Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
2014 ರಲ್ಲಿ ಮೋದಿಯವರನ್ನು ಅಧಿಕಾರಕ್ಕೆ ತಂದ ಅಭೂತಪೂರ್ವ ಪ್ರಯತ್ನಗಳು ಈ ಚುನಾವಣೆಯಲ್ಲಿ ಮೀರಿಸಿದೆ!
ವಿಷ್ಣುದಾಸ್ ಪಾಟೀಲ್, Nov 23, 2024, 8:34 PM IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಐತಿಹಾಸಿಕ ಜಯ ಸಾಧಿಸುವಲ್ಲಿ ಬಿಜೆಪಿಯ ಸೈದ್ಧಾಂತಿಕ ಮೂಲ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಬಲು ದೊಡ್ಡ ಪಾತ್ರ ವಹಿಸಿದೆ. ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳ ಪೈಕಿ ಆಡಳಿತಾರೂಢ ಮೈತ್ರಿಕೂಟ ಮಹಾಯುತಿ 17ರಲ್ಲಿ ಮಾತ್ರ ಗೆದ್ದು ಆಘಾತಕಾರಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಆರ್ ಎಸ್ ಎಸ್ ಜಾಗೃತವಾಗಿ ಕೆಲಸ ಆರಂಭಿಸಿತ್ತು. ಸಾವಿರಾರು ಸ್ವಯಂ ಸೇವಕರು ಸದ್ದಿಲ್ಲದೇ ಬೂತ್ ಮಟ್ಟದಲ್ಲಿ ಕೆಲಸ ಮಾಡಲು ಶುರು ಮಾಡಿಕೊಂಡಿದ್ದರು.
ಅತುಲ್ ಲಿಮಾಯೆಗೆ ಮಹತ್ವದ ಜವಾಬ್ದಾರಿ
ಆರ್‌ಎಸ್‌ಎಸ್‌ನ ಪಶ್ಚಿಮ ಪ್ರಾಂತದ ಮಾಜಿ ಮುಖ್ಯಸ್ಥ ಮತ್ತು ಈಗ ಜಂಟಿ ಪ್ರಧಾನ ಕಾರ್ಯದರ್ಶಿ ಅತುಲ್ ಲಿಮಾಯೆ ಅವರನ್ನು ಸಂಘಟನೆಯ ನೇತೃತ್ವ ವಹಿಸಲು ಸಂಘ ನೇಮಿಸಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರೊಂದಿಗೆ ಮತ್ತು ದೆಹಲಿಯ ಬಿಜೆಪಿ ನಾಯಕರೊಂದಿಗೆ, ವಿಶೇಷವಾಗಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಸಂಯೋಜಕ ಅರುಣ್ ಕುಮಾರ್ ಅವರೊಂದಿಗೆ ಲಿಮಾಯೆ ಸಹಕರಿಸಿ ಕೆಲಸ ನಿರ್ವಹಿಸಿ ಯಶಸ್ಸನ್ನು ಕಂಡಿದ್ದಾರೆ.
ಮಹಾಯುತಿ ಅತ್ಯಮೋಘ ವಿಜಯದ ಹಿಂದಿನ ಮಾಸ್ಟರ್‌ಮೈಂಡ್ 54ರ ಹರೆಯದ ಅತುಲ್ ಲಿಮಾಯೆ, ನಾಸಿಕ್ ಮೂಲದ ಎಂಜಿನಿಯರ್. ಲಿಮಾಯೆ ಅವರು ಸುಮಾರು ಮೂರು ದಶಕಗಳ ಹಿಂದೆ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ತೊರೆದು ಪೂರ್ಣ ಸಮಯದ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು.
1977 ರ ತುರ್ತು ಪರಿಸ್ಥಿತಿಯ ನಂತರದ ಚುನಾವಣೆಗಳು, 2014 ರಲ್ಲಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತಂದ ಪ್ರಚಾರದ ಸಮಯದಲ್ಲಿ ಆರ್‌ಎಸ್‌ಎಸ್ ಮಾಡಿದ ಅಭೂತಪೂರ್ವ ಪ್ರಯತ್ನಗಳು ಈ ಚುನಾವಣೆಯಲ್ಲಿ ಮೀರಿಸಿದೆ ಎಂದು ದೀರ್ಘಾವಧಿಯ ಸಂಘದ ಪ್ರಚಾರಕ್ ದಿಲೀಪ್ ದಿಯೋಧರ್ ಹೇಳಿಕೊಂಡಿರುವುದು ಸಂಘದ ಕಾರ್ಯ ಶೈಲಿಗೆ ಸಾಕ್ಷಿಯಾಗಿದೆ.
