Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

ಗುಂಡಿನ ಚಕಮಕಿ ನಡೆದ ಕುರುಹುಗಳು ಕಾಣ ಸಿಗುತ್ತವೆ, ಜನರಿಲ್ಲದ ಮನೆಯಲ್ಲಿ ಹಳಸಿದ ಅನ್ನ, ಪ್ರಾಣಿಗಳ ಮೌನ ವೇದನೆ

Team Udayavani, Nov 23, 2024, 7:45 AM IST

peethabailu-1

ಕಾರ್ಕಳ/ ಹೆಬ್ರಿ: ಹೆಬ್ರಿ, ಕಬ್ಬಿನಾಲೆಯಿಂದ 8 ಕಿ. ಮೀ. ದೂರದ ಪಶ್ಚಿಮಘಟ್ಟದ ತಪ್ಪಲು ಪೀತಬೈಲಿನಲ್ಲಿ ನಡೆದ ಎನ್‌ಕೌಂಟರ್‌ ಬಳಿಕ ಇಡೀ ಪರಿಸರದಲ್ಲಿ ಭಯಮಿಶ್ರಿತ ಮೌನ ಆವರಿಸಿಕೊಂಡಿದೆ.

ಸೋಮವಾರ ಸಂಜೆ ನಕ್ಸಲ್‌ ಮತ್ತು ಎಎನ್‌ಎಫ್ ನಡುವಿನ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತನಾಗಿರುವ ಘಟನೆ ನಡೆದ ಗ್ರಾಮದಲ್ಲೀಗ ನೀರವ ಮೌನ ಆವರಿಸಿಕೊಂಡಿದೆ. ಗುರುವಾರದವರೆಗೂ ಸ್ಥಳದಲ್ಲಿ ಬಿಗು ಭದ್ರತೆಯೊಂದಿಗೆ ತನಿಖೆ ಕಾರ್ಯಗಳು ನಡೆದಿವೆ. ಫಾರೆನ್ಸಿಕ್‌ ತಂಡದ ತಜ್ಞರು ಮಂಗಳೂರು ಮತ್ತು ಬೆಂಗಳೂರಿನಿಂದ ಆಗಮಿಸಿ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ಮೃತ ವಿಕ್ರಂ ಗೌಡ ದೂರದ ಸಂಬಂಧಿಕರಾದ ಜಯಂತ್‌ ಗೌಡ, ಸುಧಾಕರ್‌ ಗೌಡ, ನಾರಾಯಣ ಗೌಡ ಅವರ ಮೂರು ಮನೆಗಳು ಈ ಪರಿಸರದಲ್ಲಿವೆ. ಜಯಂತ್‌ ಗೌಡ ಮನೆಯ ಆವರಣದಲ್ಲಿ ಎನ್‌ಕೌಂಟರ್‌ ನಡೆದಿದೆ. ಇವರೆಲ್ಲರೂ ಕೃಷಿ ಕೂಲಿ ಕಾರ್ಮಿಕರಾಗಿದ್ದು, ಕಬ್ಬಿನಾಲೆ ಸುತ್ತಮುತ್ತ ನಿತ್ಯ ಕೆಲಸಗಳಿಗೆ ಹೋಗುತ್ತಾರೆ.

ಘಟನೆ ನಡೆದ ದಿನ ಬೆಳಗ್ಗೆ ಮೂರು ಮನೆಯವರೂ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಮರಳುವಷ್ಟರಲ್ಲಿ ಇಡೀ ಪರಿಸರವನ್ನು ಪೊಲೀಸರು ಸುತ್ತುವರಿದಿದ್ದರು. ಯಾರನ್ನೂ ಮನೆಯ ಒಳಗೆ ಬಿಡದೆ ಹಿಂದಕ್ಕೆ ಕಳುಹಿಸಿದ್ದಾರೆ. ಶೋಧ ನಡೆಯುತ್ತಿರುವುದು ಮತ್ತು ತನಿಖಾ ನೆಲೆಯಲ್ಲಿ, ನಾಗರಿಕ ಸುರಕ್ಷೆಯ ಉದ್ದೇಶದಿಂದ ಈ ಕುಟುಂಬಗಳನ್ನು ಪೊಲೀಸರು ಅವರ ಮನೆಗಳಿಗೆ ಹೋಗಲು ಬಿಟ್ಟಿಲ್ಲ. ಪ್ರಸ್ತುತ ಈ ಮನೆಯವರು ಸಂಬಂಧಿಕರ ಮನೆಗಳಲ್ಲಿದ್ದಾರೆ.

