ಸಾಧ್ಯವಾಗುವುದು.

ವೃದ್ಧಾಪ್ಯ ಹಿರಿಯರ ಬದುಕಿನ ಹಾದಿ ಕಿರಿಯರ ಬದುಕಿಗೆ ಹಚ್ಚಿಟ್ಟ ಹಣತೆಯಂತೆ ಎಂಬುದು ಕೇವಲ ನುಡಿಗಟ್ಟಾಗಿದೆ. ಈಗ ತಮ್ಮದೇ ಹಾದಿಯಲ್ಲಿ

ತಾವು ಸಾಗುವಾಗ ಯಾರ ಹಣತೆ, ಮತ್ಯಾರ ಮಾರ್ಗದರ್ಶನ ಬೇಕು? ತಾನೇ ಸರಿ ಎಂಬುವ ಭ್ರಾಂತಿಯೊಂದು ಬೇರೂರಿರುವಾಗ. ಈ ಮೊದಲೇ ಹೇಳಿರುವೆಲ್ಲ!

ಇದೊಂದು ಬದುಕಿನ ಕೊನೆಕಾಲಘಟ್ಟ’ಬಿದ್ದು ಹೋಗುವ ಮರಕ್ಕೆ ಮಳೆಯ ಚಿಂತೆ ಏಕೆ’ ಎಂಬಂತೆ ಬದುಕಿನ ಎಲ್ಲ ತಿರುಳನ್ನು ಸ್ವಾಧಿಸಿ ಕೊನೆಗೆ ಒಣಕಲಾಗಿ ಮುದುರಿ ಮೂಲೆ ಹಿಡಿದಿರುವ ಕಾಲವು ಥೇಟ್‌ ಹಸುಳೆಯಂತೆಯೇ ಹೌದು. ಕೆಲವರಿಗೆ ಮರೆವು, ಮತಿಭ್ರಮಣೆಯಾದರೆ, ಕೆಲವರು ಹೆಚ್ಚು ಉತ್ಸಾಹಕರಾಗಿರುತ್ತಾರೆ… ಎಲ್ಲವೂ ಅವರ ಪರಿಸರದ ಹವಾಗುಣಕ್ಕೆ ತಕ್ಕುದಾಗಿ ರೂಪಿತಗೊಳ್ಳುವ ಅನುಭವದ ಬದುಕಿದು. ಇದನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ಎಲ್ಲ ಕಾಲಘಟ್ಟವೂ ಸಹ್ಯವಾಗಬೇಕೆಂದರೆ ನಾವು ನಮ್ಮ ತಿಳುವಳಿಕೆಯ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಿಕೊಳ್ಳಬೇಕು. ಎಲ್ಲ ವಯೋಮಾನದವರನ್ನು ಪ್ರೀತಿಸಬೇಕು, ಆತ್ಮೀಯತೆಯ ಭಾವೈಕ್ಯತೆಯಿಂದ ಆಲಂಗಿಸಬೇಕು. ಹಸುಳೆಯಿಂದ ವೃದ್ಧಾಪ್ಯದ ಕಾಲಘಟ್ಟವಿದೂ ಬಲು ಅದ್ಭುತ ಹಾಗೂ ನಿಸರ್ಗದ ಒಂದು ಭಾಗವಾದ ಮಾನವನಿಗಿದು ವರವಾಗಿದೆ.

-ದೀಪಿಕಾ ಬಾಬು ಮಾರಘಟ್ಟ, ಚಿತ್ರದುರ್ಗ

ಟಾಪ್ ನ್ಯೂಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

1-rtt

Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

siddaramaiah

NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ

Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು

Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-uv-fusion

UV Fusion: ಹಿರಿಜೀವಗಳ ಕಾಳಜಿ ವಹಿಸಿ

17

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

16

UV Fusion: ಚಿಮ್ಮಿದ ಸೇವಾಹನಿಗಳು ಮತ್ತೆ ಸಾಗರವ ಸೇರಿತು…

15

UV Fusion: ಬಣ್ಣದ ಛತ್ರಿ; ಇಲ್ಲೊಂದು ಕಥೆ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

7-uv-fusion

UV Fusion: ಹಿರಿಜೀವಗಳ ಕಾಳಜಿ ವಹಿಸಿ

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

1-rtt

Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.