ಅನಾಮಧೇಯರಾಗಿ ಉಳಿಯಲು ಬಯಸುವ ಅನೇಕ ಆರ್‌ಎಸ್‌ಎಸ್ ನಾಯಕರು, ಕಾರ್ಯಕರ್ತರು ಸದ್ದಿಲ್ಲದೆ ಮನೆ-ಮನೆ ಪ್ರಚಾರದ ಜತೆಗೆ, ಆರ್‌ಎಸ್‌ಎಸ್ ಇತರ ಹಿಂದುಳಿದ ವರ್ಗಗಳ, ಸಣ್ಣ ಸಮುದಾಯಗಳ ನಾಯಕರೊಂದಿಗೆ ತೊಡಗಿಸಿಕೊಂಡಿದ್ದರು. ಬಿಜೆಪಿಯಿಂದ ಕೆಲ ಸಮುದಾಯಗಳಿಗೆ ಚುನಾವಣಾ ರಾಜಕೀಯದಲ್ಲಿ ಸಾಕಷ್ಟು ಪ್ರಾತಿನಿಧ್ಯ ಮತ್ತು ಕಲ್ಯಾಣ ಸೌಲಭ್ಯಗಳನ್ನು ಒದಗಿಸಬಹುದು ಎಂದು ಅವರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಿಮಾಯೆ ಅವರು ನಾಯಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದರು. ಮರಾಠ ನಾಯಕ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಪ್ರಬಲವಾದ ಕೃಷಿ ಸಮುದಾಯವನ್ನು ಬಿಜೆಪಿ ವಿರುದ್ಧ ತಿರುಗಿಸುವ ಪ್ರಯತ್ನಗಳ ಅಲ್ಲೇ ತಣ್ಣಗಾಗಿಸಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿದ್ದು ಆರ್ ಎಸ್ ಎಸ್ ನಾಯಕರೇ ಎನ್ನುವುದು ಈಗ ಬಹಿರಂಗವಾಗಿದೆ.
ಗೆಲುವಿನಲ್ಲಿ ನಿರ್ಣಾಯಕವೆನಿಸುವ ಮರಾಠ ನಾಯಕರನ್ನು ಲಿಮಾಯೆ ಮತ್ತು ಅವರ ತಂಡ ತಲುಪಿ, ನಿಮ್ಮನ್ನು ಒಬಿಸಿ ಎಂದು ವರ್ಗೀಕರಿಸದೆ ಮೀಸಲಾತಿಯನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿತ್ತು. ಜಾರಂಗೆ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ನಲ್ಲಿ ಮತ್ತು ಕೇಂದ್ರದ ನರೇಂದ್ರ ಮೋದಿ ಸರಕಾರದೊಂದಿಗೆ ಈ ವಿಷಯ ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದರು.
ನಿತಿನ್ ಗಡ್ಕರಿ, ಫಡ್ನವಿಸ್ ಜತೆಗೂಡಿ ಚುನಾವಣೆಯಲ್ಲಿ ಆರ್ ಎಸ್ ಎಸ್ ಅದ್ಭುತವನ್ನೇ ಮಾಡಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಮೌಲಾನಾ ಸಜ್ಜದ್ ನೊಮಾನಿ ಅವರು ಮುಸ್ಲಿಮರಲ್ಲಿ “ಮತ ಜಿಹಾದ್” ಗಾಗಿ ಕರೆ ನೀಡಿದ ನಂತರ ಫಡ್ನವಿಸ್ ಧರ್ಮಯುದ್ಧಕ್ಕೆ ಕರೆ ನೀಡಿದ್ದು ಭಾರೀ ಪ್ರಭಾವ ಬೀರಿದೆ ಎನ್ನಬಹುದು.
2024 ರ ಲೋಕಸಭಾ ಚುನಾವಣೆಯಲ್ಲಿ ಜಾತಿ ಗಣತಿಗೆ ರಾಹುಲ್ ಗಾಂಧಿಯವರ ಒತ್ತಾಯ, ಜಾತಿ ಲೆಕ್ಕಾಚಾರ ಹಿಂದುಳಿದ ವರ್ಗಗಳ ಮತ ಗಳಿಸಿಕೊಟ್ಟಿದ್ದರೆ, ಬಿಜೆಪಿಯ ಸಾಂಪ್ರದಾಯಿಕ ಬೆಂಬಲದ ನೆಲೆಯ ಸವಾಲು ಸ್ವೀಕರಿಸಿ ಈ ಚುನಾವಣೆಯಲ್ಲಿ ಹಿಂದುಳಿದ ವರ್ಗ ಮತ್ತು ವಿಶೇಷವಾಗಿ ಸೂಕ್ಷ್ಮಒಬಿಸಿ ಮತದಾರರನ್ನು ಸೆಳೆಯಲು ಆರ್ ಎಸ್ ಎಸ್ ತೊಡಗಿಸಿಕೊಳ್ಳುವ ಮೂಲಕ ಬಿಜೆಪಿ ಶಿಂಧೆ ಬಣದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಪರವಾಗಿ ಹಿಂದೂ ಮತಗಳನ್ನು ಕ್ರೋಢೀಕರಿಸುವಲ್ಲಿ ಯಶಸ್ವಿಯಾಯಿತು.
ಬಿಜೆಪಿಯೊಂದೆ 132 ಸ್ಥಾನಗಳನ್ನು ಗೆಲ್ಲುವುದು ಅಷ್ಟು ಸುಲಭದ ಮಾತೇನಲ್ಲ. ಶಿಂಧೆ ಶಿವಸೇನೆ 57 ಮತ್ತು ಅಜಿತ್ ಪವಾರ್ ಅವರ ಎನ್ ಸಿಪಿ 41 ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾಗಿದೆ. ಎನ್ ಡಿಎ ಒಟ್ಟು 234 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ತನ್ನದಾಗಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.