ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ

ಘಟಪ್ರಭಾ ರೈಲು ನಿಲ್ದಾಣ ಇದ್ದು ರೈಲು ಸಾರಿಗೆ ಅನುಕೂಲವಿದೆ

Team Udayavani, Nov 23, 2024, 2:19 PM IST

ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ

ಅರಭಾಂವಿ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು ತಾಲೂಕು ಕೇಂದ್ರ ಮೂಡಲಗಿಯಿಂದ 23 ಕಿ.ಮೀ. ಅಂತರದಲ್ಲಿದ್ದು 16.2213 ಡಿಗ್ರಿ ಉತ್ತರ,74.8229 ಡಿಗ್ರಿ ಪೂರ್ವ ಅಕ್ಷಾಂಶ ರೇಖಾಂಶಗಳ ಮಧ್ಯದ ಪ್ರದೇಶವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅರಭಾಂವಿ ವಿಧಾನಸಭಾ ಕ್ಷೇತ್ರವಾಗಿದೆ. ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದ್ದು ಇತ್ತೀಚೆಗೆ ಪಟ್ಟಣ ಪಂಚಾಯಿತಿಯಾಗಿದೆ.

ಸನ್‌ 2011ರ ಜನಗಣತಿ ಪ್ರಕಾರ 5990 ಪುರುಷರು, 6075 ಮಹಿಳೆಯರು ಸೇರಿ ಒಟ್ಟು 12065 ಜನಸಂಖ್ಯೆ ಹೊಂದಿದೆ. ಭೌಗೋಳಿಕ ಕ್ಷೇತ್ರ 6767.12 ಎಕರೆ ಫಲವತ್ತಾದ ಕೆಂಪು ಮತ್ತು ಕಪ್ಪು ಕೃಷಿ ಭೂಮಿ ಇದ್ದು ಕಬ್ಬು, ಹತ್ತಿ, ಅರಿಷಿಣ, ಸೋಯಾಬಿನ್‌ದಂತಹ ವಾಣಿಜ್ಯ ಬೆಳೆಗಳಲ್ಲದೆ ಗೋವಿನಜೋಳ, ಗೋಧಿ, ಸದಕ, ಕಡಲೆ, ಶೇಂಗಾ ಬೆಳೆಯಲಾಗುತ್ತದೆ. ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.

ಈ ಊರಿನಲ್ಲಿ ಆರು ಪ್ರಾಚೀನ ಕಾಲದ ಭಾವಿಗಳಿದ್ದುದರಿಂದ ಆರುಭಾಂವಿ ಎನ್ನುತ್ತ ಅರಭಾಂವಿ ಎಂದಾಗಿದೆ. ಕ್ರಿ.ಶ.1791ರಲ್ಲಿ
ಕ್ಯಾಪ್ಟನ್‌ ಮೂರ್‌ ಎಂಬ ಬ್ರಿಟಿಷ್‌ ಅಧಿಕಾರಿ ಆರ್‌ ಬೇಂಗ್‌ ಎಂದು ಕರೆದಿದ್ದಾನೆ. ಅರಭಾಂವಿಯ ಪಶ್ಚಿಮ ಭಾಗದಲ್ಲಿರುವ ಗುಡ್ಡದಲ್ಲಿ ಕೆಂಪು ಮತ್ತು ಬಿಳಿ ಮಿಶ್ರಿತ ಗಟ್ಟಿ ಮತ್ತು ಮೃದು ಕಲ್ಲಿನ ಕಣಿವೆಗಳಿದ್ದು ಈ ಭಾಗದಲ್ಲಿ ಮನೆ ಕಟ್ಟಲು ಇಲ್ಲಿಯ ಉತ್ಕೃಷ್ಟ ಕಲ್ಲುಗಳನ್ನು ಬಳಸುತ್ತಾರೆ.

ಅರಭಾಂವಿ ಪರಿಸರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಈಗ ಅವು ನಶಿಸಿ ಹೋಗಿದ್ದು ಅಲ್ಲಲ್ಲಿ ವಿರಳವಾಗಿ ಕಾಣ ಸಿಗುತ್ತಿವೆ. ಇಲ್ಲಿಂದ 7 ಕಿ.ಮೀ ಅಂತರದಲ್ಲಿ ಘಟಪ್ರಭಾ ರೈಲು ನಿಲ್ದಾಣ ಇದ್ದು ರೈಲು ಸಾರಿಗೆ ಅನುಕೂಲವಿದೆ. ಅಂತೆಯೇ ಈ ಪ್ರದೇಶದಲ್ಲಿ ಗರಿಷ್ಟ ಪ್ರಮಾಣದಲ್ಲಿ ಬೆಳೆಯುವ ತರಕಾರಿಗಳನ್ನು ಮುಂಬೈ, ಪುಣೆ, ಸಾಂಗ್ಲಿ, ಮೀರಜ, ಕೊಲ್ಲಾಪೂರ, ಬೆಳಗಾವಿ, ಬೆಂಗಳೂರ ನಗರಗಳಿಗೆ ಕಳಿಸುತ್ತಾರೆ. ಅಲ್ಲದೆ ಇತ್ತೀಚೆಗೆ ನರ್ಸರಿಗಳು ಹುಟ್ಟಿಕೊಂಡಿದ್ದು ವಿವಿಧ ಜಾತಿಯ ಸಸಿಗಳನ್ನು ತಯಾರಿಸಿ ರವಾನಿಸುತ್ತಿದ್ದಾರೆ.

