Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
ಟ್ರಕ್ ಸಂಚಾರ ನಿರ್ಬಂಧ ಪರಿಶೀಲನೆಗೆ ಸೂಚನೆ
Team Udayavani, Nov 23, 2024, 12:39 AM IST
ಹೊಸದಿಲ್ಲಿ: ದಿಲ್ಲಿಯ ಎಲ್ಲ 113 ಚೆಕ್ ಪಾಯಿಂಟ್ಗಳಲ್ಲಿ ಟ್ರಕ್ಗಳು ಒಳ ಬರುತ್ತಿವೆಯೋ, ಇಲ್ಲವೋ ಎಂದು ಪರಿ ಶೀಲಿಸಲು ಪೊಲೀಸರನ್ನು ನಿಯೋಜಿಸು ವಂತೆ ಕೇಂದ್ರ ಸರಕಾರಕ್ಕೆ ಹಾಗೂ ದಿಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಮಾಲಿನ್ಯ ತಡೆಗೆ ಟ್ರಕ್ಗೆ ನಿರ್ಬಂಧ ವಿಧಿಸಿದ್ದರೂ ಟ್ರಕ್ಗಳ ಒಳ ಬರುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ನ್ಯಾ| ಅಭಯ್ ಎಸ್.ಓಕಾ ಹಾಗೂ ನ್ಯಾ| ಆಗಸ್ಟೀನ್ ಜಾರ್ಜ್ ಮಾಸಿಹ್ ಪೀಠವು ಗಂಭೀರವಾಗಿ ಪರಿಗಣಿಸಿದೆ. 113 ಚೆಕ್ ಪಾಯಿಂಟ್ಗಳ ಪೈಕಿ 13 ಚೆಕ್ ಪಾಯಿಂಟ್ಗಳಲ್ಲಿ ಟ್ರಕ್ ಸಂಚಾರ ನಿರ್ಬಂಧಿಸ ಲಾಗಿದೆ. ಉಳಿದ 100 ಕಡೆ ಪೊಲೀಸರ ನಿಯೋ ಜನೆಯಾಗಬೇಕು, ನ.25ಕ್ಕೆ ವ್ಯವಸ್ಥೆ ಕುರಿತು ವರದಿ ಸಲ್ಲಿಸಬೇಕು ಎಂದಿದೆ.
ದಿಲ್ಲಿಯಲ್ಲಿ ವಾಕಿಂಗ್ ನ್ಯುಮೋನಿಯಾ
ಉಸಿರಾಟ ಸಂಬಂಧಿತ ಸಮಸ್ಯೆ ಯಿಂದ ಬಳಲುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿ ಜನರನ್ನು ಇದೀಗ “ವಾಕಿಂಗ್ ನ್ಯೂಮೋನಿಯಾ’ ಕಾಡಲು ಆರಂಭಿಸಿದೆ. ನೆಗಡಿ, ಜ್ವರ, ಗಂಟಲು ಬೇನೆ, ಕೆಮ್ಮು ಇದರ ರೋಗ ಲಕ್ಷಣಗಳು. ನ್ಯೂಮೋನಿಯಾ ಇದ್ದರೂ ಆಸ್ಪತ್ರೆಗೆ ದಾಖಲಾಗಬೇಕಾಗದ ಕಾರಣ ಇದನ್ನು ವಾಕಿಂಗ್ ನ್ಯುಮೋನಿಯಾ ಎನ್ನಲಾಗುತ್ತಿದೆ. ಇದೊಂದು ಸಾಂಕ್ರಾಮಿಕವಾದ ಕಾರಣ ಕಡಿಮೆ ಸಮಯದಲ್ಲೇ ಅತೀ ಹೆಚ್ಚು ಜನ ರನ್ನು ಬಾಧಿಸಲು ಆರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.