Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

ಕಾಂಚೀ ಕಾಮಕೋಟಿ ಪೀಠಾಧಿಪತಿ ಶ್ರೀಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ

Team Udayavani, Nov 23, 2024, 6:33 AM IST

1-kanchi

ಉಡುಪಿ: ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಸಲ್ಲಬೇಕು. ದೇವ ಸ್ಥಾನಗಳು ಸಮಗ್ರ ಸಮಾಜದ ನಾಗರಿಕತೆ ಮತ್ತು ಧರ್ಮಸಂರಕ್ಷಣ ಕೇಂದ್ರವಾಗಿ ರೂಪುಗೊಳ್ಳಲು ಸರಕಾರ ಕ್ರಮವಹಿಸಬೇಕು, ಇದಕ್ಕಾಗಿ ತಳ ಮಟ್ಟದಲ್ಲಿಯೇ ಧರ್ಮಾಧಾರಿತ ನೀತಿ ನಿರೂಪಣೆ ಅನುಷ್ಠಾನಗೊಳ್ಳಬೇಕು ಎಂದು ಕಾಂಚೀ ಕಾಮಕೋಟಿ ಪೀಠಾ ಧಿಪತಿ ಶ್ರೀಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರು ವಕ್ಫ್ ಮಂಡಳಿಯ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗೆ ತಮ್ಮ ಇಂಗಿತವನ್ನು ವಿಶದೀಕರಿಸಿದ್ದಾರೆ.

ಕರ್ನಾಟಕ ಕರಾವಳಿಯ ಸಂಚಾರ ಕೈಗೊಂಡ ಅವರು, “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸರ ಕಾರಕ್ಕೆ ಪರ್ಯಾಯವಾಗಿ ಇನ್ನೊಂದು ಸರಕಾರ ಬರಬಹುದು. ಆದರೆ ಸನಾ ತನ ಧರ್ಮಕ್ಕೆ ಪರ್ಯಾಯವಿಲ್ಲ ಎಂದರು. ಈ ಸಂದರ್ಶನದ ಸಾರ ಇಲ್ಲಿದೆ.

