ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Team Udayavani, Nov 24, 2024, 11:43 AM IST
ಎಲ್ಲ ವರ್ಗದ ಜನರ ಸಂಕಟಗಳಿಗೆ ಕಿವಿಯಾಗಿ ಅವುಗಳ ಪರಿಹಾರಕ್ಕೆ ಪತ್ರಕರ್ತರು ಶ್ರಮಿಸುತ್ತಾರೆ. ವಿಪರ್ಯಾಸವೆಂದರೆ ಪತ್ರಕರ್ತರ ಕಷ್ಟಗಳನ್ನು ಕೇಳುವವರೇ ಇರುವುದಿಲ್ಲ. ಇಂಥ ಸಂದರ್ಭದಲ್ಲಿ “ನಮಗೆ ನಾವೇ ಸಹಾಯ ಮಾಡಿಕೊಳ್ಳೋಣ’ ಎಂದು ನಿರ್ಧರಿಸಿ ಪತ್ರಕರ್ತರೇ ಆರಂಭಿಸಿರುವ ” ಆಪದ್ಭಾಂಧವ ‘ ಎಂಬ ವಾಟ್ಸ್‌ಆ್ಯಪ್ ಗುಂಪು ಹಲವರ ಕಂಬನಿ ಒರೆಸಿದೆ, ಕಷ್ಟಕ್ಕೆ ಮಿಡಿದಿದೆ…
“ಏನಾದರೂ ಭಾರಿ ತೊಂದರೆ ಆದಾಗ ದೂರ ಇದ್ದು ಬಿಡೋರೇ ಜಾಸ್ತಿ… ಕಷ್ಟದಲ್ಲಿ ನಮಗೆ ನಾವೇ…’ ಇಂಥದ್ದೊಂದು ಅನುಭವ ಕೋವಿಡ್-19 ಸಮಯದಲ್ಲಿ ಬಹುತೇಕ ಮಂದಿಗೆ ಆಗಿತ್ತು. ಈ ಅನುಭವಕ್ಕೆ ಪತ್ರಕರ್ತರೂ ಹೊರತಾಗಿರಲಿಲ್ಲ. ಆ ಸಮಯದಲ್ಲಿ ಅನೇಕ ಪತ್ರಕರ್ತರು ಕೋವಿಡ್ ಸೋಂಕಿಗೆ ಒಳಗಾಗಿದ್ದಲ್ಲದೆ ಒಬ್ಬರ ಹಿಂದೊಬ್ಬರಂತೆ ಕೆಲವರು ಸಾವಿಗೀಡಾದರು. ಅವರನ್ನು ಅವಲಂಬಿಸಿದವರು ಸಂಕಷ್ಟಕ್ಕೆ ಒಳಗಾದರು.
ಸಂದರ್ಭ ಹೀಗಿದ್ದಾಗಲೇ, ಇತರ ಹಲವು ಕಂಪನಿಗಳ ಉದ್ಯೋಗಿಗಳಂತೆ ಪತ್ರಕರ್ತರ ಸಂಬಳದಲ್ಲೂ ಕಡಿತ ಮಾಡಲಾಯಿತು. ಕೆಲವರು ಕೆಲಸ ಕಳೆದುಕೊಂಡರೆ, ಮತ್ತೆ ಕೆಲವರು ಕೋವಿಡ್ ಚಿಕಿತ್ಸೆ ಮತ್ತಿತರೆ ಕಾರಣಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾದರು. ಆಗ ಎಲ್ಲ ಕ್ಷೇತ್ರದ ಉದ್ಯೋಗಿಗಳ ಪರಿಸ್ಥಿತಿಯೂ ಬಹುತೇಕ ಒಂದೇ ತೆರನಾಗಿತ್ತು. ಪತ್ರಕರ್ತರು ಎಲ್ಲರ ಸಮಸ್ಯೆಗಳನ್ನೂ ವರದಿ ಮಾಡುತ್ತಿದ್ದರು. ಆದರೆ ಅವರ ಸಮಸ್ಯೆಗಳನ್ನು ಕೇಳುವವರೇ ಇರಲಿಲ್ಲ! ಹೀಗಿರುವಾಗ, ಕಡೇಪಕ್ಷ ನಾವು ಪತ್ರಕರ್ತರು ನಮಗೆ ನಾವೇ ಸಹಾಯ ಮಾಡಿಕೊಂಡರೆ ಹೇಗೆ? ಕಷ್ಟದಲ್ಲಿರುವ ವೃತ್ತಿಬಾಂಧವರಿಗೆ ನಾವೇ ನೆರವಾದರೆ ಹೇಗೆ? ಎಂಬ ಯೋಚನೆಯೊಂದು ಬಂದಿತ್ತು.
