Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
ಪರ್ತ್: ಭಾರತ ಸಾಧಿಸಿದ್ದು ಒಂದೇ ಜಯ
Team Udayavani, Nov 22, 2024, 6:15 AM IST
ಪರ್ತ್: ವಿಶ್ವದ ಎರಡು ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯ ಶುಕ್ರವಾರದಿಂದ ಬೋರ್ಡರ್-ಗಾವಸ್ಕರ್ ಟ್ರೋಫಿಗಾಗಿ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖೀಯಾಗಲಿದೆ. ಒಂದು ಕಡೆ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ದದ ಹೀನಾಯ ಸೋಲು ಮತ್ತೂಂದು ಕಡೆ ರೋಹಿತ್ ಶರ್ಮ ಅವರ ಅನುಪಸ್ಥಿತಿಯಿಂದಾಗಿ ಭಾರತೀಯ ತಂಡವು ಭಾರೀ ಒತ್ತಡದಲ್ಲಿ ಆಸ್ಟ್ರೇಲಿಯವನ್ನು ಎದುರಿಸಬೇಕಾಗಿದೆ.
ಹಿಂದೆ 2018-19 ಮತ್ತು 2020-21ರಲ್ಲಿ ಸತತ ಎರಡು ಬಾರಿ ಸರಣಿ ಗೆಲುವಿನ ಸಂಭ್ರಮ ಆಚರಿಸಿದ್ದ ಭಾರತ ಇತ್ತೀಚೆಗೆ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾ ಯವಾಗಿ ಸೋತು ಆಘಾತಕ್ಕೆ ಒಳಗಾಗಿತ್ತು. ಈ ಆಘಾತದಿಂದ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಜತೆ ಭಾರತ ತಂಡದ ಕೆಲವು ಆಟಗಾರರು ತಮ್ಮ ಬಾಳ್ವೆಯ ಕೊನೆಯ ಹಂತದಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಸರಣಿ ಮುಗಿದಾಗ ಅವರೆಲ್ಲರ ಭವಿಷ್ಯ ಏನಾಗಬಹುದೆಂದು ನಿರ್ಧಾರವಾಗುವ ಸಾಧ್ಯತೆಯೂ ಇದೆ.
ನ್ಯೂಜಿಲ್ಯಾಂಡ್ ಸರಣಿಗೆ ಮೊದಲು ದಾಖಲೆ ಮೂರನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಗೇರುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಇದೀಗ ಈ ಅವಕಾಶ ದೂರ ಆಗಿದೆ. ಇತರ ತಂಡಗಳ ಮುನ್ನಡೆಯನ್ನು ನೋಡದೇ ತೇರ್ಗಡೆಯಾಗಬೇಕಾದರೆ ಆಸ್ಟ್ರೇಲಿಯ ವಿರುದ್ಧ 4-0 ಗೆಲುವು ಅನಿವಾರ್ಯವಾಗಿದೆ.
ಆದರೆ ಆಸ್ಟ್ರೇಲಿಯ ತಂಡವನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ತವರಿನಲ್ಲಿ ಆತಿಥೇಯ ತಂಡ ಭರ್ಜರಿ ಪ್ರದರ್ಶನ ನೀಡುವುದು ಖಂಡಿತ. ಇದರ ಜತೆ ಕಳೆದ ಐದು ವರ್ಷಗಳಲ್ಲಿ ಭಾರತ ವಿರುದ್ಧದ ಸೋಲಿಗೆ ಆಸ್ಟ್ರೇಲಿಯ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದೆ. ನಾಯಕ ಕಮಿನ್ಸ್ ಅವರಲ್ಲದೇ ಟ್ರ್ಯಾವಿಸ್ ಹೆಡ್, ಇಂಗ್ಲಿಸ್, ಖ್ವಾಜಾ, ಸ್ಮಿತ್ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ತಂಡದ ಬೌಲಿಂಗ್ ಅಮೋಘವಾಗಿದೆ. ಹೇಝಲ್‌ವುಡ್, ಲಬುಶೇನ್, ಸ್ಟಾರ್ಕ್ ಅವರ ದಾಳಿಯನ್ನು ಯಶಸ್ವಿಯಾಗಿ ನಿಭಾಯಿ ಸಿದರೆ ಭಾರತ ಮೇಲುಗೈ ಸಾಧಿಸಬಹುದು.
