IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್


Team Udayavani, Nov 22, 2024, 5:34 PM IST

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

ಪಣಜಿ: ಇಂದಿನ ಸಂದರ್ಭದಲ್ಲಿ ಭಾಷೆ ಒಂದು ಸಮಸ್ಯೆಯಲ್ಲ. ಹಾಗಾಗಿ ಕನ್ನಡದಲ್ಲೇ ಸಿನಿಮಾಗಳನ್ನು ರೂಪಿಸಿ ಜಾಗತಿಕ ಮಟ್ಟಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಕಾನ್‌ ಚಿತ್ರೋತ್ಸವ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಚಿದಾನಂದ ಎಸ್. ನಾಯಕ್.

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ “ಸನ್‌ ಫ್ಲವರ್‌ ವರ್ ದಿ ಒನ್‌ ಫರ್ಸ್ಟ್ ಟು ನೋʼ ಕಿರುಚಿತ್ರದ ಪ್ರದರ್ಶನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ (ನ.22) ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.

ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಆಸೆ ಸದಾ ಇದೆ. ಅದರಲ್ಲೇ ಪ್ರಯತ್ನಿಸುವೆ. ಇಂದು ಭಾಷೆ ಸಂವಹನಕ್ಕೆ ಸಮಸ್ಯೆಯಾಗುವ ಸಂದರ್ಭವಿಲ್ಲ. ಸಬ್‌ ಟೈಟಲ್ಸ್‌ ನಿಂದ ಹಿಡಿದು ಬಹುಭಾಷೆಗಳ ನಿರ್ಮಾಣ, ಡಬ್ಬಿಂಗ್‌ ಎಲ್ಲವೂ ಸಾಧ್ಯವಿದೆ. ಅದೇ ಕಾರಣಕ್ಕೆ ಕನ್ನಡದಲ್ಲೇ ಸಿನಿಮಾ ಮಾಡುವೆ ಎಂದರು ಚಿದಾನಂದ್.

ಈ ಚಿತ್ರ ಕನ್ನಡದ ಒಂದು ಜನಪದ ಕಥೆಯನ್ನು ಆಧರಿಸಿದ್ದು. ನಾವು ಸಣ್ಣವರಿದ್ದಾಗ ಕೇಳಿದಂಥ ಕಥೆಗೇ ದೃಶ್ಯ ರೂಪ ನೀಡುವ ಪ್ರಯತ್ನ ಮಾಡಿದ್ದೇವೆ (ಇಡೀ ತಂಡವಾಗಿ) ಎಂದು ವಿವರಿಸಿದರು ಚಿದಾನಂದ್.

ವೈದ್ಯರಿದ್ದವರು ಏಕೆ ಸಿನಿಮಾ ಮಾಡಲು ಬಂದಿರಿ ಎಂಬ ಪ್ರಶ್ನೆಗೆ, ನಿಜ. ನಾನು ಓದಿದ್ದು ವೈದ್ಯಕೀಯ ವಿಷಯ. ನನಗೆ ಸಿನಿಮಾ ನೋಡುವ ಅಭ್ಯಾಸವಿತ್ತು. ವೈದ್ಯಕೀಯ ವಿಷಯ ಅಧ್ಯಯನ ಮಾಡುವಾಗಲೂ ಭಾವನಾತ್ಮಕ ಸಂಗತಿಗಳನ್ನು ತಲುಪಿಸುವ ಪ್ರಭಾವಿ ಮಾಧ್ಯಮವಾಗಿ ಸಿನಿಮಾ ಎನಿಸಿತ್ತು. ಅದೇ ಕಾರಣಕ್ಕೆ ನಾನು ಸಿನಿಮಾವನ್ನು ನನ್ನ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಂಡೆ ಎಂದರು ಚಿದಾನಂದ.

ಕಾನ್‌ ಚಿತ್ರೋತ್ಗವದ ಅನುಭವದ ಬಗ್ಗೆ ವಿವರಿಸುತ್ತಾ, ನನ್ನ ಚಿತ್ರ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆಯುವವರೆಗೆ ಕಾನ್‌ ಚಿತ್ರೋತ್ಸವವನ್ನು ಟಿವಿಯಲ್ಲಿ ಕಂಡು, ಮಾಧ್ಯಮಗಳಲ್ಲಿ ಓದಿ ತಿಳಿದಿದ್ದೆ. ಈ ಬಾರಿ ಕಣ್ಣಾರೆ ಕಂಡೆ. ಒಳ್ಳೆ ಅನುಭವ. ನನ್ನ ಚಿತ್ರವನ್ನು ಕಂಡ ಹಲವರ ಅಭಿಪ್ರಾಯವನ್ನೂ ಕೇಳಿದೆ. ಒಟ್ಟಾರೆ ಖುಷಿ ನೀಡಿತುʼ ಎಂಬುದು ಅವರ ಅಭಿಪ್ರಾಯವಾಗಿತ್ತು.