ನಿಧಿ, ನಿರ್ವಹಣೆ, ನಿಯಮ
ದೇವಸ್ಥಾನಗಳ ಆಡಳಿತದಲ್ಲಿ ನಿಧಿ, ನಿರ್ವಹಣೆ, ನಿಯಮ ಈ ಮೂರರ ಪರಿಪಾಲನೆ ಅತೀ ಅಗತ್ಯ. ದೇವಸ್ಥಾನಕ್ಕೆ ಬರುವ ಹುಂಡಿ, ದೇಣಿಗೆಯ ನಿಧಿಯನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. ಹಿಂದೆ ರಾಜರು ತೆರಿಗೆಯಿಂದ ಮುಕ್ತ ಮಾಡಿದ್ದರು. ಈಗ ದೇವಸ್ಥಾನಗಳ ಆಸ್ತಿಗಳಿಗೆ ತೆರಿಗೆಯನ್ನು ಹಾಕುತ್ತಿರುವುದು ಸರಿಯಲ್ಲ. ವಿದ್ಯುತ್‌ಗೂ ರಿಯಾಯಿತಿ ಇರಬೇಕು. ಇದರ ನಿಧಿಯನ್ನು ವ್ಯಾಪಾರದ ದೃಷ್ಟಿಯಿಂದ ನೋಡು ವುದು ತರವಲ್ಲ. ಈ ಹಣದಿಂದ ವೇದ ಪಾಠ ಶಾಲೆ, ಗೋಶಾಲೆ, ನಾಗಸ್ವರ ಪಾಠಶಾಲೆ, ಶಿಲ್ಪ ಪಾಠಶಾಲೆ, ಪುಷ್ಪವನ, ಕಲಾವಿದರಿಗೆ ನೆರವು, ವೃಕ್ಷಾರೋಪಣ, ಅರ್ಚಕರೇ ಮೊದಲಾದ ಸಿಬಂದಿಗೆ ಸಂಸ್ಕೃತಿ ಪೂರಕವಾದ ವಸತಿಗೃಹದಂತಹ ದತ್ತಿ ಚಟುವಟಿಕೆಗಳನ್ನು ನಡೆಸಬೇಕಿ ರುವುದರಿಂದ ತೆರಿಗೆ ವಿನಾಯಿತಿ ಸಿಗಬೇಕು. ಇದೇ ನಿಧಿಯಿಂದ ಭಕ್ತರಿಗೆ ಮೂಲ ಸೌಕರ್ಯಗಳಾದ ಶೌಚಾ ಲಯ, ಕೊಠಡಿ, ಭವನ, ಅನ್ನ ಛತ್ರಗಳನ್ನು ನಿರ್ಮಿಸಬೇಕು. ದೇವಸ್ಥಾನಗಳ ಕಟ್ಟಡವನ್ನು ತೆರವು ಗೊಳಿಸುವಾಗ ದೇವಸ್ಥಾನದ ಪರವಾಗಿ ನಿರ್ಣಯ ತಳೆಯಬೇಕು. ನಿಯಮ ವೆಂದರೆ ದೇವಸ್ಥಾನಗಳ ಆಚಾರ ವಿಚಾರಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಯಥಾರೂಪದಲ್ಲಿ ಮುಂದು ವರಿಯಬೇಕು.
ಪ್ರೀಸ್ಟ್‌-ಪ್ರಜಾ-ಪ್ರಭುತ್ವ (ಪಿಪಿಪಿ)ದೇವಸ್ಥಾನಗಳ ಆಡಳಿತದಲ್ಲಿ ಸರಕಾರ ಪ್ರವೇಶಿಸಬಾರದು ಎಂಬ ವಾದವಿದೆ. ಸುಬ್ರಹ್ಮಣ್ಯನ್‌ ಸ್ವಾಮಿ ಕೂಡ ಹೇಳಿದ್ದರು. ಹಿಂದೆ ಪಿ.ವಿ.ನರಸಿಂಹರಾವ್‌ ಪ್ರಧಾನಿ ಯಾಗಿದ್ದ ಕಾಲದಲ್ಲಿ “ಬಿಲ್ಟ್ – ಆಪರೇಟ್‌- ಟ್ರಾನ್ಸ್‌ಫ‌ರ್‌’ (ಬಿಒಟಿ) ವ್ಯವಸ್ಥೆ ಜಾರಿಗೆ ಬಂತು. ಈಗ ರಸ್ತೆಗೂ ಟೋಲ್‌ ವ್ಯವಸ್ಥೆ ಬಂದದ್ದು ಪಿಪಿಪಿ ವ್ಯವಸ್ಥೆಯಿಂದ. ಹಿಂದೆ ಸರಕಾರವೇ ರಸ್ತೆಯಂತಹ ಮೂಲ ಸೌಕರ್ಯ ಗಳನ್ನು ಒದಗಿಸುತ್ತಿತ್ತು. ಪಬ್ಲಿಕ್‌-ಪ್ರೈವೇಟ್‌-ಪಾರ್ಟ್‌ನರ್‌ಶಿಪ್‌ ಎಂಬ ಈ ಪಿಪಿಪಿ ಬದಲು ದೇವಸ್ಥಾನಕ್ಕೆ ಸಂಬಂಧಿಸಿ “ಪ್ರೀಸ್ಟ್‌- ಪ್ರಜಾ- ಪ್ರಭುತ್ವ’ ಎಂಬ ಪಿಪಿಪಿ ಜಾರಿಗೆ ಬರಬೇಕು. ಮಧ್ಯಾಂತರ ಆಡಳಿತದಲ್ಲಿ ಸರಕಾರ ವಿದ್ದರೂ ಕ್ರಮೇಣ ಅದನ್ನು ಭಕ್ತರ ನಿರ್ವಹಣೆಗೆ ಒಪ್ಪಿಸಬೇಕು. ಬ್ರಿಟಿಷರು ಭಾರತವನ್ನು ಬಿಡುವಾಗ ಹೇಗೆ ಮಧ್ಯಾಂತರ ಸರಕಾರ ರಚನೆಯಾಗಿ ಅನಂತರ ಪೂರ್ಣ ಪ್ರಮಾಣದ ಸರಕಾರ ರಚನೆ ಯಾಯಿತೋ ಹಾಗೆಯೇ ದೇವಸ್ಥಾ ನಗಳಲ್ಲೂ ಸಾರ್ವಜನಿಕರ ಸಹ ಭಾಗಿತ್ವವನ್ನು ಹೆಚ್ಚಿಸಿ ಆಡಳಿತವನ್ನು ಸಾರ್ವಜನಿಕರಿಗೇ ಹಸ್ತಾಂ ತರಿಸಬೇಕು.

