Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
ದಾರದಿಂದ ಕತ್ತು ಬಿಗಿದು 7 ಹಾಗೂ 3 ವರ್ಷದ ಇಬ್ಬರು ಮಕ್ಕಳ ಹತ್ಯೆ ; ಮೃತ ಮಕ್ಕಳ ಜೊತೆ ಸೆಲ್ಫಿ ತೆಗೆದು ಪತಿಗೆ ಫೋಟೊ ಕಳುಹಿಸಿದ್ದ ಪತ್ನಿ
Team Udayavani, Nov 23, 2024, 11:16 AM IST
ಬೆಂಗಳೂರು: ಹೆತ್ತ ತಾಯಿಯೇ ತನ್ನಿಬ್ಬರು ಮಕ್ಕಳನ್ನು ಕೊಂದು ನಂತರ ಆಕೆಯೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಉತ್ತರಹಳ್ಳಿಯ ಮುನಿಸ್ವಾಮಿ ಲೇಔಟ್‌ನ ನಿವಾಸಿಗಳಾದ ಶುಭಂಸಾಹು (7) ಹಾಗೂ ಶಿಯಾ ಸಾಹು (3) ಹತ್ಯೆಯಾದ ಮಕ್ಕಳು. ತಾಯಿ ಮಮತಾ ಸಾಹು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿರುವ ತಾಯಿ.
ಜಾರ್ಖಂಡ್ ಮೂಲದ ಸುನೀಲ್ ಸಾಹು-ಮಮತಾ ಸಾಹು ದಂಪತಿ ತನ್ನಿಬ್ಬರು ಮಕ್ಕಳೊಂದಿಗೆ ಕಳೆದ 8 ತಿಂಗಳ ಹಿಂದೆಯಷ್ಟೆ ನಗರಕ್ಕೆ ಬಂದು ಉತ್ತರಹಳ್ಳಿಯ ಮುನಿಸ್ವಾಮಿ ಲೇಔಟ್‌ನ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಸುನೀಲ್ ಸಾಹು ಓಲಾ ಆಟೋ ಚಾಲಕನಾಗಿದ್ದರೆ, ಮಮತಾ ಗೃಹಿಣಿಯಾಗಿದ್ದಳು.
ಗುರುವಾರ ರಾತ್ರಿ ಸುನೀಲ್ ಮೊಬೈಲ್‌ನಲ್ಲಿ ಜಾರ್ಖಂಡ್‌ನ ಯುವತಿಯ ಜೊತೆಗೆ ಮಾತನಾಡುತ್ತಿರುವುದನ್ನು ಪತ್ನಿ ಮಮತಾ ಗಮನಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಇದಾದ ಬಳಿಕ ಸುನೀಲ್ ಸಾಹು ಹೊರಗೆ ಹೋಗಿದ್ದ. ಇದರಿಂದ ನೊಂದ ಮಮತಾ ತನ್ನಿಬ್ಬರು ಮಕ್ಕಳ ಕತ್ತನ್ನು ದಾರದಿಂದ ಬಿಗಿದು ಕೊಲೆ ಮಾಡಿದ್ದಾಳೆ. ನಂತರ ತಾನು ನೇಣು ಬಿಗಿದುಕೊಳ್ಳಲು ಯತ್ನಿಸಿದಾಗ ಹಗ್ಗ ತುಂಡಾಗಿತ್ತು. ಬಳಿಕ ಪತಿಗೆ ಮಕ್ಕಳು ಹತ್ಯೆಯಾಗಿರುವ ಸೆಲ್ಫಿ ಫೋಟೋ ಕಳಿಸಿದ್ದ ಮಮತಾ, ಚಾಕು ತೆಗೆದುಕೊಂಡು ತಾನೂ ಸಹ ಕತ್ತು ಕೊಯ್ದುಕೊಳ್ಳುತ್ತಿರುವುದಾಗಿ ತಿಳಿಸಿದ್ದಳು.
ಆ ವೇಳೆ ಚಾಕುವಿನಿಂದ ಸ್ವತಃ ಕುತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕುಸಿದು ಬಿದ್ದಿದ್ದಳು. ಫೋಟೋ ನೋಡಿದ್ದ ಪತಿ ಮನೆಗೆ ಬರುವಷ್ಟರಲ್ಲಿ ಮಕ್ಕಳಿಬ್ಬರೂ ಮೃತಪಟ್ಟಿದ್ದರು. ಪತ್ನಿ ರಕ್ತದ ಮಡುವಿ ನಲ್ಲಿ ಇರುವುದು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆಗೆ ದಾಖಲಿಸಿದ್ದು, ಮಮತಾ ಪ್ರಾಣಾ ಪಾಯದಿಂದ ಪಾರಾಗಿದ್ದಾಳೆ. ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಸುನೀಲ್ ಸಾಹು ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.