Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಕಾರು ಅಡ್ಡಗಟ್ಟಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್; ಸಂಕೇಶ್ವರ ಸಮೀಪದ ಕಮತಗಿ ಗೇಟ್-ನೇರ್ಲಿ ಬಳಿ ಆಟಿಕೆ ಗನ್ ತೋರಿಸಿ ಹಣ ದೋಚಿದ್ದರು
Team Udayavani, Nov 22, 2024, 10:34 PM IST
ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಳಿ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೂರು ನೀಡಿದವರನ್ನೇ ವಶಕ್ಕೆ ಪಡೆದಿದ್ದ ಪೊಲೀಸರು ಈಗ ಆ ಎಲ್ಲರನ್ನೂ ಬಿಡುಗಡೆಗೊಳಿಸಿದ್ದು, ದರೋಡೆ ಮಾಡಿ ಪರಾರಿಯಾದ ಇಬ್ಬರ ಬಳಿಕ ಬಂಧಿಸಿ, ಮಕ್ಕಳ ಆಟಿಕೆ ಬಂದೂಕು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಾಡಿ ತಾಲೂಕಿನ ಕಳೇವಾಡಿಯ ಸೂರಜ ಯಶವಂತ ಸಾಸಟೆ ಹಾಗೂ ನವನೀತಕುಮಾರ ಶಹಾಜಿ ಸಾಸಟೆ ಎಂಬಾತರನ್ನು ಬಂಧಿಸಿ, 16 ಲಕ್ಷ ರೂ. ನಗದು ವಶಪಡಿಸಿಕೊಳ್ಳುವ ಮೂಲಕ ಈವರೆಗೆ ಒಟ್ಟು 1.17 ಕೋಟಿ ರೂ. ವಶಪಡಿಸಿಕೊಂಡಂತಾಗಿದೆ ಎಂದು ಎಸ್‌ಪಿ ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ತನಿಖೆಯಲ್ಲಿ ಅಮಾಯಕರೆಂದು ಸಾಬೀತು:
ನ.15ರಂದು ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಸಂಕೇಶ್ವರದ ಹರಗಾಪುರ ಬಳಿ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ದರೋಡೆ ಮಾಡಿರುವ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 75 ಲಕ್ಷ ರೂ. ದರೋಡೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ದೂರು ಕೊಟ್ಟವರ ಮೇಲೆಯೇ ಸಂಶಯ ಬಂದು ಆರೀಫ್, ಸೂರಜ್, ಅಜಯ್ ಎಂಬ ಮೂವರ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಮ್ಮ ತನಿಖೆಯಲ್ಲಿ ಹಾಗೂ ಈ ಮೂವರಲ್ಲಿ ಸಾಮ್ಯತೆ ಕಂಡು ಬಂದಿದ್ದರಿಂದ ಇವರು ಅಮಾಯಕರೆಂದು ಗೊತ್ತಾಗಿದೆ. ದರೋಡೆಯಲ್ಲಿ ಈ ಮೂವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೋಟ್ಯಂತರ ರೂಪಾಯಿ ಹಣ ಸಾಗಿಸುತ್ತಿದ್ದ ಕಾರು ಬೆನ್ನಟ್ಟಿ ದರೋಡೆ ಮಾಡಿದ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರು ಅಡ್ಡಗಟ್ಟಿ ಆಟಿಕೆ ಬಂದೂಕು ತೋರಿಸಿ ಕಾರಿನಲ್ಲಿದ್ದ ಹಣ ಎಗರಿಸಿ ಕಾರು ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ವಿಶೇಷ ತಂಡ ರಚಿಸಿ, ಅಥಣಿ, ಸಂಕೇಶ್ವರ, ಚಿಕ್ಕೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಸಂಕೇಶ್ವರ ಸಮೀಪದ ಕಮತಗಿ ಗೇಟ್-ನೇರ್ಲಿ ಬಳಿ ಕಾರು ನಿಲ್ಲಿಸಿ ಅದರಲ್ಲಿದ್ದ ಹಣ ಎಗರಿಸಿದ್ದರು. ಮೂರು ದಿನಗಳ ಹಿಂದೆ ಪತ್ತೆಯಾಗಿದ್ದ ಕಾರಿನಲ್ಲಿ 1.01 ಕೋಟಿ ರೂ. ಸಿಕ್ಕಿತ್ತು. ಮೂವರ ವಿಚಾರಣೆ ನಡೆಸಿದಾಗ ದರೋಡೆ ಮಾಡಿದ ಕಾರು ಬೇರೆ ಎಂಬುದು ಗೊತ್ತಾಗುತ್ತಿದ್ದಂತೆ ತನಿಖೆಯ ಆಯಾಮ ಬದಲಿಸಲಾಯಿತು. ಮಹಾರಾಷ್ಟ್ರಕ್ಕೆ ಹೋಗಿ ಕಾರಿನ ಬಣ್ಣವನ್ನು ಸಿಸಿ ಕ್ಯಾಮರಾದಲ್ಲಿ ನೋಡಿದಾಗ ಈಗ ಇಬ್ಬರನ್ನು ಬಂಧಿಸಿದಾಗ ಗೋದಾಮಿನಲ್ಲಿಟ್ಟಿದ್ದ 16 ಲಕ್ಷ ರೂ. ಸಿಕ್ಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.