“ಸೆಕ್ಯುಲರಿಸಂ’ ದುರ್ಬಳಕೆ
ಸೆಕ್ಯುಲರಿಸಂ ಎಂಬ ಪದ ದುರ್ಬಳಕೆಯಾದದ್ದೇ ಹೆಚ್ಚು. ಈ ಶಬ್ದದ ಸರಿಯಾದ ವ್ಯಾಖ್ಯಾನವನ್ನು ಅರ್ಥ ಮಾಡಿಕೊಡುವ ಕಾರ್ಯ ವಾಗಬೇಕು. ವಿದೇಶಿ ಬಂಡವಾಳ ಹೂಡಿಕೆ ಮಾಡುವಾಗ ಬೇರೆ ಬೇರೆ ದೇಶಗಳವರಿಗೆ ಅವಕಾಶ ಕೊಡುತ್ತಾರೆ. ಬೇರೆಯವರಿಗೆ ಅಕಾಮೊಡೇಟ್‌ ಮಾಡುವ ಸಂಸ್ಕೃತಿ ನಮ್ಮಲ್ಲಿ ಅಂತರ್ಗ ತವಾಗಿದೆ. ಗ್ರಾಮ ಪಂಚಾಯತ್‌ನಿಂದ ಪ್ರಧಾನಿವರೆಗೆ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯು ಸನಾತನ ಧರ್ಮದ ನಂಬಿಕೆಯಿಂದಲೇ ನಡೆಯುತ್ತಿದೆ ಎನ್ನುವುದನ್ನು ಮರೆಯ ಬಾರದು. ರಾಜಕೀಯ, ಅಧಿಕಾರಗಳಲ್ಲಿ ರಾಗದ್ವೇಷಗಳು ಇರುವುದಾದರೂ ಇಡೀ ಸಮಗ್ರ ವ್ಯವಸ್ಥೆಗೆ ಧರ್ಮವೇ ಮೂಲಾಧಾರ. ಸೆಕ್ಯುಲರಿಸಂನ ವಿಪರೀತ ವ್ಯಾಖ್ಯಾ ನದಿಂದಾಗಿ ನಮ್ಮ ದೇಶದಲ್ಲಿ ನಮಗೇ ಅಕಾಮೊಡೇಶನ್‌ ಇಲ್ಲದಂತಾಗಿದೆ.

