CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

ಭ್ರಷ್ಟಾಚಾರ ಕೇಸಿನಲ್ಲಿ ನಾಗೇಂದ್ರ ವಿಕೆಟ್‌ ಉರುಳಿಸಿದ್ದೇವೆ; ಮುಂದಿನ ವಿಕೆಟ್‌ಸಿಎಂ: ಅಶೋಕ್‌

Team Udayavani, Nov 22, 2024, 6:55 AM IST

ashok

ಬೆಂಗಳೂರು: ವಿಪಕ್ಷವಾಗಿ ಹೋರಾಟದಲ್ಲಿ ಬಿಜೆಪಿ ಎಂದೂ ಹಿಂದೆ ಬಿದ್ದಿಲ್ಲ. ಸಿಕ್ಕ ಪ್ರತಿಯೊಂದು ಸಂದರ್ಭದಲ್ಲೂ ಸರಕಾರಕ್ಕೆ ಇರಿಸುಮುರಿಸು ಉಂಟು ಮಾಡಿದ್ದೇವೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಭ್ರಷ್ಟ, 420 ಎಂಬುದನ್ನು ಜನರ ಮನಸ್ಸಿನಲ್ಲಿ ಸ್ಥಾಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅಭಿಪ್ರಾಯಪಟ್ಟಿದ್ದಾರೆ.

ವಿಪಕ್ಷ ನಾಯಕರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉದಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಹಿಂದೆಂದೂ ಅನುಭವಿಸದಂಥ ಸ್ಥಿತಿ ನಮ್ಮ ಹೋರಾಟದಿಂದ ನಿರ್ಮಾಣವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ ಎನ್ನುತ್ತಿದ್ದ ಅವರ ವಿರುದ್ಧ ಈಗ ನ್ಯಾಯಾಲಯದ ಆದೇಶದ ಅನ್ವಯ 420 ಪ್ರಕರಣ ದಾಖಲಾಗಿದೆ. ನಮ್ಮ ಹೋರಾಟದ ಮೂಲಕ ಸಾರ್ವಜನಿಕ ವಲಯದಲ್ಲಿ ಸಿದ್ದರಾಮಯ್ಯ ಅವರನ್ನು 420 ಎಂದು ಬ್ರ್ಯಾಂಡ್‌ ಮಾಡಿದ್ದೇವೆ ಎಂದು ಹೇಳಿದರು.

ನಾನು ವಿಪಕ್ಷ ನಾಯಕನಾದ ಬಳಿಕ ಸದನದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಹೋರಾಟ ನಡೆಸಿದ್ದೇನೆ. ಕಳೆದ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನೆಲ್ಲ ಮುಜುಗರಕ್ಕೆ ಸಿಲುಕಿಸಿದ್ದೇವೆ. ಒಂದೇ ವರ್ಷದಲ್ಲಿ ಸಚಿವ ಬಿ. ನಾಗೇಂದ್ರ ಅವರ ವಿಕೆಟ್‌ ಉರುಳಿಸಿದ್ದೇವೆ. ಮುಂದಿನ ವಿಕೆಟ್‌ ಸಿದ್ದರಾಮಯ್ಯ. ಮುಡಾ ಪ್ರಕರಣದಲ್ಲಿ ಅವರು ರಾಜೀನಾಮೆ ನೀಡಲೇಬೇಕಾಗುತ್ತದೆ. ಇ.ಡಿ. ಒಂದು ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು, ಅದು ಅದರದ್ದೇ ಮಾರ್ಗದಲ್ಲಿ ಕೆಲಸ ಮಾಡುತ್ತದೆ ಎಂದು ಅಶೋಕ್‌ ಅಭಿಪ್ರಾಯಪಟ್ಟರು.

ಬಿಜೆಪಿಯವರು ಎಲ್ಲ ವಿಚಾರದಲ್ಲೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಸಿಎಂ ಸಿದ್ದರಾಮಯ್ಯ ಪದೇಪದೆ ಪ್ರಸ್ತಾವಿಸುತ್ತಿರುವುದಕ್ಕೆ ತಿರುಗೇಟು ನೀಡಿದ ಅಶೋಕ್‌, ಸತ್ಯ ಹರಿಶ್ಚಂದ್ರನ ಮನೆ ಪಕ್ಕದಲ್ಲೇ ಈ ಹಿಂದೆ ಸಿದ್ದರಾಮಯ್ಯ ವಾಸ ಮಾಡುತ್ತಿದ್ದರು. ಅವರು ಸುಳ್ಳು ಹೇಳುವುದೇ ಇಲ್ಲ. ಸತ್ಯವಂತರಾಗಿದ್ದರೆ 64 ಕೋಟಿ ರೂ. ಮೌಲ್ಯದ ಮುಡಾ ಸೈಟ್‌ ಯಾಕೆ ವಾಪಸ್‌ ಕೊಟ್ಟರು? ನಾಗೇಂದ್ರನ ರಾಜೀನಾಮೆಯನ್ನು ಏಕೆ ತೆಗೆದುಕೊಂಡರು? ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬಂತೆ ಅವರ ನಡೆ ಇದೇ ಎಂದು ವ್ಯಂಗ್ಯವಾಡಿದರು.

