Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

ಶಿಶುವನ್ನು ಬಯಸುವ ದಂಪತಿಗೆ ಹೊಸ ಆಶಾಕಿರಣ

Team Udayavani, Nov 24, 2024, 9:11 AM IST

4-Laparoscopic

ಬಂಜೆತನ ಅಥವಾ ಸಂತಾನಹೀನತೆಯು ಜಾಗತಿಕವಾಗಿ ಕೋಟ್ಯಂತರ ದಂಪತಿಗಳನ್ನು ಬಾಧಿಸುತ್ತದೆ, ಇದಕ್ಕೆ ಪರಿಹಾರಗಳಿಗಾಗಿ ಹುಡುಕಾಡುವುದರ ಸಹಿತ ಅವರು ಸಂತಾನ ಹೀನತೆಯಿಂದ ಅಪಾರ ಮಾನಸಿಕ ಮತ್ತು ಆರ್ಥಿಕ ಒತ್ತಡಗಳನ್ನು ಅನುಭವಿ ಸುತ್ತಾರೆ. ಅದೃಷ್ಟವಶಾತ್‌ ವೈದ್ಯಕೀಯ ತಂತ್ರಜ್ಞಾನದಲ್ಲಿ ಆಗಿರುವ ಅತ್ಯಾಧುನಿಕ ಪ್ರಗತಿಗಳಿಂದಾಗಿ ಇದಕ್ಕೆ ಪರಿಣಾಮಕಾರಿ ಪರಿಹಾರ ಗಳನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇಂತಹ ಪರಿಹಾರಗಳಲ್ಲಿ ಒಂದು ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆ; ಸಂತಾನೋತ್ಪತ್ತಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಲು ಇದೊಂದು ಅತೀ ಕಡಿಮೆ ದೇಹಪ್ರವೇಶಿಕೆಯುಳ್ಳ ವಿಧಾನವಾಗಿದೆ.

ಲ್ಯಾಪರೊಸ್ಕೋಪಿ ಎಂದರೇನು?

ಕೆಮರಾ ಮತ್ತು ಬೆಳಕು ಬೀರುವ ಸಾಧನ ಜತೆಗೂಡಿರುವ ಸಪೂರ ಮತ್ತು ಮೃದುವಾದ ಕೊಳವೆ ಸಹಿತವಾದ ಶಸ್ತ್ರಚಿಕಿತ್ಸಾ ವಿಧಾನ ಲ್ಯಾಪರೊಸ್ಕೋಪಿ. ಇದನ್ನು ಹೊಟ್ಟೆಯ ಭಾಗದಲ್ಲಿ ಸಣ್ಣದಾದ ಗಾಯ ಮಾಡುವ ಮೂಲಕ ಒಳಕ್ಕೆ ತೂರಿಸಲಾಗುತ್ತದೆ. ದೊಡ್ಡದಾದ ಶಸ್ತ್ರಚಿಕಿತ್ಸಾತ್ಮಕ ಗಾಯವನ್ನು ಮಾಡದೆಯೇ ಸಂತಾನೋತ್ಪತ್ತಿಯ ಅಂಗಗಳನ್ನು ನೇರವಾಗಿ ವೀಕ್ಷಿಸಿ ಅಗತ್ಯ ಚಿಕಿತ್ಸೆಗಳನ್ನು ನಡೆಸುವುದಕ್ಕೆ ಈ ವಿಧಾನವು ಶಸ್ತ್ರಚಿಕಿತ್ಸಾ ತಜ್ಞರಿಗೆ ಅನುವು ಮಾಡಿಕೊಡುತ್ತದೆ. ಲ್ಯಾಪರೊಸ್ಕೋಪಿಯ ಪ್ರಯೋಜನಗಳು ಗಮನಾರ್ಹವಾಗಿವೆ: ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಬಳಿಕ ಅನುಭವಕ್ಕೆ ಬರುವ ನೋವು ಕಡಿಮೆ, ಗುಣ ಹೊಂದಲು ಕಡಿಮೆ ಸಮಯ ಸಾಕು, ಜತೆಗೆ ದೊಡ್ಡ ಗಾಯವನ್ನು ಉಂಟು ಮಾಡುವ ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನಕ್ಕೆ ಹೋಲಿಸಿದರೆ ಇದರಲ್ಲಿ ಉಳಿಯುವ ಗಾಯದ ಗುರುತು ಸಣ್ಣದು. ‌

ಕಾರ್ಯವಿಧಾನ ಹೇಗೆ?