ಧರ್ಮಾಧಾರದಲ್ಲಿ “ಪಿಡಿಎಸ್‌’
ಜಮ್ಮು-ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನದ ವತಿಯಿಂದ ವಿಶ್ವಚಿ ವಿದ್ಯಾನಿಲಯವೊಂದು ಸ್ಥಾಪನೆ ಯಾಗುತ್ತಿದೆ. ದಿಲ್ಲಿ, ಪಂಜಾಬ್‌, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿರುವ ಆರ್ಥಿಕವಾಗಿ ದುರ್ಬಲವಾಗಿರುವ ದೇವ ಸ್ಥಾನಗಳಿಗೆ ನೆರವು ಕೊಡಲಾಗುತ್ತಿದೆ. ಅದೇ ರೀತಿ ತಿರುಪತಿ ವೆಂಕಟರಮಣ, ಪುರಿ ಜಗನ್ನಾಥ, ಅಸ್ಸಾಂನ ಕಾಮಾಕ್ಷಿ ದೇವಸ್ಥಾನದಿಂದ ಆಯಾ ಪ್ರದೇಶಗಳ ಬಡ ದೇವಸ್ಥಾನಗಳಲ್ಲಿ ಸಹಾಯಹಸ್ತ, ಜಲಸಂರಕ್ಷಣೆ ಜಾಗೃತಿ, ವೇದ ಪಾಠಶಾಲೆಯಂತಹ ಚಟುವ ಟಿಕೆಗಳನ್ನು ನಡೆಸಬೇಕು. ಪಬ್ಲಿಕ್‌ ಡಿಸ್ಟ್ರಿಬ್ಯೂಶನ್‌ ಸಿಸ್ಟಮ್‌ (ಪಿಡಿಎಸ್‌) ಧರ್ಮಾಧಾರದಲ್ಲಿರಬೇಕು. ಅಂತ್ಯೋ ದಯ, ಏತಾತ್ಮವಾದ ಇಲ್ಲಿಂದ ಆರಂಭ ವಾಗಬೇಕು. ನಾವು ಹೈದರಾಬಾದ್‌ನಲ್ಲಿ ದೇವಸ್ಥಾನಗಳ ನಿರ್ವಹಣ ಕೋರ್ಸ್‌, ತಿರುಪತಿಯಲ್ಲಿ ಗೋವಿಜ್ಞಾನ ಪಾಠ ಶಾಲೆಯನ್ನು ಇದೇ ಹಿನ್ನೆಲೆಯಲ್ಲಿ ಆರಂಭಿಸಿದ್ದೇವೆ.

“ಪ್ರವಾಸೀ ಭಾರತ್‌’ನಿಂದ “ನಿವಾಸಿ ಭಾರತ್‌’ಗೆ
“ಪ್ರವಾಸೀ ಭಾರತ್‌’ನಿಂದ “ನಿವಾಸಿ ಭಾರತ್‌’ ಆಗಬೇಕೆಂದು ಯುವ ವೃಂದಕ್ಕೆ ಕರೆ ಕೊಡುತ್ತಿದ್ದೇವೆ. ಅಮೃತ ಬಿಂದುವಿನಿಂದ (ಮೈಕ್ರೋಚಾರಿಟಿ) ಆನಂದ ಬಿಂದುವಾಗಬೇಕು. ಎಲ್ಲ ಕುಶಲಕರ್ಮಿಗಳಿಗೆ ಸಂಬಂಧಿಸಿದ ತರಬೇತಿಗಳನ್ನು ಸನಾತನ ಧರ್ಮ ಸೇವಾಗ್ರಾಮ ಯೋಜನೆಯಡಿ ನಾವು ತಮಿಳುನಾಡು, ಆಂಧ್ರಪ್ರದೇಶದಲ್ಲಿ ಆರಂಭಿಸಿದ್ದೇವೆ. ಯುವಕರು “ಹಾರ್ಡ್‌ ವರ್ಕ್‌ -ಸ್ವೀಟ್‌ ವರ್ಡ್ಸ್‌’ (ಕಠಿನ ಶ್ರಮ-ಮಧುರವಾಣಿ) ನೀತಿ ಯನ್ನು ಅನುಸರಿಸಬೇಕು. ಕುಟುಂಬ ಸಭ್ಯತೆಯನ್ನು ಕಾಪಾಡಿ ಕೊಂಡು ಹೋಗಬೇಕು. ಐಶಾರಾಮಿತನ, ಸೋಮಾರಿತನದಿಂದ ನಾವು ಹೊರಬರಬೇಕು.

ತಮಿಳುನಾಡು ಸರಕಾರದ ಹಿಂದೂ ವಿರೋಧಿ ನೀತಿ ಹೊಸದೇನಲ್ಲ
ತಮಿಳುನಾಡಿನ ಮುಖ್ಯಮಂತ್ರಿ, ಸಚಿವರು ಮೊದಲಾದವರು ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡುತ್ತಿರುವುದು ಹೊಸತಲ್ಲ. ಇದು ನೂರು ವರ್ಷಗಳಿಂದಲೂ ನಡೆಯುತ್ತಲೇ ಇದೆ. 1920ರಿಂದಲೂ ನಡೆಯುತ್ತಿದ್ದು ಈಗಲೂ ಮುಂದುವರಿಯುತ್ತಿದೆ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.