ಎನ್‌ಕೌಂಟರ್‌ ಕುರುಹುಗಳು
ಎಎನ್‌ಎಫ್ ಮತ್ತು ನಕ್ಸಲ್‌ ನಡುವಿನ ಗುಂಡಿನ ಚಕಮಕಿಯಲ್ಲಿ ಗುಂಡುಗಳು ಅಡಿಕೆ, ತೆಂಗಿನ ಮರಗಳನ್ನು ಸೀಳಿ ಸಾಗಿದ ಕುರುಹುಗಳು ಕಾಣಸಿಗುತ್ತವೆ. ಮನೆಯ ಚಾವಡಿಯಲ್ಲಿ ದೇಹವು ಬಿದ್ದ ಕುರುಹಿದೆ. ಈ ಮನೆಯ ಒಳಗೆ ಮತ್ತು ಹೊರಗೆ ಪೊಲೀಸರು ಸಾಕ್ಷ್ಯ ಮತ್ತು ಮಹಜರು ವೇಳೆ ಗುರುತಿಸಿದ ಕೆಲವು ಕುರುಹುಗಳಿಗೆ ವೃತ್ತಾಕಾರ ಬಿಡಿಸಿ ಅದಕ್ಕೆ ಸಂಖ್ಯೆಗಳನ್ನು ನೀಡಲಾಗಿದೆ.

ಪರಿಸರದ ಚಿತ್ರಣ ಹೇಗಿದೆ?
ಎನ್‌ಕೌಂಟರ್‌ ನಡೆದ ಜಯಂತ್‌ ಗೌಡರ ಮನೆಯೊಳಗೆ ಅಡುಗೆ ಮಾಡಿಟ್ಟ ಪಾತ್ರೆ, ಹಳಸಿದ ಬೇಯಿಸಿದ ವಸ್ತುಗಳು ಹಾಗೆಯೇ ಉಳಿದುಕೊಂಡಿವೆ. ಕೋಳಿ, ನಾಯಿಗಳ ವೇದನೆ ಕೇಳುವವರಿಲ್ಲ. ಉಳಿದ ಎರಡು ಮನೆಗಳ ಸ್ಥಿತಿಯೂ ಇದೇ ರೀತಿಯಲ್ಲಿದೆ. ಮೂರೂ ಮನೆಗಳಿಗೆ ಬೀಗವನ್ನೂ ಹಾಕಿಲ್ಲ. ಅವರು ಕೆಲಸಕ್ಕೆ ಹೋಗುವಾಗಲೂ ಇಲ್ಲಿ ಬೀಗ ಹಾಕುತ್ತಿರಲಿಲ್ಲ.

ಪುತ್ರಿಯ ಮನೆಯಲ್ಲಿ
ಪುಳ್ಳಂತಬೆಟ್ಟಿನ ಪುತ್ರಿಯ ಮನೆಯಲ್ಲಿ ನೆಲೆಸಿದ್ದ ಜಯಂತ್‌ ಗೌಡರ ಪತ್ನಿ ಗಿರಿಜಾ ಮಾತನಾಡಿ, ವಿಕ್ರಂ ಗೌಡನನ್ನು ಎನ್‌ಕೌಂಟರ್‌ ಮಾಡಲಾಗಿದೆ. ಸುರಕ್ಷೆ ದೃಷ್ಟಿಯಿಂದ ನೀವು ಮನೆಗೆ ಹೋಗುವುದು ಬೇಡ ಎಂದು ಪೊಲೀಸರು ನಮಗೆ ಸೂಚಿಸಿದ್ದರು. ಮುಂದೆ ಹೇಗೆ ಎಂದು ನೋಡಬೇಕು. ಮಗ ರಾಕೇಶ್‌ ಕೈ ಮುರಿದುಕೊಂಡಿದ್ದು, ಕಳೆದ ವಾರ ಆಸ್ಪತ್ರೆಗೆ ಹೋಗಿದ್ದ. ಪೀತಬೈಲಿನಲ್ಲಿ ಏನೆಲ್ಲ ನಡೆದಿವೆ ಎಂಬುದು ಟಿವಿ ಮೂಲಕವೇ ತಿಳಿಯಿತು ಎಂದು ವಿವರಿಸಿದರು.

ಮೂಲ ಸೌಕರ್ಯ ಕಲ್ಪಿಸಲಿ
ತಿಂಗಳಮಕ್ಕಿ, ಪೀತಬೈಲು ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಮುಂದಾಗಬೇಕು. ಇಲ್ಲಿನ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಅಂಗವಿಕಲನಾಗಿದ್ದು, ಇಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಕನಿಷ್ಠ ರಸ್ತೆಯನ್ನಾದರೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಸರಕಾರ ವಿಶೇಷ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. -ಲಕ್ಷ್ಮಣ ಗೌಡ, ತಿಂಗಳಮಕ್ಕಿ ನಿವಾಸಿ

ಟಾಪ್ ನ್ಯೂಸ್

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

DK-Shivakumar

Congress Politics: ಡಿಸಿಎಂ ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಭೇಟಿ: ಹೈಕಮಾಂಡ್‌ ಜತೆ ಚರ್ಚೆ

BY-Vijayendara

By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Gambir-family

Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್‌ ಗಂಭೀರ್‌ ಭಾರತಕ್ಕೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.