ಅಲ್ಲದೆ, ಅದೇ ವೇಳೆ ಸಮುದಾಯವೊಂದರ ಸಮಾನ ಮನಸ್ಕರು “ಟೀಮ್ ಏಕತಾ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು ಪ್ರತಿಯೊಬ್ಬರಿಂದ ಬರೀ 200 ರೂ. ಸಂಗ್ರಹಿಸಿ, ಆ ಮೊತ್ತವನ್ನು ತಮ್ಮ ಸಮುದಾಯ ದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿ ರುವವರಿಗೆ ವೈದ್ಯಕೀಯ ಚಿಕಿತ್ಸೆ ಗೆಂದು ನೀಡುತ್ತಿದ್ದರು. ಅದೇ ರೀತಿ ನಾವು ಪತ್ರಕರ್ತರೂ ಒಂದು ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡು ಮಾಧ್ಯಮಮಿತ್ರರಿಗೆ ನೆರವಾದರೆ ಹೇಗೆ? ಎಂಬ ಆಲೋಚನೆಯಲ್ಲಿ ಹುಟ್ಟಿಕೊಂಡಿದ್ದೇ ” ಆಪದ್ಭಾಂಧವ ‘.
ಸುಮಾರು 17 ಲಕ್ಷ ರೂ. ಸಹಾಯ
ಒಂದು ಆಲೋಚನೆಯಿಂದ ವಾಟ್ಸ್‌ಆ್ಯಪ್ ಗ್ರೂಪ್ ಏನೋ ಸೃಷ್ಟಿಯಾಯಿತು. ಆದರೆ 2020ರ ಮಧ್ಯದಲ್ಲಿ ಆರಂಭಿಸಲಾದ “ಆಪದ್ಭಾಂಧವ’ ಗ್ರೂಪಿಗೆ ಸಮಾನ ಮನಸ್ಕರು ಎಂದು ಸಿಕ್ಕಿದ್ದು ಬೆರಳೆಣಿಕೆಯ ಮಂದಿ ಮಾತ್ರ. “ಇದು ಸಾಧ್ಯವಾ? ಎಷ್ಟು ಮಂದಿ ಕೈಜೋಡಿಸಿಯಾರು? ಇವೆಲ್ಲ ಆಗಲ್ಲ…’ ಎಂಬ ಮಾತುಗಳ ಮಧ್ಯೆಯೇ ಹುಟ್ಟಿಕೊಂಡ ಗ್ರೂಪಿಗೆ ಆರಂಭದಲ್ಲಿ ಅಂಥ ವೇಗದ ಸ್ಪಂದನೆ ಸಿಕ್ಕಿರಲಿಲ್ಲ. ಪರಿಸ್ಥಿತಿ ಹೀಗಿದ್ದರೂ, ಹತ್ತಿಪ್ಪತ್ತು ಮಂದಿ ಆರಂಭಿಕ ಸದಸ್ಯರು ಪ್ರಯತ್ನಿಸುವುದನ್ನು ನಿಲ್ಲಿಸಲಿಲ್ಲ.
“ಕನಿಷ್ಠ 50 ಮಂದಿ ಸಮಾನ ಮನಸ್ಕರು ಸಿಗುವವರೆಗೆ ಹಣ ಸಂಗ್ರಹಿಸುವುದು ಬೇಡ. 50 ಮಂದಿ ಆಗುತ್ತಿದ್ದಂತೆ ಹಣ ಸಂಗ್ರಹಿಸೋಣ. ಮೊದಲ ತಿಂಗಳಲ್ಲಿ ಬೇಕಿದ್ದರೆ ಎಲ್ಲರೂ 500 ರೂಪಾಯಿ ನೀಡೋಣ. ಆ ನಂತರದ ತಿಂಗಳಲ್ಲಿ 200 ರೂಪಾಯಿಯಂತೆ ಮುಂದುವರಿಸೋಣ’ ಎಂದು ನಿರ್ಧರಿಸಲಾಯಿತು. ಕೊನೆಗೂ 2020ರ ನವೆಂಬರ್ ಸುಮಾರಿಗೆ 50 ಸದಸ್ಯರು ಸಿಕ್ಕಿ, ಆ ತಿಂಗಳಲ್ಲಿ 24,000 ರೂ. ಸಂಗ್ರಹವಾಗಿತ್ತು. ಅದನ್ನು ಅನಾರೋಗ್ಯದ ಕಾರಣಕ್ಕೆ ತೀರಾ ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಇಬ್ಬರು ಮಾಧ್ಯಮಮಿತ್ರರಿಗೆ ತಲಾ 12 ಸಾವಿರ ರೂಪಾಯಿಯಂತೆ ನೀಡಲಾಯಿತು. ನಂತರದ ತಿಂಗಳಲ್ಲಿ “ಆಪದಾºಂಧವ’ರಿಂದ ತಲಾ 200 ರೂ. ಸಂಗ್ರಹ ನಡೆಸಲಾಯಿತು.