ಒತ್ತಡದಲ್ಲಿ ಭಾರತ
ಗೆಲುವು ಸಾಧಿಸಬೇಕಾದ ಒತ್ತಡದಲ್ಲಿ ರುವ ಭಾರತ ಆಸ್ಟ್ರೇಲಿಯ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ನಾಯಕ ರೋಹಿತ್ ಅವರ ಅನುಪಸ್ಥಿತಿ, ಭವಿಷ್ಯದ ನಾಯಕ ಶುಭ್‌ಮನ್ ಗಿಲ್ ಗಾಯಗೊಂಡಿರುವುದು ಮತ್ತು ಶಮಿ ಪೂರ್ಣವಾಗಿ ಕ್ಷಮತೆ ಹೊಂದಿಲ್ಲದಿರುವುದು ಭಾರತಕ್ಕೆ ಚಿಂತೆಯಾಗಿದೆ. ಬ್ಯಾಟಿಂಗ್‌ನಲ್ಲಿ ತಂಡದ ಅಗ್ರ ಆರರಲ್ಲಿ ಮೂವರು ಆಸ್ಟ್ರೇಲಿಯದಲ್ಲಿ ಆಡಿದ ಅನುಭವ ಹೊಂದಿಲ್ಲ. ಇಬ್ಬರು ನಾಲ್ಕು ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಟೆಸ್ಟ್‌ನಲ್ಲಿ ಬಹಳಷ್ಟು ಅನುಭವ ಹೊಂದಿ ರುವ ರಿಷಭ್ ಪಂತ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ತ ಪಡಿಕ್ಕಲ್ ಅವರು ಬ್ಯಾಟಿಂಗ್‌ನಲ್ಲಿ ತಂಡವನ್ನು ಆಧರಿಸುವ ಸಾಧ್ಯತೆಯಿದೆ.
ಬೌಲಿಂಗ್‌ನಲ್ಲಿ ನಾಯಕ ಬುಮ್ರಾ ಅವರಿಗೆ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್‌ದೀಪ್ ನೆರವಾಗಲಿದ್ದಾರೆ. ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣ ಜತೆಗೆ ಅಶ್ವಿನ್, ರವೀಂದ್ರ ಜಡೇಜ ಆಸೀಸ್ ರನ್‌ವೇಗಕ್ಕೆ ಕಡಿವಾಣ ಹಾಕಿದರೆ ಭಾರತ ಮೇಲುಗೈ ಸಾಧಿಸಬಹುದು.
ಪರ್ತ್: ಭಾರತ ಸಾಧಿಸಿದ್ದು ಒಂದೇ ಜಯ
ಬೋರ್ಡರ್-ಗಾವಸ್ಕರ್ ಟ್ರೋಫಿ ಸರಣಿಗೆ ಅಣಿಯಾಗಿರುವ ಭಾರತ, ಪರ್ತ್‌ನಲ್ಲಿ ಮೊದಲ ಟೆಸ್ಟ್ ಆಡಲಿದೆ. ಈ ಪಂದ್ಯ ನಡೆಯುವುದು “ಆಪ್ಟಸ್ ಸ್ಟೇಡಿಯಂ’ನಲ್ಲಿ. ಇದಕ್ಕೂ ಮೊದಲು, 1970ರಿಂದ ಮೊದಲ್ಗೊಂಡು 2017ರ ತನಕ “ವೆಸ್ಟರ್ನ್ ಆಸ್ಟ್ರೇಲಿಯ ಕ್ರಿಕೆಟ್ ಸ್ಟೇಡಿಯಂ’ನಲ್ಲಿ (ವಾಕಾ) ಪಂದ್ಯಗಳನ್ನು ಆಡಲಾಗುತ್ತಿತ್ತು.
ಪರ್ತ್‌ನಲ್ಲಿ ಭಾರತ ಒಟ್ಟು 5 ಪಂದ್ಯಗಳನ್ನಾಡಿದ್ದು, ಒಂದನ್ನಷ್ಟೇ ಜಯಿಸಿದೆ. ಉಳಿದ ನಾಲ್ಕನ್ನು ಆಸ್ಟ್ರೇಲಿಯ ಗೆದ್ದಿದೆ. ಭಾರತದ ಏಕೈಕ ಗೆಲುವು ದಾಖಲಾದದ್ದು 2008ರಲ್ಲಿ. ಅಂತರ 72 ರನ್. ಗೆಲುವಿನ ಸಾರಥಿ ಮಹೇಂದ್ರ ಸಿಂಗ್ ಧೋನಿ. ಆಸ್ಟ್ರೇಲಿಯ ರಿಕಿ ಪಾಂಟಿಂಗ್ ಸಾರಥ್ಯವನ್ನು ಹೊಂದಿತ್ತು. ಆಲ್‌ರೌಂಡ್ ಪ್ರದರ್ಶನವಿತ್ತ ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಉಳಿದಂತೆ 1977, 1992, 2012ರ ಸರಣಿ ವೇಳೆ “ವಾಕಾ’ದಲ್ಲಿ ಆಡಲಾದ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯ ಜಯ ಸಾಧಿಸಿತ್ತು.ನೂತನ “ಆಪ್ಟಸ್ ಸ್ಟೇಡಿಯಂ’ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದದ್ದೇ ಭಾರತ-ಆಸ್ಟ್ರೇಲಿಯ ನಡುವೆ. 2018ರ ಈ ಮುಖಾಮುಖಿಯಲ್ಲಿ ಆಸ್ಟ್ರೇಲಿಯ 146 ರನ್ನುಗಳ ಜಯ ಸಾಧಿಸಿತ್ತು. ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದ ಏಕೈಕ ಶತಕಕ್ಕೆ ಸಾಕ್ಷಿಯಾಗಿದ್ದರು (123). ಈ ಅಂಗಳದಲ್ಲಿ ಆಡಿದ ಎಲ್ಲ 4 ಟೆಸ್ಟ್‌ಗ ಳಲ್ಲೂ ಆಸ್ಟ್ರೇಲಿಯ ಗೆದ್ದು ಬಂದಿದೆ.