ಲ್ಯಾಪರೊಸ್ಕೋಪಿಕ್‌ ಚಿಕಿತ್ಸಾ ಪ್ರಕ್ರಿಯೆಯು ಸಾಮಾನ್ಯವಾಗಿ ರೋಗಿಗೆ ಸಂಪೂರ್ಣ ಅರಿವಳಿಕೆ ನೀಡುವಿಕೆಯೊಂದಿಗೆ ಆರಂಭವಾಗುತ್ತದೆ. ಸರ್ಜನ್‌ ರೋಗಿಯ ಹೊಟ್ಟೆಯ ಭಾಗದಲ್ಲಿ ಕೆಲವು ಗಾಯಗಳನ್ನು ಮಾಡಿ ವಿಶೇಷ ಉಪಕರಣಗಳ ಸಹಿತವಾಗಿ ಲ್ಯಾಪರೊಸ್ಕೋಪಿಯನ್ನು ತೂರಿಸುತ್ತಾರೆ. ಈ ಉಪಕರಣಗಳು ಸರ್ಜನ್‌ರಿಗೆ ರೋಗಿಯ ಸಂತಾನೋತ್ಪತ್ತಿ ಅಂಗಗಳನ್ನು ಕಂಪ್ಯೂಟರ್‌ ಪರದೆಯಲ್ಲಿ ವೀಕ್ಷಿಸುತ್ತ ಎಂಡೊಮೆಟ್ರಿಕ್‌ ಅಂಗಾಂಶವನ್ನು ತೆಗೆದುಹಾಕುವುದು, ಅಡೆಶನ್‌ಗಳನ್ನು ಸರಿಪಡಿಸುವುದು ಅಥವಾ ಗಡ್ಡೆಗಳು ಯಾ ಫೈಬ್ರಾಯ್ಡಗಳನ್ನು ತೆಗೆದುಹಾಕುವಂತಹ ಅಗತ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ನೆರವಾಗುತ್ತವೆ. ಈ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ತಗಲುವ ಸಮಯವು ಚಿಕಿತ್ಸೆಯ ಸಂಕೀರ್ಣತೆಯನ್ನು ಅವಲಂಬಿಸಿ 30 ನಿಮಿಷಗಳಿಂದ ತೊಡಗಿ ಕೆಲವು ತಾಸುಗಳ ವರೆಗೆ ಇರಬಹುದು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳನ್ನು ಸ್ವಲ್ಪ ಸಮಯ ನಿಗಾದಡಿ ಇರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅದೇ ದಿನ ಅಥವಾ ಮರುದಿನ ಮನೆಗೆ ಕಳುಹಿಸಲಾಗುತ್ತದೆ. ಹೀಗಾಗಿ ಅವರಿಗೆ ತಮ್ಮ ದೈನಿಕ ಚಟುವಟಿಕೆಗಳಿಗೆ ಬೇಗನೆ ಮರಳಲು ಸಾಧ್ಯವಾಗುತ್ತದೆ.

ಯಾರು ಇದರ ಪ್ರಯೋಜನ ಪಡೆಯಬಹುದು?

ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಯನ್ನು ಶಿಶುವನ್ನು ಹೊಂದಲು ದಂಪತಿಯ ಸಾಮರ್ಥ್ಯಕ್ಕೆ ಅಡ್ಡಿಯಾಗುವ ಹಲವಾರು ಪ್ರಜನನ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವಾಗಿ ಶಿಫಾರಸು ಮಾಡಲಾಗುತ್ತದೆ. ಇಂಥ ಸಮಸ್ಯೆಗಳಲ್ಲಿ ಸಾಮಾನ್ಯವಾದ ಕೆಲವು ಈ ಕೆಳಗಿನಂತಿವೆ:

  1. ಎಂಡೊಮೆಟ್ರಿಯೋಸಿಸ್‌: ಸಾಮಾನ್ಯವಾಗಿ ಗರ್ಭಕೋಶದ ಒಳಗೆ ಇರಬೇಕಾದ ಎಂಡೊಮೆಟ್ರಿಯಲ್‌ ಅಂಗಾಂಶಗಳು ಗರ್ಭಕೋಶದಿಂದ ಹೊರಗೆ ಬೆಳೆದಾಗ ಈ ಸಮಸ್ಯೆ ಉಂಟಾಗುತ್ತದೆ. ಎಂಡೊಮೆಟ್ರಿಯೋಸಿಸ್‌ ದೀರ್ಘ‌ಕಾಲೀನ ನೋವು ಮತ್ತು ಸಂತಾನಹೀನತೆಗೆ ಕಾರಣವಾಗಬಹುದು. ಶಸ್ತ್ರಚಿಕಿತ್ಸಾತಜ್ಞರು ಈ ಅಸಹಜ ಬೆಳವಣಿಗೆಗಳನ್ನು ಗುರುತಿಸಿ ನಿವಾರಿಸಲು ಲ್ಯಾಪರೊಸ್ಕೋಪಿಯು ಸಹಾಯ ಮಾಡುತ್ತದೆ, ಆ ಮೂಲಕ ಲಕ್ಷಣಗಳು ನಿವಾರಣೆಗೊಂಡು ಸಂತಾನೋತ್ಪತ್ತಿ ಸಾಧ್ಯತೆ ಹೆಚ್ಚುತ್ತದೆ.
  2. ಪೆಲ್ವಿಕ್‌ ಅಡೆಶನ್‌ಗಳು: ಶಸ್ತ್ರಚಿಕಿತ್ಸೆಗಳು, ಸೋಂಕುಗಳು ಅಥವಾ ಎಂಡೊಮೆಟ್ರಿಯೋಸಿಸ್‌ನಂತಹ ಅನಾರೋಗ್ಯಗಳಿಂದಾಗಿ ಅಂಗಾಂಶಗಳು ಗಾಯಗೊಳ್ಳಬಹುದು ಮತ್ತು ಫಾಲೊಪಿಯನ್‌ ಕೊಳವೆಗಳಲ್ಲಿ ತಡೆಯನ್ನು ಉಂಟು ಮಾಡಬಹುದು. ಹೀಗೆ ಅಂಟಿಕೊಂಡಿರುವ ಅಸಹಜ ಅಂಗಾಂಶಗಳನ್ನು ಕತ್ತರಿಸಿ ತೆಗೆದುಹಾಕುವ ಮೂಲಕ ಸಂತಾನೋತ್ಪತ್ತಿ ಅಂಗಗಳು ಸಹಜ ಸ್ಥಿತಿಗೆ ಮರಳಲು ಮತ್ತು ಅವುಗಳ ಕಾರ್ಯಚಟುವಟಿಕೆ ಪುನರ್‌ಸ್ಥಾಪನೆಗೊಳ್ಳಲು ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನೆರವಾಗುತ್ತದೆ.
  3. ಅಂಡಾಶಯದ ಗಡ್ಡೆಗಳು: ಅಂಡಾಶಯದಲ್ಲಿ ಬೆಳವಣಿಗೆ ಹೊಂದಿರುವ ದ್ರವಾಂಶ ತುಂಬಿದ ಗಡ್ಡೆಗಳು ಅಥವಾ ಗಂಟುಗಳು ಸಂತಾನೋತ್ಪತ್ತಿಗೆ ಅಡ್ಡಿಯಾಗಬಹುದು. ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆರೋಗ್ಯವಂತ ಅಂಗಾಂಶಗಳನ್ನು ಸಂರಕ್ಷಿಸುವುದರ ಜತೆಗೆ ಇಂತಹ ಗಡ್ಡೆಗಳನ್ನು ತೆಗೆದುಹಾಕಿ ಸ್ತ್ರೀಯ ಗರ್ಭಿಣಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.
  4. ಗರ್ಭಕೋಶದ ಅಸಹಜ ಸ್ಥಿತಿಗಳು: ಫೈಬ್ರಾಯ್ಡಗಳು ಮತ್ತು ಪಾಲಿಪ್‌ಗ್ಳು ಗರ್ಭಕೋಶದ ಒಳಭಾಗದಲ್ಲಿ ಇದ್ದರೆ ಭ್ರೂಣವು ನೆಲೆಯಾಗುವುದಕ್ಕೆ ಅಡಚಣೆಯಾಗಬಹುದು. ಇಂತಹ ಅಸಹಜ ಬೆಳವಣಿಗೆಗಳನ್ನು ನಿವಾರಿಸಲು ಮತ್ತು ಗರ್ಭ ಕಟ್ಟಲು ಹೆಚ್ಚು ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಲ್ಯಾಪರೊಸ್ಕೋಪಿಯು ಸಹಾಯ ಮಾಡುತ್ತದೆ.
  5. ಟ್ಯೂಬಲ್‌ ಫ್ಯಾಕ್ಟರ್‌ ಇನ್‌ಫ‌ರ್ಟಿಲಿಟಿ: ಫಾಲೊಪಿಯನ್‌ ಕೊಳವೆಗಳಲ್ಲಿ ಇರುವ ಅಡಚಣೆಗಳು ಅಥವಾ ಹಾನಿಯ ಸಹಿತ ಫಾಲೊಪಿಯನ್‌ ಕೊಳವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಗಮನಾರ್ಹ ತೊಂದರೆ ಉಂಟಾಗಬಹುದು. ಫಾಲೋಪಿಯನ್‌ ಕೊಳವೆಗಳ ಆರೋಗ್ಯವನ್ನು ವಿಶ್ಲೇಷಿಸಿ, ಯಾವುದೇ ಸಮಸ್ಯೆಗಳಿದ್ದರೆ ಸರಿಪಡಿಸಲು ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆ ಸಹಾಯ ಮಾಡುವ ಮೂಲಕ ಸಹಜ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯ ಪ್ರಯೋಜನಗಳು

ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಯಿಂದ ಹಲವಾರು ಪ್ರಯೋಜನಗಳಿವೆ:

  1. ಕಡಿಮೆ ಗಾಯ: ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ಮಾಡಬೇಕಾದ ಗಾಯ ತೀರಾ ಸಣ್ಣದಾಗಿದ್ದು, ಇದರಿಂದಾಗಿ ಉಂಟಾಗುವ ನೋವು ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಕಡಿಮೆ ಮತ್ತು ಚೇತರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಸಾಕು.
  2. ತತ್‌ಕ್ಷಣ ರೋಗ ಪತ್ತೆ ಮತ್ತು ಚಿಕಿತ್ಸೆ: ಲ್ಯಾಪರೊಸ್ಕೋಪಿ ಮೂಲಕ ಅಂತರ್ಗತವಾಗಿರುವ ಸಮಸ್ಯೆಗಳನ್ನು ಪತ್ತೆಹಚ್ಚುವುದರ ಜತೆಗೆಯೇ ಅಗತ್ಯವಾದ ಚಿಕಿತ್ಸೆಯನ್ನು ಕೂಡ ಕೂಡಲೇ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದಾಗಿ ಅನಾರೋಗ್ಯಕ್ಕೆ ಉತ್ತರ ಮತ್ತು ಪರಿಹಾರ ಎರಡೂ ಒಂದೇ ಭೇಟಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ.
  3. ಉತ್ತಮ ಪ್ರಜನನಾತ್ಮಕ ಫ‌ಲಿತಾಂಶಗಳು: ಎಂಡೋಮೆಟ್ರಿಯೋಸಿಸ್‌ ಮತ್ತು ಪೆಲ್ವಿಕ್‌ ಅಡೆಶನ್‌ಗಳಂತಹ ಅನಾರೋಗ್ಯ ಸ್ಥಿತಿಗಳನ್ನು ಲ್ಯಾಪರೊಸ್ಕೋಪಿಯ ಮೂಲಕ ಚಿಕಿತ್ಸೆಗೆ ಒಳಪಡಿಸುವುದರಿಂದ ಸಹಜವಾಗಿ ಅಥವಾ ಸಹಾಯಿತ ಪ್ರಜನನಾತ್ಮಕ ತಂತ್ರಜ್ಞಾನಗಳ ನೆರವಿನಿಂದ ಗರ್ಭ ಕಟ್ಟುವ ಸಾಧ್ಯತೆಗಳು ಹೆಚ್ಚುತ್ತವೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ.
  4. ಆಸ್ಪತ್ರೆ ವಾಸದ ಅವಧಿ ಅತ್ಯಲ್ಪ: ಲ್ಯಾಪರೊಸ್ಕೋಪಿಗೆ ಒಳಗಾದ ಅನೇಕ ರೋಗಿಗಳು ಕೆಲವೇ ತಾಸುಗ ಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳ ಬಹುದಾಗಿದ್ದು, ಇದರಿಂದ ಅವರ ದೈನಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗುವುದಿಲ್ಲ.
  5. ಗಾಯದ ಗುರುತು ಸಣ್ಣದು: ಲ್ಯಾಪರೊಸ್ಕೋಪಿಯಲ್ಲಿ ಉಂಟಾಗುವ ಗಾಯ ಸಣ್ಣ ಪ್ರಮಾಣದ್ದಾಗಿರುವುದರಿಂದ ಸೌಂದರ್ಯಾತ್ಮಕ ಫ‌ಲಿತಾಂಶವು ಉತ್ತಮವಾಗಿರುತ್ತದೆ. ಇದರಿಂದಾಗಿ ದೈಹಿಕವಾಗಿ ಬೇಗನೆ ಗುಣ ಹೊಂದಲು ಸಾಧ್ಯವಾಗುತ್ತದೆಯಲ್ಲದೆ ದೇಹ ಸೌಂದರ್ಯವೂ ಕೆಡುವುದಿಲ್ಲ.

-ಮುಂದಿನ ವಾರಕ್ಕೆ

-ಡಾ| ಅಂಜಲಿ ಸುನಿಲ್‌ ಮುಂಡ್ಕೂರು

ಅಸೋಸಿಯೇಟ್‌ ಪ್ರೊಫೆಸರ್‌

ರಿಪ್ರೊಡಕ್ಟಿವ್‌ ಮೆಡಿಸಿನ್‌ ಆ್ಯಂಡ್‌ ಸರ್ಜರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರಿಪ್ರೊಡಕ್ಟಿವ್‌ ಮೆಡಿಸಿನ್‌ ಮತ್ತು ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.