2020ರ ನವೆಂಬರ್‌ನಲ್ಲಿ 50 ಸದಸ್ಯರೊಂದಿಗೆ ಆರಂಭವಾದ “ಆಪದಾºಂಧವ ಗ್ರೂಪ್’ನಲ್ಲಿ ಈಗ 200ಕ್ಕೂ ಹೆಚ್ಚು ಪತ್ರಕರ್ತರು ಸಕ್ರಿಯ ಸದಸ್ಯರಾಗಿದ್ದಾರೆ. ಅಂದರೆ ನಾಲ್ಕು ವರ್ಷಗಳಲ್ಲಿ ಈ ಗ್ರೂಪ್ ನಾಲ್ಕು ಪಟ್ಟು ಬೆಳೆದಿದೆ. ಇವರೆಲ್ಲ ಸೇರಿ ಇದುವರೆಗೆ 49 ತಿಂಗಳಲ್ಲಿ 70 ಪತ್ರಕರ್ತರಿಗೆ ಒಟ್ಟು 16,95,200 ರೂ. ನೆರವು ನೀಡಿದ್ದಾರೆ. ಬಹುಶಃ ಪತ್ರಕರ್ತರ ಯಾವುದೇ ಸಂಘ- ಸಂಸ್ಥೆ ಕೂಡ ವೈದ್ಯಕೀಯ ನೆರವಿಗಾಗಿ ನಾಲ್ಕು ವರ್ಷಗಳಲ್ಲಿ ಇಷ್ಟು ದೊಡ್ಡ ಮೊತ್ತ ನೀಡಿಲ್ಲ ಅನಿಸುತ್ತದೆ.
ಕಾರ್ಯವೈಖರಿ, ಪಾರದರ್ಶಕತೆ…
ಹಣ ಸಂಗ್ರಹಕ್ಕೆಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗಿದೆ. “ಆಪದಾºಂಧವ’ದ ಸದಸ್ಯರು ಆನ್‌ಲೈನ್ ಮೂಲಕ ಆ ಖಾತೆಗೆ ಪ್ರತಿ ತಿಂಗಳು 200 ರೂ. ಟ್ರಾನ್ಸ್ ಫರ್ ಮಾಡುತ್ತಾರೆ. ಜೊತೆಗೆ ಗ್ರೂಪ್ ಸದಸ್ಯರು ತಮ್ಮ ಗಮನಕ್ಕೆ ಬಂದ ಸಂಕಷ್ಟದಲ್ಲಿರುವ ಪತ್ರಕರ್ತರ ವಿವರ ನೀಡಿ ಅವರನ್ನು ಫಲಾನುಭವಿ ಎಂದು ಪರಿಗಣಿಸಬಹುದು ಎಂಬುದಾಗಿ ಯಾರಾದರೂ ಒಬ್ಬರು ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ತಿಂಗಳಿಗೆ 2ರಿಂದ 4 ಶಿಫಾರಸುಗಳು ಬರುತ್ತವೆ. ಪ್ರತಿ ಫಲಾನುಭವಿಗೆ ಕನಿಷ್ಠ 20 ಸಾವಿರ ರೂ. ಸಿಗುವಂತೆ, ಗ್ರೂಪ್ ಸದಸ್ಯರ ಮತ ಚಲಾವಣೆ ಮೇರೆಗೆ ಎಷ್ಟು ಜನರಿಗೆ ಹಂಚಬೇಕು ಎಂದು ನಿರ್ಧರಿಸಲಾಗುತ್ತದೆ. ಒಂದು ತಿಂಗಳಲ್ಲಿ ನೀಡಲಾಗದೆ ಉಳಿದ ಫಲಾನುಭವಿಗೆ ಮುಂದಿನ ತಿಂಗಳಲ್ಲಿ ಮತ್ತೆ ಮತಕ್ಕೆ ಪರಿಗಣಿಸಿ ಹಂಚಿಕೆ ಮಾಡಲಾಗುತ್ತದೆ.
