Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Team Udayavani, Nov 21, 2024, 9:45 PM IST
ಮಂಗಳೂರು: ನಗರದ ಮರೋಳಿಯ ಕೆಂಬಾರ್ನ ಹೆದ್ದಾರಿ ಬದಿಯಲ್ಲಿ ಕಾಂಚನ ಟಿ.ವಿ.ಎಸ್. ಆಟೋ ರಿಕ್ಷಾ ವರ್ಕ್ ಶಾಪ್ನ ಲಾಕರ್ನಲ್ಲಿದ್ದ 93,540 ರೂ. ಹಣವನ್ನು ಕಳ್ಳರು ಕಳವು ಮಾಡಿದ್ದಾರೆ.
ಸಂಸ್ಥೆಯ ವರ್ಕ್ಸ್ ಮ್ಯಾನೇಜರ್ ನ. 19ರಂದು ವರ್ಕ್ಶಾಪ್ನಲ್ಲಿ ಆ ದಿನ ಸಂಗ್ರಹವಾದ 93,540 ರೂ. ಹಣವನ್ನು ಆಟೋ ರಿಕ್ಷಾದ ಬಿಡಿಭಾಗಗಳನ್ನು ಇಡುವ ಕೋಣೆಯ ಟೇಬಲ್ನಲ್ಲಿರುವ ಮಿನಿ ಲಾಕರ್ನಲ್ಲಿ ಇಟ್ಟು ಡ್ರಾವರ್ ಲಾಕ್ ಮಾಡಿದ್ದಾರೆ.
ನ. 20ರಂದು ಬೆಳಗ್ಗೆ 6.50ರ ವೇಳೆ ಸೆಕ್ಯೂರಿಟಿ ಗಾರ್ಡ್ ಮ್ಯಾನೇಜರ್ಗೆ ಕರೆ ಮಾಡಿ ವರ್ಕ್ ಶಾಪ್ನಲ್ಲಿ ಕಳವಾಗಿರುವ ಬಗ್ಗೆ ತಿಳಿಸಿದ್ದಾರೆ.
ಮ್ಯಾನೇಜರ್ ಕೂಡಲೇ ವರ್ಕ್ಶಾಪ್ಗೆ ಬಂದು ನೋಡಿದಾಗ ಹಿಂಬಾಗಿಲನ್ನು ಯಾವುದೋ ಆಯುಧವನ್ನು ಬಳಸಿ ಜಖಂಗೊಳಿಸಿ ಕಳ್ಳರು ಒಳ ಪ್ರವೇಶಿಸಿರುವುದು ಕಂಡುಬಂದಿದೆ.
ಅಲ್ಲಿಂದ ನೇರವಾಗಿ ಬಿಡಿ ಭಾಗಗಳ ಕೋಣೆಯ ಬಾಗಿಲನ್ನು ತೆರೆದು ಡ್ರಾವರ್ನ ಲಾಕರನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಬಲವಂತದಿಂದ ತೆರೆದು ಅದರಲ್ಲಿದ್ದ ನಗದು 93,540 ರೂ. ಹಾಗೂ ಲಾಕರ್ ಅನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.