ರೋಹಿತ್ ಶರ್ಮ 3ನೇ ದಿನದಿಂದ ಪ್ರೇಕ್ಷಕರಾಗಿ ಭಾಗಿ?
ಎರಡನೇ ಮಗು ಜನಿಸಿದ್ದರಿಂದ 1ನೇ ಟೆಸ್ಟ್‌ಗೆ ಗೈರು ಹಾಜರಾಗಿರುವ ನಾಯಕ ರೋಹಿತ್ ಶರ್ಮ, ಪರ್ತ್ ಟೆಸ್ಟ್‌ನ 3ನೇ ದಿನದಂದು ತಂಡವನ್ನು ಕೂಡಿ ಕೊಳ್ಳಲಿದ್ದಾರೆ. ಅವರು ಪ್ರೇಕ್ಷಕ ರಾಗಿ ಪಂದ್ಯ ವೀಕ್ಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಉಭಯ ತಂಡಗಳು
ಭಾರತ: ಜಸ್‌ಪ್ರೀತ್ ಬುಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜ, ಆರ್. ಅಶ್ವಿನ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಅಕಾಶ್ ದೀಪ್, ಹರ್ಷಿತ್ ರಾಣ, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್, ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರೆ, ಜೋಶ್ ಹೇಝಲ್‌ವುಡ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್. ನಥನ್ ಲಿಯೋನ್, ಮಿಚೆಲ್ ಮಾರ್ಷ್, ನಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.
3ನೇ ಗರಿಷ್ಠ ರನ್ ಸಾಧಕನಾಗುವತ್ತ ಕೊಹ್ಲಿ
ಇನ್ನು 350 ರನ್ ಗಳಿಸಿದರೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3ನೇ ಗರಿಷ್ಠ ರನ್ ಸಾಧಕ ಎನಿಸಿಕೊಳ್ಳಲಿದ್ದಾರೆ. ಸದ್ಯ ಅವರು ಮೂರು ಮಾದರಿಯಲ್ಲಿ 27,134 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. 350 ರನ್ ಗಳಿಸಿದರೆ ಪಾಂಟಿಂಗ್ ಅವರನ್ನು (27,483) ಮೀರಿಸಲಿದ್ದಾರೆ.
ಒಂದು ಶತಕ: ಆಸ್ಟ್ರೇಲಿಯದಲ್ಲಿ ಇನ್ನೊಂದು ಶತಕ ಗಳಿಸಿದರೆ, ಆ ನೆಲದಲ್ಲಿ ಗರಿಷ್ಠ ಟೆಸ್ಟ್ ಶತಕ ಬಾರಿಸಿದ ದಾಖಲೆಯನ್ನು ಕೊಹ್ಲಿ ನಿರ್ಮಿಸಲಿದ್ದಾರೆ. ಸದ್ಯ 6 ಶತಕಗಳೊಂದಿಗೆ ತೆಂಡುಲ್ಕರ್ ಜತೆಗೆ ದಾಖಲೆ ಹಂಚಿಕೊಂಡಿದ್ದಾರೆ
.
550 ವಿಕೆಟ್: ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 550 ವಿಕೆಟ್ ಗಳಿಸಿದ ಭಾರತೀಯ ಎನಿಸಿಕೊಳ್ಳಲು ಆರ್.ಅಶ್ವಿನ್‌ಗೆ (105 ಟೆಸ್ಟ್) ಇನ್ನು 14 ವಿಕೆಟ್ ಸಾಕು. ಕುಂಬ್ಳೆ 115 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಪಂದ್ಯ ಆರಂಭ ಬೆಳಗ್ಗೆ 7.50 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.