ಅಧಿವೇಶನದಲ್ಲಿ ಪರಿಣಾಮಕಾರಿ ಹೋರಾಟ
ಬೆಳಗಾವಿ ಅಧಿವೇಶನದಲ್ಲೂ ನಾವು ಅತ್ಯಂತ ಪರಿಣಾಮಕಾರಿ ಹೋರಾಟ ನಡೆಸುತ್ತೇವೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಶಾಸಕರು ಹಾಗೂ ಜೆಡಿಎಸ್‌ ಶಾಸಕರ ಜತೆಗೆ ಸಭೆ ನಡೆಸಿ ತಂತ್ರಗಾರಿಕೆ ನಡೆಸುತ್ತೇವೆ. ಅಷ್ಟರೊಳಗೆ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫ‌ಲಿತಾಂಶವೂ ಪ್ರಕಟವಾಗಲಿದ್ದು, ಕಾಂಗ್ರೆಸ್‌ಗೆ ಹಿನ್ನಡೆ ನಿಶ್ಚಿತ ಎಂದು ಅಶೋಕ್‌ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ವೇಳೆ ಹೊರಗೆ ಬಾರದ ಸಿದ್ದು

ಕೋವಿಡ್‌ ವಿಚಾರದಲ್ಲಿ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ನಾವು ಮುಡಾ ಹೋರಾಟ ನಡೆಸದೇ ಇದ್ದಿದ್ದರೆ ಕಾಂಗ್ರೆಸ್‌ನವರು ಈ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ಸಿದ್ದರಾಮಯ್ಯ ಭಯಗೊಂಡು ಮನೆಯಿಂದಲೇ ಆಚೆ ಬಂದಿರಲಿಲ್ಲ. ಗೂಡು ಸೇರಿಕೊಂಡಿದ್ದರು ಎಂದು ಅಶೋಕ್‌ ಟೀಕಿಸಿದರು.

ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ರಾಜ್ಯದ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದ ಡಿ.ಕೆ.ಸುರೇಶ್‌ ಅವರನ್ನು ಈ ಬಾರಿ ಸೋಲಿಸಿದ್ದೇ ಸಿದ್ದರಾಮಯ್ಯ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಸೋಲಿಗೆ ಸಿದ್ದರಾಮಯ್ಯನವರೇ ತಂತ್ರ ರೂಪಿಸಿದ್ದಾರೆ. ಜಮೀರ್‌ ಹೇಳಿಕೆಯ ಹಿಂದಿರುವುದು ಕೂಡ ಅವರೇ ಎಂದು ಅಶೋಕ್‌ ಆರೋಪಿಸಿದರು.

ಜೆಡಿಎಸ್‌, ನಮ್ಮ ಶಾಸಕರೊಂದಿಗೆ ಚರ್ಚೆ
ವಕ್ಫ್ ಮಂಡಳಿ ನೋಟಿಸ್‌, ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಹಗರಣ, ಬಿಪಿಎಲ್‌ ಕಾರ್ಡ್‌ಗಳ ರದ್ದತಿ, ಅಧಿಕಾರಿಗಳ ಸಾವು, ದೇಶದ್ರೋಹದ ಪ್ರಕರಣಗಳನ್ನು ಹಿಂಪಡೆದದ್ದು, ಗಣಪತಿ ಉತ್ಸವದ ವೇಳೆ ಗಲಭೆಗೆ ಅವಕಾಶ ಕೊಟ್ಟಿದ್ದು, ಸೇರಿದಂತೆ ಸಾಕಷ್ಟು ವಿಷಯಗಳನ್ನು ಸರಕಾರವೇ ನಮಗೆ ಹೋರಾಡಲು ಕೊಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ತಂತ್ರಗಾರಿಕೆ ಏನಾಗಿರಬೇಕು ಎಂಬುದರ ಬಗ್ಗೆ ಜೆಡಿಎಸ್‌ ಜತೆಗೂ ಚರ್ಚಿಸುತ್ತೇವೆ. ನಮ್ಮ ಶಾಸಕರೊಂದಿಗೂ ಸಮಾಲೋಚನೆ ಮಾಡುತ್ತೇವೆ ಎಂದು ಹೇಳಿದರು.