ಇಲ್ಲಿಯ ಮಹಾಲಿಂಗ ಗಿರಿಯಲ್ಲಿ ಶಿವಲಿಂಗೇಶ್ವರ(ದುರದುಂಡೇಶ್ವರರು)ರಿಂದ ಸುಮಾರು 18ನೇ ಶತಮಾನದಲ್ಲಿ ಅರಭಾಂವಿ
ಶಿಲೆಗಳಿಂದ ನಿರ್ಮಿತವಾದ ಭವ್ಯವಾದ ದುರದುಂಡೇಶ್ವರ ಪುರಾತನ ಮಠವಿದ್ದು ಆಕರ್ಷಣೀಯ ಪವಿತ್ರ ತಾಣವಾಗಿದೆ. ಈ ಮಠವು ಹಿಮಾಲಯದಲ್ಲಿ ತಪಸ್ಸನ್ನಾಚರಿಸಿ ಡಪಳಾಪೂರ ಪುಣ್ಯಾಶ್ರಮದ ಶ್ರೀ ಗುರುಲಿಂಗೇಶ್ವರರಿಂದ ಕೃಪಾಶೀರ್ವಾದ ಪಡೆದು ಮಹಾಲಿಂಗೇಶ್ವರ ರೊಡಗೂಡಿ ಅನೇಕ ಪವಾಡಗಳನ್ನು, ಲೀಲೆಗಳನ್ನು ಮಾಡುತ್ತ ಲೋಕಕಲ್ಯಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಶ್ರೀ ದುರದುಂಡೇಶ್ವರರ ಜಾಗೃತ ತಪೋಭೂಮಿಯಾಗಿದೆ.

ಮರಾಠಾ ಪೇಶ್ವೆಗಳ ಬಂಧಿಯಾಗಿ ಕಾರಾಗೃಹವಾಸದಲ್ಲಿದ್ದ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿ ತನ್ನ ಅಂತ್ಯಕಾಲದಲ್ಲಿ
ಅನಾರೋಗ್ಯದಿಂದ ಬಳಲುತ್ತಿದ್ದ ಆತ ತನ್ನ ಕೊನೆಯ ಕ್ಷಣಗಳನ್ನು ದುರದುಂಡೇಶ್ವರ ಮಠದಲ್ಲಿ ಕಳೆಯಬೇಕೆಂಬ ಅಪೇಕ್ಷೆ ಮೇರೆಗೆ ಇಲ್ಲಿಗೆ ಕರೆತರಲಾಯಿತು. ಇಲ್ಲಿಗೆ ಬಂದ ಮಲ್ಲಸರ್ಜನು ಶ್ರೀ ದುರದುಂಡೇಶ್ವರ ದರ್ಶನಾಶೀವಾದ ಪಡೆದು ಪಾದೋದಕ,
ಅಂಬಲಿ ಸ್ವೀಕರಿಸಿ ಇಲ್ಲಿಯೇ ಪ್ರಾಣ ಬಿಟ್ಟನೆಂದು ದಾಖಲೆಗಳಿವೆ. ಅಂತೆಯೇ ಇಂದಿಗೂ ಮಠದ ಹಿಂಭಾಗದ ಕಟ್ಟೆ ಮೇಲೆ ಮಲ್ಲಸರ್ಜನ ಸ್ಮಾರಕ ಇದೆ.

ಇಲ್ಲಿ ಅರಭಾಂವೆಪ್ಪ ಎಂದೇ ಪ್ರಸಿದ್ಧವಾದ ಆಂಜನೆಯನ ಪುರಾತನ ಮಂದಿರವಿದೆ. ಇದರ ಕಾಲ ಖಚಿತವಾಗಿ ತಿಳಿದು ಬಂದಿಲ್ಲ. ಈ ಮಂದಿರದ ಪ್ರವೇಶ ದ್ವಾರದ ಎಡಬದಿ(ಹೊರಗಿನ) ಗೋಡೆಯಲ್ಲಿ ಒಂದು ಶಾಸನ ಇತ್ತೆಂಬ ಕುರುಹು ಸಿಗುತ್ತದೆ. ಅರಭಾಂವಿ ಪರಿಸರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ರೈತ ಸಲಹಾ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ ಇದ್ದು ಕಾರ್ಯ ನಿರ್ವಹಿಸುತ್ತಿವೆ.

ಟಾಪ್ ನ್ಯೂಸ್

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಗತ್ತಿನ ಐದು ನಿಷೇಧಿತ ಸ್ಥಳಗಳು…ಸಾರ್ವಜನಿಕರಿಂದ ದೂರ ಇರುವ ಈ ಪ್ರದೇಶಗಳ ವಿಶೇಷತೆ ಏನು?

ಜಗತ್ತಿನ ಐದು ನಿಷೇಧಿತ ಸ್ಥಳಗಳು…ಸಾರ್ವಜನಿಕರಿಂದ ದೂರ ಇರುವ ಈ ಪ್ರದೇಶಗಳ ವಿಶೇಷತೆ ಏನು?

Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್‌!

Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್‌!

21-tirupathi

Tour Circle: ತಿರುಮಲನ ದರ್ಶನಕ್ಕೊಂದು ಪ್ರವಾಸ

Dubai-N1

Dubai Miracle Garden: ಮರು ಭೂಮಿಯಲ್ಲಿ ಮೂಡಿ ಬಂದ ಪುಷ್ಪ ಸಿರಿ ವೈಭವ

Tourism: ಕರ್ನಾಟಕದಲ್ಲಿ ಪ್ರವಾಸಿ ತಾಣಗಳ ಕೊರತೆಯಿಲ್ಲ…ಇಷ್ಟಾದರೂ ಸುತ್ತಾಡಿ!

Tourism: ಕರ್ನಾಟಕದಲ್ಲಿ ಪ್ರವಾಸಿ ತಾಣಗಳ ಕೊರತೆಯಿಲ್ಲ…ಇಷ್ಟಾದರೂ ಸುತ್ತಾಡಿ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.