Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Team Udayavani, Nov 21, 2024, 3:16 PM IST
ನವದೆಹಲಿ: ಆಮ್ ಆದ್ಮಿ ಪಕ್ಷವು 2025ರ ದೆಹಲಿ ವಿಧಾನಸಭಾ ಚುನಾವಣೆಗೆ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ(ನ.21) ಬಿಡುಗಡೆ ಮಾಡಿದೆ.
ರಾಜಕೀಯ ವ್ಯವಹಾರಗಳ ಸಮಿತಿಯ (ಪಿಎಸಿ) ಸಭೆಯನ್ನು ಗುರುವಾರ ಕರೆದಿದ್ದು ಈ ಸಭೆಯಲ್ಲಿ ನಡೆಸಿದ ಚರ್ಚೆಯ ಬಳಿಕ ಹನ್ನೊಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಆಮ್ ಆದ್ಮಿ ಪಕ್ಷವು ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡವರ ಹೆಸರುಗಳಿಗೆ ಮೊದಲ ಆದ್ಯತೆ ನೀಡಿದ್ದು ಅದರಂತೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯ ಮಾಜಿ ನಾಯಕರಾದ ಬ್ರಹ್ಮ್ ಸಿಂಗ್ ತನ್ವಾರ್, ಅನಿಲ್ ಝಾ ಮತ್ತು ಬಿಬಿ ತ್ಯಾಗಿ ಹಾಗೂ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೆಸ್‌ನ ಮಾಜಿ ನಾಯಕರಾದ ಚೌಧರಿ ಜುಬೇರ್ ಅಹ್ಮದ್, ವೀರ್ ದಿಂಗನ್ ಮತ್ತು ಸುಮೇಶ್ ಶೋಕೀನ್ ಹೆಸರು ಸೇರ್ಪಡೆಗೊಂಡಿದೆ.
AAP releases the first list of 11 candidates for 2025 Delhi elections. Former BJP leaders Brahm Singh Tanwar, Anil Jha and BB Tyagi as well as former Congress leaders Chaudhry Zubair Ahmad, Veer Dhingan and Sumesh Shokeen who joined AAP recently also included in the list. https://t.co/6VkEKJIdHm pic.twitter.com/u5b8FwzJZr
— ANI (@ANI) November 21, 2024
ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲಿ ಯಾರಿಗೆ ಯಾವ ಕ್ಷೇತ್ರದಲ್ಲಿ ಸ್ಥಾನ ಲಭಿಸಿದೆ ಎಂಬುದನ್ನು ನೋಡುವುದಾದರೆ ಬ್ರಹ್ಮ್ ಸಿಂಗ್ ತನ್ವಾರ್ (ಛತ್ತರ್ಪುರ್) ,ಅನಿಲ್ ಝಾ (ಕಿರಾರಿ), ದೀಪಕ್ ಸಿಂಘ್ಲಾ (ವಿಶ್ವಾಸ್ ನಗರ), ಸರಿತಾ ಸಿಂಗ್ (ರೋಹ್ತಾಸ್ ನಗರ), ಬಿಬಿ ತ್ಯಾಗಿ (ಲಕ್ಷ್ಮಿ ನಗರ), ರಾಮ್ ಸಿಂಗ್ ನೇತಾಜಿ (ಬದರ್ಪುರ್), ಚೌಧರಿ ಜುಬೇರ್ ಅಹ್ಮದ್ (ಸೀಲಂಪುರ್), ವೀರ್ ಸಿಂಗ್ ದಿಂಗನ್ (ಸೀಮಾಪುರಿ), ಗೌರವ್ ಶರ್ಮಾ (ಘೋಂಡಾ), ಮನೋಜ್ ತ್ಯಾಗಿ (ಕರವಾಲ್ ನಗರ) ಹಾಗೂ ಸುಮೇಶ್ ಶೋಕೀನ್ (ಮಟಿಯಾಲ)
VIDEO | “The Aam Aadmi Party has released the first list of 11 candidates for Delhi Assembly elections (2025). The names were finalised in the political affairs committee meeting chaired by party’s national convenor Arvind Kejriwal. Most of these 11 seats are those which are not… pic.twitter.com/qxO4I9OoVm
— Press Trust of India (@PTI_News) November 21, 2024
ಆಮ್ ಆದ್ಮಿ ಪಕ್ಷದ ಪ್ರಮುಖ ಸದಸ್ಯ ಕೈಲಾಶ್ ಗಹ್ಲೋಟ್ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಚುನಾವಣೆಯ ಸಿದ್ದತೆಯನ್ನು ಮಾಡಿಕೊಂಡಿದ್ದು ಅದರಂತೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.