ಅಶೋಕ್‌ ಹೇಳಿದ್ದೇನು?
-ಸಿದ್ದರಾಮಯ್ಯ ಸತ್ಯವಂತರಾಗಿದ್ದರೆ ಮುಡಾ ಸೈಟ್‌ ವಾಪಸ್‌ ಮಾಡಿದ್ದೇಕೆ?
– ಸರಕಾರ ವಿರುದ್ಧ ವಿಪಕ್ಷವಾಗಿ ಹೋರಾಟದಲ್ಲಿ ಬಿಜೆಪಿ ಎಂದೂ ಹಿಂದೆ ಬಿದ್ದಿಲ್ಲ
– ಸರಕಾರದ ವಿರುದ್ಧ ಅಧಿವೇಶನದಲ್ಲಿ ಪರಿಣಾಮಕಾರಿ ಹೋರಾಟಕ್ಕೆ ಸಜ್ಜು

ರಾಜ್ಯ ಬಿಜೆಪಿಯಲ್ಲಿ
ವ್ಯತ್ಯಾಸ ಇರುವುದು ನಿಜ
ಪಕ್ಷದೊಳಗೆ ಸಣ್ಣ-ಪುಟ್ಟ ಸಮಸ್ಯೆಗಳಿರುವುದು ನಿಜ ಎಂದು ಒಪ್ಪಿಕೊಂಡಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್‌.ಅಶೋಕ್‌, ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಪಕ್ಷದಲ್ಲಿ ಇವೆಲ್ಲ ಸಹಜ. ಕೇಂದ್ರದ ವರಿಷ್ಠರ ಮಟ್ಟದಲ್ಲಿ ಈ ಅಧ್ಯಾಯವನ್ನು ಮುಗಿಸುತ್ತೇವೆ ಎನ್ನುವ ಮೂಲಕ ಪಕ್ಷದೊಳಗಿನ ಬಣ ರಾಜಕೀಯಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂಬ ಸುಳಿವು ನೀಡಿದ್ದಾರೆ.
ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗಳಿಂದ ಸಮಸ್ಯೆ ಆಗುತ್ತಿರುವುದು ನಿಜ. ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಹಜ. ಇದನ್ನೆಲ್ಲ ಬಗೆಹರಿಸಲು ಕೇಂದ್ರ ನಾಯಕರೊಂದಿಗೆ ಸಭೆ ನಡೆಸಿ, ಒಂದು ಪ್ರಯತ್ನ ಮಾಡಿರುವುದಂತೂ ನಿಜ ಎಂದರು.

ನನ್ನದು ಬಿಜೆಪಿ ಬಣ
ನಾನು 40 ವರ್ಷಗಳ ಕಾಲ ಬಿಜೆಪಿಯನ್ನು ಬೆಂಗಳೂರಿನಲ್ಲಿ ಕಟ್ಟಿ ಬೆಳೆಸಿದ್ದೇನೆ. ಯಾವ ಬಣವೂ ಇಲ್ಲ. ನನ್ನದು ಬಿಜೆಪಿ ಬಣ ಅಷ್ಟೇ. ನನ್ನಂಥ ವರು ಬೇಕಾ ದಷ್ಟು ಮಂದಿ ಇದ್ದಾ ರೆ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌, ಯಲ್ಲಾಪುರ ಶಾಸಕ ಶಿವರಾಂ ಹೆಬ್ಟಾರ್‌ ಕುರಿತ ಪ್ರಶ್ನೆಗೆ, ಅವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದಷ್ಟೇ ಹೇಳಿದರು.

ಮೈತ್ರಿಯಿಂದ ಒಕ್ಕಲಿಗ ನ್ಯಾಯಕತ್ವಕ್ಕೆ ಧಕ್ಕೆ ಇಲ್ಲ
ನಮ್ಮ ಹಾಗೂ ಜೆಡಿಎಸ್‌ನ ಮೈತ್ರಿ ಸಹ ಚೆನ್ನಾಗಿ ಇದೆ. ಈ ಮೈತ್ರಿಯಿಂದ ಯಾವುದೇ ಧಕ್ಕೆ ಆಗಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒಕ್ಕಲಿಗ ಬ್ರ್ಯಾಂಡ್‌. ನನಗೂ ಒಕ್ಕಲಿಗ ಜನಾಂಗದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ. ಆದರೂ ಹಿಂದೂ ಬ್ರ್ಯಾಂಡ್‌ನ‌ಲ್ಲಿ ಇದ್ದೇವೆ. ಹೀಗಾಗಿ ಹಳೇ ಮೈಸೂರಿನ ಬಿಜೆಪಿ-ಜೆಡಿಎಸ್‌ನಲ್ಲಿರುವ ಒಕ್ಕಲಿಗರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಅಶೋಕ್‌ ಹೇಳಿದರು.

ಟಾಪ್ ನ್ಯೂಸ್

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.