ನಾನು ಚಿತ್ರಗಳನ್ನು ಮಾಡುವುದು ಪ್ರೇಕ್ಷಕರನ್ನು ಒಳಗೊಳ್ಳುವುದಕ್ಕಾಗಿಯೇ. ಅದನ್ನು ವಾಣಿಜ್ಯ ಅಥವಾ ಕಲಾತ್ಮಕ ಎಂದೆಲ್ಲ ಪ್ರತ್ಯೇಕಿಸಲಾರೆ. ಪ್ರೇಕ್ಷಕರಿಗೆ ಖುಷಿ ನೀಡಲೆಂದೆ ಸಿನಿಮಾ ಮಾಡುತ್ತೇನೆ ಎಂದರಲ್ಲದೇ, ದೊಡ್ಡ ದೊಡ್ಡ ನಟರೊಂದಿಗೂ ಸಿನಿಮಾ ಮಾಡಬೇಕೆಂದಿದೆ. ನೋಡುವ ಅವಕಾಶ ಸಿಗಬಹುದು ಎಂದರು.

ಹೊಸ ಸಿನಿಮಾ ನಿರ್ದೇಶಕರಿಗೆ ನೀಡುವ ಸಲಹೆ ಎಂದು ಕೇಳಿದ್ದಕ್ಕೆ, ಕಿರುಚಿತ್ರ ಕ್ಷೇತ್ರಕ್ಕೆ ಬರಲು ಒಳ್ಳೆಯ ವೇದಿಕೆ. ಅದನ್ನು ಹೊರತುಪಡಿಸಿದಂತೆ ಕಿರುಚಿತ್ರ, ದೊಡ್ಡ ಚಿತ್ರ ಎಲ್ಲವೂ ವೀಕ್ಷಣೆಯ, ಸಾಂಸ್ಥಿಕ ನೆಲೆಯ ಅನುಕೂಲಕ್ಕೆ ಮಾಡಿಕೊಂಡದ್ದು. ಕಥೆಯನ್ನು ಪರಿಣಾಮಕಾರಿಯಾಗಿ ಹೇಳಲು ಎರಡೂ ಮಾಧ್ಯಮವೇ ಎಂದು ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ನಡೆದಿದ್ದ ಒಂದು ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಭಾಗವಹಿಸಿದ್ದ ಚಿದಾನಂದರು ಅಲ್ಲಿಂದ ಪ್ರೇರಣೆಗೊಂಡು ಸಿನಿಮಾ ಕ್ಷೇತ್ರಕ್ಕೆ ಬಂದರು. ಎಂಬಿಬಿಎಸ್‌ ಮುಗಿಸಿ ಒಂದು ವರ್ಷದ ಕೋರ್ಸ್‌ ನ್ನು ಎಫ್‌ ಟಿ ಐಐ ನಲ್ಲಿ ಮುಗಿಸಿದರು. ಸಿನಿಮಾಗಳ ಬಗ್ಗೆ ಓದು, ವೀಕ್ಷಣೆ ಹಾಗೂ ಅಧ್ಯಯನ ಕೈಗೊಂಡಿದ್ದರು.

ʼನಾನು ಈಗಲೇ ಎಂಥಾ ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳಲಾರೆ. ಕಮರ್ಷಿಯಲ್ಲೋ ಅಥವಾ ಆರ್ಟೋ ಎಂದು ವಿಂಗಡಿಸಿ ಹೇಳುವುದಕ್ಕಿಂತ ಮುಂದಿನ ದಿನಗಳಲ್ಲಿ ನಾನು ಮಾಡುವ ಸಿನಿಮಾಗಳೇ ನನ್ನ ಹಾದಿಯನ್ನು ಹೇಳಬಹುದು ಎಂದು ವಿವರಿಸಿದರು. ಚಿತ್ರದ ಪ್ರೊಡಕ್ಷನ್‌ ಡಿಸೈನರ್‌ ಪ್ರಣವ್‌ ಜಿ. ಖೋಟ್‌ ಸಹ ಜತೆಗಿದ್ದರು. ಈ ಚಿತ್ರವು ಮುಂದಿನ ಆಸ್ಕರ್‌ ಗೂ ಸಲ್ಲಿಸಲಾಗಿದೆ.

ಟಾಪ್ ನ್ಯೂಸ್

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

5-uv-fusion

UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.