“ಆಪದಾºಂಧವ’ ಗ್ರೂಪಿನ ದೊಡ್ಡ ಶಕ್ತಿ ಎಂದರೆ ಪಾರದರ್ಶಕತೆ ಮತ್ತು ಬಹುಮತದ ನಿರ್ಣಯ. ಇಲ್ಲಿ ಹಣ ಸಂಗ್ರಹದಿಂದ ಹಿಡಿದು ಅದರ ವಿತರಣೆ- ಲೆಕ್ಕಾಚಾರ ಎಲ್ಲವೂ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಎಷ್ಟೇ ಹಣ ಬಂದರೂ ಅಷ್ಟನ್ನೂ ಗ್ರೂಪ್‌ನ ಸದಸ್ಯರ ಬಹುಮತದ ನಿರ್ಣಯ ದಂತೆ ಆಯಾ ತಿಂಗಳಲ್ಲೇ ಹಂಚಿಕೆ ಮಾಡಿ ಸಹಾಯ ಮಾಡಲಾಗು ತ್ತದೆ. ಹೀಗಾಗಿ ಇಲ್ಲಿ ಹಣ ಉಳಿಯುವ ಪ್ರಶ್ನೆ ಇಲ್ಲ, ಉಳಿಸಬೇಕು ಎಂಬ ಆಸೆಯೂ ಇರುವುದಿಲ್ಲ.
ಹೊರೆಯೂ ಅಲ್ಲ, ಮುಜುಗರವೂ ಸಲ್ಲ
ಸಂಕಷ್ಟದಲ್ಲಿರುವಾಗ ಹಣ ಕೇಳುವುದೆಂದರೆ ಯಾರಿಗಾದರೂ ಮುಜುಗರದ ಸಂಗತಿಯೇ. ಆದರೆ ಈ ಗ್ರೂಪ್‌ನಿಂದ ಹಣ ಪಡೆದವರಿಗೆ ಯಾವುದೇ ಮುಜುಗರ ಆಗ ಬಾರದು. ಸಹಾಯ ಪಡೆದವ ರನ್ನು ಗೌರವಯುತವಾಗಿಯೇ ನೋಡ ಬೇಕು ಎನ್ನುವುದು ಈ ಗ್ರೂಪ್‌ನ ಪ್ರಮುಖ ಧ್ಯೇಯ. ಹಣ ಪಡೆದ ವರು ಅದನ್ನು ಹಿಂದಿರುಗಿಸಬೇಕಾ ಗಿಲ್ಲ. ಅದೇ ರೀತಿ ಬರೀ 200 ರೂ. ಮಾತ್ರವಾದ್ದರಿಂದ ಕೊಡುವವರಿಗೂ ಅದು ಹೊರೆ ಅನಿಸುವುದಿಲ್ಲ.
ಕರ್ನಾಟಕದಲ್ಲಿ ಕಡಿಮೆ ಎಂದರೂ ಹತ್ತು ಸಾವಿರಕ್ಕೂ ಅಧಿಕ ಪತ್ರಕರ್ತರಿದ್ದಾರೆ. ಆ ಪೈಕಿ ಸದ್ಯ 200+ ಸದಸ್ಯರಷ್ಟೇ ಈ ಗ್ರೂಪಿನಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಅವರಿಂದ ಪ್ರತಿ ತಿಂಗಳಲ್ಲಿ ಇಬ್ಬರು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ತಲಾ 20 ಸಾವಿರಕ್ಕೂ ಬೆಚ್ಚು ಮೊತ್ತ ಸಹಾಯದ ರೂಪದಲ್ಲಿ ಸಿಗುತ್ತಿದೆ. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕೈಜೋಡಿಸಿದರೆ “ಆಪದ್ಭಾಂಧವ’ದ ಶಕ್ತಿ ಅಗಾಧ ವಾಗುತ್ತದೆ. ಸಂಕಷ್ಟದಲ್ಲಿರುವ ಪತ್ರಕರ್ತ ಬಂಧುವಿನ ವೈದ್ಯಕೀಯ ವೆಚ್ಚಕ್ಕೆ ಅದೆಷ್ಟೇ ಲಕ್ಷವಾದರೂ ಸುಲಭದಲ್ಲಿ ಸಂಗ್ರಹಿಸಿ ನೀಡ ಬಹುದು. ಹೀಗಾಗಿ ಈ ಗ್ರೂಪಿಗೆ ಇನ್ನಷ್ಟು ಪತ್ರಕರ್ತರು ಸೇರಿಕೊಂಡು ನಿಜದ ಅರ್ಥದಲ್ಲಿ “ಆಪದ್ಭಾಂಧವ’ ರಾಗಬೇಕಿದೆ.
ಈ ಗುಂಪಿಗೆ ಸೇರ ಬಯಸುವವರು: 7676312727 ಮೊಬೈಲ್‌ಗೆ ಸಂಪರ್ಕಿಸಬಹುದು.
-ಗೀತಾಂಜಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.